Wednesday, September 18, 2024

121 ಶಾಸಕರ ಪಟ್ಟಿಯೊಂದಿಗೆ ಗವರ್ನರ್ ಭೇಟಿಯಾದ ಕಮಲ್​ನಾಥ್

ಭೋಪಾಲ್ : ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸೋಕೆ ರೆಡಿಯಾಗಿದೆ. ಅತಂತ್ರಸ್ಥಿತಿ ನಿರ್ಮಾಣವಾಗಿದ್ದರಿಂದ ಹೊಸ ಸರ್ಕಾರ ರಚನೆಗೆ ಉಂಟಾಗಿದ್ದ ಗೊಂದಲಕ್ಕೆ ತೆರೆಬಿದ್ದಿದೆ.
ಕಾಂಗ್ರೆಸ್ ನಾಯಕ ಕಮಲ್​ನಾಥ್ ಬುಧವಾರ 121 ಶಾಸಕರ ಪಟ್ಟಿಯೊಂದಿಗೆ ರಾಜ್ಯಪಾಲರಾದ ಆನಂದಿಬೇನ್ ಪಟೇಲ್ ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕುಮಂಡಿಸಿದ್ರು. ತಮ್ಮ ನಿವಾಸದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಶಾಸಕರೊಂದಿಗೆ ಸಭೆ ನಡೆಸಿ, ತದನಂತ ಗವರ್ನರ್ ಅವರನ್ನು ಭೇಟಿ ಮಾಡಿದ್ರು.
ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದಿದ್ದು, ನಾಲ್ವರು ಪಕ್ಷೇತರರು, ಬಿಎಸ್​ಪಿಯ ಇಬ್ಬರು ಮತ್ತು ಎಸ್​ಪಿಯ ಒಬ್ಬರು ಶಾಸಕರು ಕಾಂಗ್ರೆಸ್​ಗೆ ಸಪೋರ್ಟ್ ಮಾಡಿದ್ದಾರೆ. 230 ಸದಸ್ಯಬಲ ಇರೋ ಮಧ್ಯಪ್ರದೇಶದಲ್ಲಿ ಸರ್ಕಾರ ರಚಿಸಲು 116 ಸ್ಥಾನಗಳ ಅಗತ್ಯವಿದ್ದು, 114 ಸ್ಥಾನ ಪಡೆದಿರೋ ಕಾಂಗ್ರೆಸ್ ಬಿಎಸ್​ಪಿ, ಎಸ್​ಪಿ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲಿದೆ.

ಜನರ ತೀರ್ಪನ್ನು ಒಪ್ಪಿಕೊಳ್ತೀವಿ : ಶಿವರಾಜ್ ಸಿಂಗ್ ಚವ್ಹಾಣ್ ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ಬಳಿಕ ಮಾತನಾಡಿದ ಅವರು ಜನರ ತೀರ್ಪನ್ನು ಒಪ್ಪಿಕೊಳ್ತೀವಿ ಅಂದ್ರು. ಜೊತೆಗೆ ಕಮಲನಾಥ್​ ಅವ್ರಿಗೆ ಶುಭಾಶಯ ಕೋರಿದ್ರು.

RELATED ARTICLES

Related Articles

TRENDING ARTICLES