Saturday, April 20, 2024

ಶರಣಾಗಲು ಹೆಚ್ಚಿನ ಕಾಲಾವಧಿ: ಸಜ್ಜನ್​ ಅರ್ಜಿ ತಿರಸ್ಕಾರ

ನವದೆಹಲಿ: 1984ರ ಸಿಖ್ ವಿರೋಧಿ ದಂಗೆಯ ಪ್ರಮುಖ ಆರೋಪಿ ಮಾಜಿ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್​ ಅವರು ಶರಣಾಗಲು ಹೆಚ್ಚುವರಿ ಒಂದು ತಿಂಗಳ ಕಾಲಾವಧಿ ಕೇಳಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾ ಮಾಡಿದೆ.

ತನಗೆ ಮೂವರು ಮಕ್ಕಳು ಹಾಗೂ ಎಂಟು ಜನ ಮೊಮ್ಮಕ್ಕಳಿದ್ದು, ಆಸ್ತಿ ವಿಚಾರವಾದ ಕೆಲಸಗಳನ್ನು ಮುಗಿಸಬೇಕು. ಅದಕ್ಕಾಗಿ ಶರಣಾಗಲು ಜನವರಿ 31ರ ತನಕ ಕಾಲಾವಕಾಶ ಬೇಕೆಂದು ಸಜ್ಜನ್​ ಕುಮಾರ್​ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದ್ರೆ, ಸಜ್ಜನ್ ಕುಮಾರ್ ಮನವಿ ತಳ್ಳಿಹಾಕಿದ ದೆಹಲಿ ಹೈಕೋರ್ಟ್‌ ಡಿಸೆಂಬರ್ 31ರೊಳಗಾಗಿ ಸಜ್ಜನ್ ಕುಮಾರ್ ಶರಣಾಗಲೇ ಬೇಕು ಎಂದು ಆದೇಶಿಸಿದೆ.

ಪ್ರಕರಣದ ಕುರಿತು ಹೈಕೋರ್ಟ್​ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಬೇಕು ಎಂದು ಸಜ್ಜನ್​ ಪರ ವಕೀಲ ತಿಳಿಸಿದ್ದರು. ಸಿಖ್​ ವಿರೋಧಿ ದಂಗೆಯ ಸಮಯದಲ್ಲಿ ರಾಜ್​ನಗರದ ಕುಟುಂಬವೊಂದರ 5 ಜನರನ್ನು ಹತ್ಯೆ ಮಾಡಿದ ಆರೋಪದಲ್ಲಿ ದೆಹಲಿ ಹೈಕೋರ್ಟ್​ ಸಜ್ಜನ್ ಕುಮಾರ್​ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

RELATED ARTICLES

Related Articles

TRENDING ARTICLES