ಆಡಳಿತಾರೂಢ ಬಿಜೆಪಿಗೆ ಈ ಬಾರಿಯ ವಿಧಾನಸಭಾ ಚುನಾವಣೆ ತೀವ್ರ ಮುಜುಗರ ಉಂಟು ಮಾಡಿದೆ, ಕಾಂಗ್ರೆಸ್ ರಾಜಸ್ಥಾನದಲ್ಲಿ ಅಧಿಕಾರಕ್ಕೆ ಏರಿದೆ. ಬಿಜೆಪಿಯ ಮಹಾರಾಣಿ ವಸುಂಧರಾ ರಾಜೇ ರಾಜ್ಯವನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎನ್ನುವ ಚುನಾವಣೋತ್ತರ ಸಮೀಕ್ಷೆಗಳು ಸರಿ ಎಂದು ಇಂದಿನ ಫಲಿತಾಂಶಗಳು ತೋರಿಸುತ್ತಿದೆ, ಆಡಳಿತಾರೂಢ ಬಿಜೆಪಿ ಸರ್ಕಾರದ ವೈಫಲ್ಯ ರಾಜಸ್ಥಾನದಲ್ಲಿ ಕಾಂಗ್ರೆಸ್ ಗೆಲುವಾಗಿ ಪರಿವರ್ತನೆಯಾಗುತ್ತಿದೆ.
ಒಟ್ಟು 230 ಕ್ಷೇತ್ರಗಳಲ್ಲಿ ಕಾಂಗ್ರೆಸ್ 100 ಸ್ಥಾನ ಗೆದ್ದು, ಸರಳ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿಯುತ್ತಿದೆ. ಬಿಜೆಪಿ ಕೇವಲ 73 ಸ್ಥಾನಗಳಿಗೆ ತೃಪ್ತಿಪಟ್ಟಿದೆ.
ಸಿಎಂ ವಸುಂಧರಾ ರಾಜೇ ಸರ್ವಾಧಿಕಾರಿ ಮನೋವೃತ್ತಿ, ಬಿಜೆಪಿ ಮುಖಂಡರೇ ಚುನಾವಣೆಗೂ ಮುನ್ನ ಎದ್ದ ಬಂಡಾಯ , ಟಿಕೆಟ್ ಸಿಗದ ಕಾರಣ 21 ಶಾಸಕರು ಸಿಎಂ ವಿರುದ್ಧವೇ ಪ್ರಚಾರ ಮಾಡಿದ್ದು, ರಾಜ್ಯದಲ್ಲಿದ್ದ ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇವೇ ಮೊದಲಾದವುಗಳನ್ನು ಸಮರ್ಪಕವಾಗಿ ಬಳಸಿಕೊಂಡ ಕಾಂಗ್ರೆಸ್ ಗೆಲುವಿನ ನಗೆಬೀರಿತು.
ಗುರ್ಜರ ಸಮುದಾಯದ ಸಚಿನ್ ಪೈಲಟ್, ಮಾಲಿ ಸಮುದಾಯದ ಅಶೋಕ್ ಗೆಹ್ಲೋಟ್ ಈ ಇಬ್ಬರು ನಾಯಕರು ಸೇರಿ ಕಾಂಗ್ರೆಸ್ ಗೆಲುವಿಗೆ ಶ್ರಮಿಸಿದ್ರು.