Saturday, November 16, 2024

ಕೋಟಿ ಕೋಟಿಗೆ ಸೇಲಾದ ದುಬೆ, ಚಕ್ರವರ್ತಿ ಯಾರ್ ಗೊತ್ತಾ?

ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಫ್ರಾಂಚೈಸಿಗಳು ಯುವ ಆಟಗಾರರನ್ನು ಟೀಮ್​ಗೆ ಸೇರಿಸಿಕೊಳ್ಳಲು ಉತ್ಸುಕರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಕೆಲವು ಪ್ಲೇಯರ್ಸ್ ಗಳು ಸೇಲಾಗಿಲ್ಲ. ಆದ್ರೆ, ಕೆಲ ಯುವ ಆಟಗಾರರು ಕೋಟಿ ಕೋಟಿಗೆ ಖರೀದಿಯಾಗಿದ್ದಾರೆ. ಅವರುಗಳಲ್ಲಿ ಶಿವಂ ದುಬೆ ಮತ್ತು ವರುಣ್​ ಚಕ್ರವರ್ತಿ ಪ್ರಮುಖರು.
ಶಿವಂ ದುಬೆ ಯಾರು ..?


5 ಕೋಟಿ ರೂಗಳಿಗೆ ರಾಯಲ್​ ಚಾಲೆಂಜರ್ಸ್ ಪಾಲಾದ ಶಿವಂ ದುಬೆ ಮುಂಬೈನ ಆಲ್​ರೌಂಡರ್. ರೈಟ್​ ಆರ್ಮ್ ಬೌಲರ್ ಮತ್ತು ಲೆಫ್ಟ್ ಹ್ಯಾಂಡ್ ಬ್ಯಾಟ್ಸ್​ಮನ್. ಮುಂಬೈ ಟಿ20 ಲೀಗ್​ನಲ್ಲಿ ಬಿಗ್ ಹಿಟ್ ಮೂಲಕ ಗುರುತಿಸಿಕೊಂಡಿದ್ದ ಪ್ಲೇಯರ್. ಕನ್ಸಿಸ್ಟೆಂಟ್ ಪರ್ಫಾರ್ಮೆನ್ಸ್​ ನಿಂದ ಗಮನ ಸೆಳೆದಿರುವ ಯುವ ಆಟಗಾರ. ಮುಂಬೈ ಟಿ20 ಲೀಗ್​ ನಲ್ಲಿ ಪ್ರವೀಣ್ ತಾಂಬೆ ಬೌಲಿಂಗ್ ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್ ಸಿಡಿಸಿದ್ರು. ಅದೇರೀತಿ ರಣಜಿಯಲ್ಲಿ ಬರೋಡ ವಿರುದ್ಧದ ಮ್ಯಾಚ್​ನಲ್ಲಿ ಸ್ವಪ್ನಿಲ್ ಸಿಂಗ್ ಬೌಲಿಂಗ್​ನಲ್ಲಿ ಒಂದೇ ಓವರ್​ನಲ್ಲಿ 5 ಸಿಕ್ಸರ್ ಬಾರಿಸಿದ್ರು.

ವರುಣ್ ಚಕ್ರವರ್ತಿ ಬಗ್ಗೆ ಗೊತ್ತೇ..?


ವರುಣ್​ ಚಕ್ರವರ್ತಿ ತಮಿಳು ನಾಡು ಸ್ಪಿನ್ನರ್. ಬರೋಬ್ಬರಿ 8.4 ಕೋಟಿ ರೂಗಳಿಗೆ ಕಿಂಗ್ಸ್ ಇಲೆವೆಲ್ ಪಂಜಾಬ್ ಟೀಮ್​ಗೆ ಸೇಲಾದ ಯುವ ಬೌಲರ್. 20 ಲಕ್ಷ ಮೂಲ ಬೆಲೆಗೆ ಹರಾಜಿಗಿದ್ದ ಈ ಯುವ ಬೌಲರ್ ಖರೀದಿಗೆ ಫ್ರಾಂಚೈಸಿಗಳು ತಾ ಮುಂದು ನಾ ಮುಂದು ಅಂತ ಮುಂದ್ರೆ ಬಂದ್ರು. ಕೊನೆಯಲ್ಲಿ ಕಿಂಗ್ಸ್ ಇಲೆವೆನ್ ತನ್ನ ತೆಕ್ಕೆಗೆ ಹಾಕಿಕೊಂಡಿತು.
ತನ್ನ 13ನೇ ವಯಸ್ಸಿನಲ್ಲಿ ವಿಕೆಟ್-ಕೀಪರ್ ಬ್ಯಾಟ್ಸ್​ಮನ್ ಆಗಿ ಕ್ರಿಕೆಟ್ ಪ್ರಾಕ್ಟಿಸ್ ಶುರುಮಾಡಿದ್ರು. ಕಾಲೇಜು ಮೆಟ್ಟಿಲೇರಿದ ಮೇಲೆ ಕ್ರಿಕೆಟ್ ಆಡೋದನ್ನು ನಿಲ್ಲಿಸಿದ್ರು. ಪದವಿ ಬಳಿಕ ಮತ್ತೆ ಕ್ರಿಕೆಟ್ ಕಡೆ ಗಮನ ಹರಿಸಿದ್ರು. ಆದ್ರೆ, ವಿಕೆಟ್ ಕೀಪಿಂಗ್ ಬ್ಯಾಟಿಂಗ್ ಗಮನ ಬಿಟ್ಟು, ಹೆಚ್ಚಿನ ಗಮನವನ್ನು ಬೌಲಿಂಗ್ ಕಡೆಗೆ ಹರಿಸಿದ್ರು. ತಮಿಳುನಾಡು ಪ್ರೀಮಿಯರ್ ಲೀಗ್ ನಲ್ಲಿ ಆಡಿದ ಅನುಭವ ಇವರದ್ದು.

RELATED ARTICLES

Related Articles

TRENDING ARTICLES