Monday, January 27, 2025

ವರ್ಲ್ಡ್​​ ಟೂರ್​ ಫೈನಲ್​ನಲ್ಲಿ ಸಿಂಧು ಚಾಂಪಿಯನ್

ಭಾರತದ ಬ್ಯಾಡ್ಮಿಂಟನ್​ ತಾರೆ ಪಿವಿ ಸಿಂಧು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಬಿಡಬ್ಲೂಎಫ್ ವರ್ಲ್ಡ್​​ ಟೂರ್​ ಫೈನಲ್​ನ ಅಂತಿಮ ಹಣಾಹಣಿಯಲ್ಲಿ ಜಪಾನ್​ನ ನೋಜೊಮಿ ಒಕುಹರಾರನ್ನ ಸೋಲಿಸಿದ ಸಿಂಧು ಚಾಂಪಿಯನ್​ ಆಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಈ ಟೂರ್ನಮೆಂಟ್​ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಸಿಂಧು ಪಾತ್ರರಾಗಿದ್ದಾರೆ.

ವಿಶ್ವ ರ್ಯಾಂಕಿಂಗ್​ನಲ್ಲಿ 6ನೇ ಸ್ಥಾನದಲ್ಲಿರುವ ಸಿಂಧು ಒಕುಹರಾ ರನ್ನ 21-19,21-17ರ ಸೆಟ್​​ಗಳಿಂದ ಮಣಿಸಿ ಈ ವರ್ಷದ ಮೊದಲ ಫೈನಲ್​ ಪ್ರಶಸ್ತಿ ಜಯಸಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಫೈನಲ್​ ಪ್ರವೇಶಿಸಿದ್ದ ಸಿಂಧು ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ರು. ಈ ವರ್ಷದಲ್ಲಿ ವರ್ಲ್ಡ್​​ ಚಾಂಪಿಯನ್​ಷಿಪ್, ಕಾಮನ್​ವೆಲ್ತ್​ ಗೇಮ್ಸ್​​, ಸೇರಿದಂತೆ ಹಲವು ಟೂರ್ನಿಗಳಲ್ಲಿ ಪೈನಲ್​ ಪ್ರವೇಶಿಸಿದ್ರು ಕೂಡ ಚಾಂಪಿಯನ್​ ಆಗುವಲ್ಲಿ ಎಡವಿದ್ರು. ಅಂತಿಮವಾಗಿ ಇಂದಿನ ಪಂದ್ಯವನ್ನು ಜಯಿಸುವ ಮೂಲಕ ವೃತ್ತಿ ಜೀವನದ 14ನೇ ಪ್ರಶಸ್ತಿ ಜಯಸಿದ್ರು.

RELATED ARTICLES

Related Articles

TRENDING ARTICLES