ಬೆಂಗಳೂರು : ವಿಧಾನಸೌಧ ವೆಸ್ಟ್ಗೇಟ್ನಲ್ಲಿ ಗುತ್ತಿಗೆದಾರರೊಬ್ಬರಿಂದ 25 ಲಕ್ಷ ರೂಪಾಯಿಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಹಣದ ತಂದಿದ್ದ ವ್ಯಕ್ತಿಯನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಸಚಿವರೊಬ್ಬರಿಗೆ ಕೊಡಲು ಆತ ಹಣ ತಂದಿದ್ದರು ಎಂದು ತಿಳಿದುಬಂದಿದೆ. ಕಾರಿನಲ್ಲಿ ಹಣ ತಂದಿದ್ದು, ವೆಸ್ಟ್ ಗೇಟ್ನಲ್ಲಿ ತಪಾಸಣೆ ನಡೆಸುವಾಗ ಹಣ ಪತ್ತೆಯಾಗಿದೆ. ಕೂಡಲೇ ವಿಧಾನಸೌಧ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಬಳಿಕವಷ್ಟೇ ಸ್ಪಷ್ಟತೆ ಸಿಗಲಿದೆ.
ಸಚಿವರಿಗೆ ಕೊಡಲು ತಂದಿದ್ದಾರೆ ಎನ್ನಲಾದ 25 ಲಕ್ಷ ವಶ..!
TRENDING ARTICLES