ಡಿಸೆಂಬರ್ 18ರಂದು (ನಾಳೆ) ನಡೆಯಲಿರುವ ಐಪಿಎಲ್ ಹರಾಜಿಗೆ 8 ಪ್ರಾಂಚೈಸಿಗಳೂ ಭರ್ಜರಿ ಸಿದ್ದತೆ ನಡೆಸಿವೆ. ಜೈಪುರದಲ್ಲಿ ನಡೆಯಲಿರೋ ಹರಾಜಿನಲ್ಲಿ ಎಚ್ಚರಿಕೆಯಿಂದ ಬಿಡ್ ಮಾಡಲು ಎಲ್ಲಾ ಫ್ರಾಂಚೈಸಿಗಳು ಮುಂದಾಗಿದ್ದು, ಯುವ ಪ್ರತಿಭೆಗಳಿಗೆ ಮಣೆ ಹಾಕಲು ನಿರ್ಧರಿಸಿವೆ.
ಈ ಬಾರಿಯ ಹರಾಜಿನಲ್ಲಿ ಒಟ್ಟು 346 ಕ್ರಿಕೆಟಿಗರಿದ್ದು, 2 ಕೋಟಿಯಿಂದ 20 ಲಕ್ಷದ ವರೆಗೆ ಆಟಗಾರರ ಮೂಲ ಬೆಲೆಯನ್ನ ನಿಗಧಿಪಡಿಸಲಾಗಿದೆ. ನಿಗದಿತ ಬೆಲೆಯಲ್ಲಿ ಹರಾಜಿಗೆ ಲಭ್ಯವಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ.
ಹರಾಜಿನಲ್ಲಿ ಲಭ್ಯವಿರುವ ಆಟಗಾರರ ಸಂಖ್ಯೆ
ಮೂಲ ಬೆಲೆ ಭಾರತೀಯರು ವಿದೇಶಿಗರು ಒಟ್ಟು
2 ಕೋಟಿ 00 09 09
1.5ಕೋಟಿ 01 09 10
1 ಕೋಟಿ 04 15 19
75 ಲಕ್ಷ 02 16 18
50 ಲಕ್ಷ 18 44 62
ಅನ್ಕ್ಯಾಪ್ಡ್ ಪ್ಲೇಯರ್ಸ್ (ಇಂಟರ್ ನ್ಯಾಷನಲ್ ಕ್ರಿಕೆಟ್ ಆಡದ ಪ್ಲೇಯರ್ಸ್)
ಮೂಲ ಬೆಲೆ ಭಾರತೀಯರು ವಿದೇಶಿಗರು ಒಟ್ಟು
40 ಲಕ್ಷ 00 07 07
30 ಲಕ್ಷ 05 03 08
20 ಲಕ್ಷ 196 17 213
ಇದಿಷ್ಟು ಹರಾಜಿನಲ್ಲಿ ಲಭ್ಯವಿರುವ ಆಟಗಾರರ ಸಂಖ್ಯೆಯಾದ್ರೆ, ಐಪಿಎಲ್ನ ತಂಡಗಳು ಖರೀದಿಸಬಹುದಾದ ಗರಿಷ್ಠ ಆಟಗಾರರ ಸಂಖ್ಯೆ ಹೀಗಿದೆ.
ತಂಡಗಳು ಖರೀದಿಸಬಹುದಾದ ಆಟಗಾರರ ಸಂಖ್ಯೆ
ತಂಡ ಭಾರತೀಯರು ವಿದೇಶಿ
CSK 02 00
DD 07 03
KXIP 11 04
KKR 07 05
MI 06 01
RR 06 03
RCB 08 02
SRH 03 02