Saturday, April 20, 2024

ಮೆಗಾ ‘ಫೈವ್’ ಲೈವ್ ಅಪ್​ಡೇಟ್ಸ್

ಯೂಟ್ಯೂಬ್ ಲೈವ್

ಫೇಸ್ ಬುಕ್ ಲೈವ್ 

ಮಿಜೋರಾಂ ಎಮ್ಎನ್​ಎಫ್ ತೆಕ್ಕೆಗೆ; ಮುಖ್ಯಮಂತ್ರಿಗೇ ಸೋಲು..!

ರಾಜಸ್ಥಾನದಲ್ಲಿ ಕಾಂಗ್ರೆಸ್​​ಗೆ ಜಯ; ಆಡಳಿತರೂಢ ಬಿಜೆಪಿಗೆ ಮುಖಭಂಗ

ತೆಲಂಗಾಣದಲ್ಲಿ ಮತ್ತೆ ಟಿಆರ್​ಎಸ್ ಅಧಿಕಾರಕ್ಕೆ

ಬಿಜೆಪಿಯ 15 ವರ್ಷದ ಆಡಳಿತ ಕೊನೆಗೊಳಿಸಿದ ಕಾಂಗ್ರೆಸ್..!

ಸರ್ಕಾರ ರಚನೆಗೆ ‘ಕೈ’, ‘ಕಮಲ’ ಕಸರತ್ತು..!

ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎನ್ನಲಾಗುತ್ತಿರುವ 5 ರಾಜ್ಯಗಳ (ತೆಲಂಗಾಣ. ಮಧ್ಯಪ್ರದೇಶ, ರಾಜಸ್ಥಾನ, ಮಿಜೋರಾಂ ಮತ್ತು ಛತ್ತೀಸ್​ಗಢ) ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಅಭ್ಯರ್ಥಿಗಳ ಎದೆಯಲ್ಲಿ ನಡುಕ ಶುರುವಾಗಿದೆ. ಜೊತೆಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

5 ರಾಜ್ಯಗಳಲ್ಲಿ ಒಟ್ಟು 8,500 ಅಭ್ಯರ್ಥಿಗಳು ಚುನಾವಣೆಯನ್ನು ಎದುರಿಸಿದ್ದರು. ಅಭ್ಯರ್ಥಿಗಳ ಸೋಲು ಗೆಲುವು 1.70 ಲಕ್ಷ ಇವಿಎಂನಲ್ಲಿ ಭದ್ರವಾಗಿದೆ.  ಇವತ್ತಿನ ಫಲಿತಾಂಶ ಕಾಂಗ್ರೆಸ್​ ಹಾಗೂ ಬಿಜೆಪಿಗೆ ಪ್ರತಿಷ್ಠೆಯಾಗಿದ್ದು, ಎರಡೂ ಪಕ್ಷಗಳು ಗೆಲುವಿಗಾಗಿ ಹಾತೊರಿಯುತ್ತಿವೆ. ಈಗಾಗಲೇ ಪಂಚರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಕೌಂಟ್​ಡೌನ್​ ಶುರುವಾಗಿದ್ದು, ಇಡೀ ದೇಶದ ಚಿತ್ತ ಫಲಿತಾಂಶದತ್ತ ನೆಟ್ಟಿದೆ. ಈ ಮೆಗಾ’ಫೈವ್​’ನ, ಕ್ಷಣ ಕ್ಷಣದ ಅಪ್ ಮಾಹಿತಿ ಇಲ್ಲಿದೆ. 

                         ತೆಲಂಗಾಣ

ತೆಲಂಗಾಣದಲ್ಲಿ ಮತ್ತೆ ಟಿಆರ್​ಎಸ್ ಅಧಿಕಾರಕ್ಕೆ

ತೆಲಂಗಾಣದಲ್ಲಿ ಮತ್ತೆ ಟಿಆರ್​ಎಸ್ ಅಧಿಕಾರಕ್ಕೆ-ತೆಲಂಗಾಣದಲ್ಲಿ ಒಟ್ಟು 119 ಕ್ಷೇತ್ರಗಳಲ್ಲಿ ಟಿಆರ್​ಎಸ್ 88 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ 21ಕ್ಕೆ ತೃಪ್ತವಾಗಿದೆ. 

5.44 ಸಂಜೆ : ಟಿಆರ್​ಎಸ್ 83 ಕ್ಷೇತ್ರದಲ್ಲಿ ಗೆದ್ದಿದ್ದು ಈಗಾಲೇ ಮ್ಯಾಜಿಕ್ ನಂಬರ್ 60ನ್ನು ಕ್ರಾಸ್ ಮಾಡಿದೆ. ಈ ಮೂಲಕ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಮತ್ತೊಮ್ಮೆ ತೆಲಂಗಾಣದಲ್ಲಿ ಅಧಿಕಾರ ನಡೆಸಲಿದೆ. ಇನ್ನೂ 4 ಕ್ಷೇತ್ರಗಳಲ್ಲಿ ಇದೇ ಟಿಆರ್​ಎಸ್ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್​ 18ರಲ್ಲಿ ಗೆದ್ದಿದ್ದು, 3ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

4.23 ಮಧ್ಯಾಹ್ನ : ಟಿಆರ್ ಎಸ್ ಭರ್ಜರಿ ಗೆಲುವಿನತ್ತ. 75 ಕ್ಷೇತ್ರಗಳಲ್ಲಿ ಗೆಲುವು, 11ರಲ್ಲಿ ಮುನ್ನಡೆ. ಕಾಂಗ್ರೆಸ್ 17ರಲ್ಲಿ ಗೆಲುವು, 5ರಲ್ಲಿ ಮುನ್ನಡೆ.

4.04 ಮಧ್ಯಾಹ್ನ : 70 ಕ್ಷೇತ್ರಗಳಲ್ಲಿ ಗೆಲುವಿನ ನಗೆಬೀರಿದ ಟಿಆರ್​ಎಸ್. ಇನ್ನೂ 17 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮ್ಯಾಜಿಕ್ ನಂಬರ್ 60 ಆಗಿದ್ದು, ಈಗಾಗಲೇ ಟಿಆರ್​ಎಸ್ ಸರ್ಕಾರ ರಚಿಸಲು ಅಧಿಕಾರಯುತ ಸ್ಥಾನವನ್ನು ಪಡೆದಿದೆ.

3.21 ಮಧ್ಯಾಹ್ನ : ಟಿಆರ್​ಎಸ್​ 33 ಸ್ಥಾನಗಳಲ್ಲಿ ಮುನ್ನಡೆ, 54 ಸ್ಥಾನಗಳಲ್ಲಿ ಗೆಲುವು. ಕಾಂಗ್ರೆಸ್ + 8ರಲ್ಲಿ ಮುನ್ನಡೆ, 14ರಲ್ಲಿ ಗೆಲುವು

3.06 ಮಧ್ಯಾಹ್ನ : ಟಿಆರ್​ಎಸ್​ 33 ಸ್ಥಾನಗಳಲ್ಲಿ ಮುನ್ನಡೆ, 54 ಸ್ಥಾನಗಳಲ್ಲಿ ಗೆಲುವು. ಕಾಂಗ್ರೆಸ್ + 8ರಲ್ಲಿ ಮುನ್ನಡೆ, 14ರಲ್ಲಿ ಗೆಲುವು. ಇತರೆ 4 ಲೀಡ್, 6 ವಿನ್.

2.17 ಮಧ್ಯಾಹ್ನ : ಟಿಆರ್​ಎಸ್ ಗೆಲುವು-40, ಮುನ್ನಡೆ-46. ಕಾಂಗ್ರೆಸ್​ ಮುನ್ನಡೆ-13, ಗೆಲುವು-10, ಇತರೆ ಮುನ್ನಡೆ-6, ಗೆಲುವು-4

1.52 ಮಧ್ಯಾಹ್ನ : ಟಿಆರ್​ಎಸ್ ಮುನ್ನಡೆ 54, ಗೆಲುವು 32. ಕಾಂಗ್ರೆಸ್​ ಮುನ್ನಡೆ 18, ಗೆಲುವು 5. ಇತರೆ 6 ಮುನ್ನಡೆ, 4 ಗೆಲುವು.

1.40 ಮಧ್ಯಾಹ್ನ : ಟಿಆರ್​ಎಸ್ 61ರಲ್ಲಿ ಮುನ್ನಡೆ, 25ರಲ್ಲಿ ಗೆಲುವು. ಕಾಂಗ್ರೆಸ್​ 19 ಮುನ್ನಡೆ, 4ರಲ್ಲಿ ಗೆಲುವು. ಇತರೆ 6ರಲ್ಲಿ ಮುನ್ನಡೆ, 4ರಲ್ಲಿ ಗೆಲುವು.

1.08 ಮಧ್ಯಾಹ್ನ : ಟಿಆರ್ ಎಸ್ 73ರಲ್ಲಿ ಮುನ್ನಡೆ, 14ರಲ್ಲಿ ಗೆಲುವು. ಕಾಂಗ್ರೆಸ್+ 20ರಲ್ಲಿ ಮುನ್ನಡೆ. 3ರಲ್ಲಿ ಕಾಂಗ್ರೆಸ್​. ಇತರೆ 6ರಲ್ಲಿ ಮುನ್ನಡೆ, 3ರಲ್ಲಿ ಗೆಲುವು.

12.53 ಮಧ್ಯಾಹ್ನ : ಟಿಆರ್ ಎಸ್ 77ರಲ್ಲಿ ಮುನ್ನಡೆ, 10ರಲ್ಲಿ ಗೆಲುವು, ಕಾಂಗ್ರೆಸ್ 21ರಲ್ಲಿ ಮುನ್ನಡೆ, 2ರಲ್ಲಿ ಗೆಲವು, ಇತರೆ 6 ಮುನ್ನಡೆ, 3ರಲ್ಲಿ ಮುನ್ನಡೆ.

12.38 ಮಧ್ಯಾಹ್ನ : ಟಿಆರ್​ಎಸ್ 82ರಲ್ಲಿ ಮುನ್ನಡೆ, 7ರಲ್ಲಿ ಗೆಲುವು. ಕಾಂಗ್ರೆಸ್ 20ರಲ್ಲಿ ಮುನ್ನಡೆ, 1ರಲ್ಲಿ ಗೆಲುವು. ಇತರೆ 6ರಲ್ಲಿ ಮುನ್ನಡೆ, 3ರಲ್ಲಿ ಗೆಲುವು.

12.20 ಮಧ್ಯಾಹ್ನ : ಟಿಆರ್​ಎಸ್ 83ರಲ್ಲಿ ಮುನ್ನಡೆ, 7ರಲ್ಲಿ ಗೆಲುವು. ಕಾಂಗ್ರೆಸ್​+ 19ರಲ್ಲಿ ಮುನ್ನಡೆ, 1ರಲ್ಲಿ ಗೆಲುವು. ಇತರೆ 7ರಲ್ಲಿ ಮುನ್ನಡೆ, 2 ರಲ್ಲಿ ಗೆಲುವು.

12.00 ಮಧ್ಯಾಹ್ನ : ಟಿಆರ್​ಎಸ್ 84ರಲ್ಲಿ ಮುನ್ನಡೆ, 5ರಲ್ಲಿ ಗೆಲುವು. ಕಾಂಗ್ರೆಸ್ + 20ರಲ್ಲಿ ಮುನ್ನಡೆ, 1ರಲ್ಲಿ ಗೆಲುವು. ಇತರೆ 8ರಲ್ಲಿ ಮುನ್ನಡೆ, 1ರಲ್ಲಿ ಜಯ.

11.50 ಬೆಳಗ್ಗೆ : ಟಿಆರ್​ ಎಸ್ 88 ರಲ್ಲಿ ಮುನ್ನಡೆ 3ರಲ್ಲಿ ಗೆಲುವು. ಕಾಂಗ್ರೆಸ್​ 19ರಲ್ಲಿ ಮುನ್ನಡೆ. ಇತರೆ 8ರಲ್ಲಿ ಮುನ್ನಡೆ 1ರಲ್ಲಿ ಗೆಲುವು.

11.39 ಬೆಳಗ್ಗೆ : ಟಿಆರ್ ಎಸ್ 90, ಕಾಂಗ್ರೆಸ್​ 21, ಬಿಜೆಪಿ 1, ಇತರೆ 7ರಲ್ಲಿ ಮುನ್ನಡೆ.

11. 32 ಬೆಳಗ್ಗೆ : ಟಿಆರ್​ಎಸ್ 90, ಕಾಂಗ್ರೆಸ್​+ 21, ಬಿಜೆಪಿ 1, ಇತರೆ 7 ಮುನ್ನಡೆ.

10.51 ಬೆಳಗ್ಗೆ : ಟಿಆರ್​ಎಸ್ 86, ಕಾಂಗ್ರೆಸ್​+22, ಬಿಜೆಪಿ 5, ಇತರೆ 6ರಲ್ಲಿ ಮುನ್ನಡೆ.

10.34 ಬೆಳಗ್ಗೆ : ಟಿಆರ್​ಎಸ್ 86, ಕಾಂಗ್ರೆಸ್​ + 21, ಬಿಜೆಪಿ 6, ಇತರೆ 6ರಲ್ಲಿ ಮುನ್ನಡೆ.

10.21 ಬೆಳಗ್ಗೆ : ಟಿಆರ್​ಎಸ್ 83, ಕಾಂಗ್ರೆಸ್​+  24, ಬಿಜೆಪಿ 6, ಇತರೆ 6ರಲ್ಲಿ ಮುನ್ನಡೆ.

10.13 ಬೆಳಗ್ಗೆ : ಟಿಆರ್​ಎಸ್ 84, ಕಾಂಗ್ರೆಸ್​+ 23, ಬಿಜೆಪಿ 6, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

9.59 ಬೆಳಗ್ಗೆ : ಟಿಆರ್​ಎಸ್ 82, ಕಾಂಗ್ರೆಸ್​ +25,  ಬಿಜೆಪಿ 6, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

9.52 ಬೆಳಗ್ಗೆ : ಟಿಆರ್​ಎಸ್ 80, ಕಾಂಗ್ರೆಸ್​ + 27, ಬಿಜೆಪಿ 5, ಇತರೆ 5ರಲ್ಲಿ ಮುನ್ನಡೆ ಸಾಧಿಸಿದ್ದಾರೆ.

9.47 ಬೆಳಗ್ಗೆ : ಟಿಆರ್​ಎಸ್​ 80, ಕಾಂಗ್ರೆಸ್​ 26, ಬಿಜೆಪಿ 6, ಇತರೆ 5ರಲ್ಲಿ ಮುನ್ನಡೆ.

9.38 ಬೆಳಗ್ಗೆ : ಟಿಆರ್​ಎಸ್ 80, ಕಾಂಗ್ರೆಸ್​+25, ಬಿಜೆಪಿ 6, ಇತರೆ 5

9.31 ಬೆಳಗ್ಗೆ : ಟಿಆರ್ ಎಸ್ 83, ಕಾಂಗ್ರೆಸ್+22, ಬಿಜೆಪಿ 5ರಲ್ಲಿ ಮುನ್ನಡೆ.

9.13 ಬೆಳಗ್ಗೆ : ಟಿಆರ್​ಎಸ್ 67, ಕಾಂಗ್ರೆಸ್+21, ಬಿಜೆಪಿ 3

9.05 ಬೆಳಗ್ಗೆ : ಟಿಆರ್​ಎಸ್ 51, ಕಾಂಗ್ರೆಸ್ +17, ಬಿಜೆಪಿ 3

8.55 ಬೆಳಗ್ಗೆ : ಟಿಆರ್ ಎಸ್ 38, ಕಾಂಗ್ರೆಸ್+16, ಬಿಜೆಪಿ 3

8.45 ಬೆಳಗ್ಗೆ : ಟಿಆರ್ ಎಸ್ 11, ಕಾಂಗ್ರೆಸ್ 10 ಕ್ಷೇತ್ರಗಳಲ್ಲಿ ಮುನ್ನಡೆ.

8.15 ಬೆಳಗ್ಗೆ : 3 ಕ್ಷೇತ್ರಗಳಲ್ಲಿ ಟಿಆರ್ ಎಸ್ ಮುನ್ನಡೆ.

7.55 ಬೆಳಗ್ಗೆ : ಮತ ಎಣಿಕೆ ಆರಂಭ

ತೆಲಂಗಾಣದಲ್ಲಿ ಒಟ್ಟು 43 ಕೇಂದ್ರಗಳಲ್ಲಿ ಮತ ಎಣಿಕೆಯಾಗಲಿದ್ದು, ಪ್ರತಿ ಮತಎಣಿಕೆ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 3 ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಮತಎಣಿಕೆ ಕೇಂದ್ರದಲ್ಲಿ ಸಿಸಿಟಿವಿ ಕ್ಯಾಮರಗಳು ಸಹ ಅಳವಡಿಸಾಗಿದೆ. ಜೊತೆಗೆ ಮತ ಎಣಿಕೆಯ ವಿಡಿಯೋ ಚಿತ್ರೀಕರಣಕ್ಕೂ ಸಹ ಅವಕಾಶವನ್ನು ನೀಡಲಾಗಿದೆ.

ಒಟ್ಟು ಕ್ಷೇತ್ರ-119, ಮ್ಯಾಜಿಕ್ ನಂಬರ್-60

ಘಟಾನುಘಟಿಗಳು
ಅಭ್ಯರ್ಥಿ : ಉತ್ತಮ್ ಕುಮಾರ್ ರೆಡ್ಡಿ
ಪಕ್ಷ : ಕಾಂಗ್ರೆಸ್
ಕ್ಷೇತ್ರ : ಹುಜುರ್‍ನಗರ್
ತೆಲಂಗಾಣ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ಉತ್ತಮ ಕುಮಾರ್ ರೆಡ್ಡಿ ಅವರು 5 ಬಾರಿ ಆಂಧ್ರ, ತೆಲಂಗಾಣದಿಂದ ಶಾಸನಸಭೆಗೆ ಆಯ್ಕೆ ಆಗಿದ್ದಾರೆ. 1999, 2004, 2009, 2014ರಲ್ಲಿ ಕೊಡಾಡ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು, ಈ ಬಾರಿ ಹುಜುರ್‍ನಗರ್ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಕೊಡಾಡ್ ಕ್ಷೇತ್ರದಿಂದ ಇವರ ಪತ್ನಿ ಪದ್ಮಾವತಿ ಕೂಡ 2014ರಲ್ಲಿ ಶಾಸಕರಾಗಿ ಆಯ್ಕೆ ಆಗಿದ್ರು. ಈ ಬಾರಿ ಚುನಾವಣಾ ಕಣದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಉತ್ತಮಕುಮಾರ್ ರೆಡ್ಡಿ ಭಾರತೀಯ ವಾಯುಪಡೆ ಪೈಲಟ್ ಆಗಿದ್ದರು ಅನ್ನೋದನ್ನು ಸ್ಮರಿಸಬಹುದು.

ಅಭ್ಯರ್ಥಿ : ಕೆ.ಟಿ.ರಾಮರಾವ್
ಪಕ್ಷ : ಟಿಆರ್‍ಎಸ್
ಕ್ಷೇತ್ರ : ಸಿರ್ಸಿಲ್ಲಾ

ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಕೆಟಿಆರ್ ಎಂದೇ ಖ್ಯಾತಿ ಪಡೆದಿರುವ ಕೆ.ಟಿ ರಾಮರಾವ್ ಅವರು ತೆಲಂಗಾಣ ಕಣದಲ್ಲಿರುವ ಪ್ರಮುಖ ಕ್ಯಾಂಡಿಡೇಟ್. ಕೆಸಿಆರ್ ಸರ್ಕಾರದಲ್ಲಿ ಐಟಿ-ಬಿಟಿ ಸಚಿವರಾಗಿ ಕಾರ್ಯನಿರ್ವವಣೆ ಮಾಡಿದ್ದ ಕೆಟಿಆರ್ ಅವರು ಸಿಎಂ ಕೆ.ಸಿ. ಚಂದ್ರಶೇಖರ್ ರಾವ್ ಅವರ ಪುತ್ರ. ಸತತ 3 ಬಾರಿ ಸಿರ್ಸಿಲಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರು.  2014ರಲ್ಲಿ 53 ಸಾವಿರ ಮತಗಳಿಂದ ಜಯ ಸಾಧಿಸಿದ್ದ ಇವರು ಈ ಬಾರಿಯೂ ಸಿರ್ಸಿಲಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಅಭ್ಯರ್ಥಿ : ಎ. ರೇವಂತ್ ರೆಡ್ಡಿ

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಕೋಡಂಗಲ್

ತೆಲಂಗಾಣ ಕಾಂಗ್ರೆಸ್ ಘಟಕದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿರುವ ಎ.ರೇವಂತ್ ರೆಡ್ಡಿ ತೆಲಂಗಾಣದ ಪ್ರಮುಖ ಕ್ಯಾಂಡಿಡೇಟ್​ಗಳಲ್ಲಿ ಒಬ್ಬರು. ವಿಕಾರಾಬಾದ್ ಜಿಲ್ಲೆಗೆ ಸೇರಿದ ಕೊಡಂಗಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಕಳೆದ ಸೆಪ್ಪಂಬರ್​ನಲ್ಲಿ ಐಟಿ ರೈಡ್‍ಗೆ ಒಳಗಾಗಿದ್ದರು. ರೆಡ್ಡಿ ನಿವಾಸದ ಮೇಲೆ ಐಟಿ ದಾಳಿ ವೇಳೆ ಮಹತ್ವದ ದಾಖಲೆಗಳು ಸಿಕ್ಕಿದ್ದನ್ನು ಈ ವೇಳೆ ಸ್ಮರಿಸಬಹುದು.

ಅಭ್ಯರ್ಥಿ : ಅಕ್ಬರುದ್ದೀನ್ ಓವೈಸಿ

ಪಕ್ಷ : ಎಐಎಂಐಎಂ

ಕ್ಷೇತ್ರ : ಚಂದ್ರಾಯನಗುಟ್ಟ

ಎಐಎಂಐಎಂ ಪಕ್ಷದ ಪ್ರಭಾವಿ ಮುಖಂಡ ಅಕ್ಬರುದ್ದೀನ್ ಓವೈಸಿ.  ಸಂಸದ ಅಸಾದುದ್ದೀನ್ ಓವೈಸಿಯವರ ಸಹೋದರರಾಗಿರೋ ಇವರು 2ನೇ ವರ್ಷದ ಎಂಬಿಬಿಎಸ್ ಓದುವಾಗಲೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದವ್ರು. 1999, 2004, 2009, 2014ರಿಂದಲೂ ಚಂದ್ರಾಯನಗುಟ್ಟ ಮತ ಕ್ಷೇತ್ರದಿಂದ ಸ್ಪರ್ಧಿಸಿರುವ ಇವರು ಈ ಬಾರಿ ಎಐಎಂಐಎಂ ಪಕ್ಷದಿಂದ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಅಭ್ಯರ್ಥಿ : ಕೆ. ಲಕ್ಷ್ಮಣ್
ಪಕ್ಷ : ಬಿಜೆಪಿ
ಕ್ಷೇತ್ರ : ಮುಶೀರಾಬಾದ್

ತೆಲಂಗಾಣದ ಬಿಜೆಪಿ ಘಟಕದ ಅಧ್ಯಕ್ಷರಾಗಿ ಪಕ್ಷದ ಜವಾಬ್ದಾರಿ ನಿರ್ವಹಣೆ ಮಾಡಿರೋ ಕೆ. ಲಕ್ಷ್ಮಣ್ ಅವರು ಮುಶೀರಾಬಾದ್ ಕ್ಷೇತ್ರದ ಮರು ಚುನಾವಣೆಯಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದವರು. ವಿಧಾನಸಭಾ ವಿಸರ್ಜನೆ ಮುನ್ನವೇ ಶಾಸನ ಸಭೆಗೆ ಆಯ್ಕೆಯಾಗಿದ್ರು. ಇವರು ರಾಷ್ಟ್ರೀಯ ನಾಗರಿಕ ನೋಂದಣಿ-ಎನ್‍ಆರ್​ಸಿ ಆಗ್ರಹಿಸಿದ್ದ ಬಿಜೆಪಿ ನಾಯಕ. ಹೈದ್ರಾಬಾದ್ ಉಗ್ರರಿಗೆ ಸ್ವರ್ಗವಾಗಿದೆ ಎಂದು ಆರೋಪಿಸಿದ್ದರು ಈ ಕೆ. ಲಕ್ಷ್ಮಣ್..!

ಅಭ್ಯರ್ಥಿ : ಟಿ. ಹರೀಶ್ ರಾವ್

ಪಕ್ಷ : ಟಿಆರ್‍ಎಸ್

ಕ್ಷೇತ್ರ : ಸಿದ್ದಿಪೇಟ್

ಕೆಸಿಆರ್ ಸರ್ಕಾರದಲ್ಲಿ ನೀರಾವರಿ ಸಚಿವರಾಗಿ ಸೇವೆ ಸಲ್ಲಿಸಿದ್ದ ಅನುಭವ ಟಿ. ಹರೀಶ್ ರಾವ್ ಅವರದ್ದು. ರೂಲಿಂಗ್ ಪಾರ್ಟಿಯಲ್ಲಿ ಟ್ರಬಲ್‍ಶೂಟರ್ ಎಂಬ ಖ್ಯಾತಿ ಇವರದ್ದು. ಸಿದ್ದಿಪೇಟ್ ವಿಧಾನಸಭಾ ಕ್ಷೇತ್ರದಿಂದ 6 ನೇ ಬಾರಿ ಸ್ಪರ್ಧೆ ಮಾಡಿದ್ದಾರೆ. 2004ರಿಂದ ಸೋಲು ಕಾಣದ ಇವರು ಸಿಎಂ ಕೆ. ಚಂದ್ರಶೇಖರ್ ರಾವ್ ಅವರ ಸಹೋದರನ ಪುತ್ರ.

ಅಭ್ಯರ್ಥಿ : ಟಿ. ರಾಜಾ ಸಿಂಗ್
ಪಕ್ಷ : ಬಿಜೆಪಿ
ಕ್ಷೇತ್ರ : ಗೋಶಾಮಹಲ್

ಟಿ. ರಾಜಾ ಸಿಂಗ್ ಸ್ಪರ್ಧೆ ಬಿಜೆಪಿಯಿಂದ ಗೋಶಾಮಹಲ್ ಕ್ಷೇತ್ರದಿಂದ ಚುನಾವಣಾ ಕಣದಲ್ಲಿದ್ದಾರೆ. ಕಟ್ಟಾ ಹಿಂದೂವಾದಿ, ಓವೈಸಿ ಕಡು ವಿರೋಧಿ. ಓವೈಸಿ ವಿರುದ್ಧ ಹೋರಾಟ ನಿಲ್ಲಿಸುವುದಿಲ್ಲ ಎಂದು ಘೋಷಣೆ ಮಾಡಿರೋ ನಾಯಕ.

ಅಭ್ಯರ್ಥಿ : ವಿ. ಪ್ರತಾಪ್ ರೆಡ್ಡಿ

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಗಜ್ವೆಲ್

ಮಾಜಿ ಟಿಡಿಪಿ ನಾಯಕ ವಿ. ಪ್ರತಾಪ ರೆಡ್ಡಿ, ಕಳೆದ ಮೇ ತಿಂಗಳಲ್ಲಿ ಟಿಡಿಪಿ ತೊರೆದು ಕೈಪಾಳಯ ಸೇರಿದ್ದರು. ಸಿಎಂ ಕೆಸಿಆರ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡವರು ಈ ಪ್ರತಾಪ ರೆಡ್ಡಿ.  ಗಜ್ವೆಲ್ ವಿಧಾನಸಭಾ ಕ್ಷೇತ್ರದಿಂದ ಸತತ 2 ಬಾರಿ ಸ್ಪರ್ಧಿಸಿರೋ ಇವರು ಈ ಬಾರಿಯೂ ಕೆಸಿಆರ್ ವಿರುದ್ಧ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಅಭ್ಯರ್ಥಿ : ಎನ್. ವೆಂಕಟಾ ಸುಹಾಸಿನಿ
ಪಕ್ಷ : ಟಿಡಿಪಿ
ಕ್ಷೇತ್ರ : ಕುಕ್ಕಟ್‍ಪಲ್ಲಿ

ಟಿಡಿಪಿ ಸಂಸ್ಥಾಪಕ ಎನ್.ಟಿ. ರಾಮರಾವ್ ಅವರ ಮೊಮ್ಮಗಳು ಎನ್. ವೆಂಕಟಾ ಸುಹಾಸಿನಿ. ಎನ್ .ಟಿ. ರಾಮರಾವ್ ಪುತ್ರಿ ಸುಹಾಸಿನಿ ಅವರ ಪುತ್ರಿಈ ವೆಂಕಟಾ ಅವರು. ಟಿಡಿಪಿ ಮುಖಂಡ, ಮಾಜಿ ಸಚಿವ ಎನ್. ಹರಿಕೃಷ್ಣ ಅವರ ಪುತ್ರಿ, ಇವರ ತಾಯಿ ಸುಹಾಸಿನಿ ಸಾಮಾಜಿಕ ಕಾರ್ಯಕರ್ತೆ ಆಗಿದ್ದರು. ಇದೇ ವರ್ಷ ಎನ್. ಹರಿಕೃಷ್ಣ ಅಪಘಾತವೊಂದರಲ್ಲಿ ಸಾವನ್ನಪ್ಪಿದ್ದರು.ಟಿಡಿಪಿ ಪಕ್ಷದಿಂದ ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೈದ್ರಾಬಾದ್ ನಗರದ ಕುಕಟ್‍ಪಲ್ಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

                         ರಾಜಸ್ಥಾನ

ರಾಜಸ್ಥಾನದಲ್ಲಿ ಕಾಂಗ್ರೆಸ್​​ಗೆ ಜಯ; ಆಡಳಿತರೂಢ ಬಿಜೆಪಿಗೆ ಮುಖಭಂಗ

7.45 ರಾತ್ರಿ : ಕಾಂಗ್ರೆಸ್ ಗೆ ಜಯ, ಆಡಳಿತರೂಢ ಬಿಜೆಪಿಗೆ ತೀವ್ರ ಮುಖಭಂಗ. 100 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಗೆಲುವು. ಬಿಜೆಪಿಗೆ 73 ಸ್ಥಾನ.

4.06 ಮಧ್ಯಾಹ್ನ :  ಕಾಂಗ್ರೆಸ್ 66 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು,  36 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 29 ಸ್ಥಾನಗಳಲ್ಲಿ ಮುನ್ನಡೆ ಕಾಯ್ದಿರಿಸಿಕೊಂಡಿದೆ.

3.23 ಮಧ್ಯಾಹ್ನ : ಕಾಂಗ್ರೆಸ್ 70ರಲ್ಲಿ ಮುನ್ನಡೆ, 37ರಲ್ಲಿ ಗೆಲುವು. ಬಿಜೆಪಿ 40ರಲ್ಲಿ ಮುನ್ನಡೆ, 28ರಲ್ಲಿ ಗೆಲುವು. ಇತರೆ ತಲಾ 12 ಮುನ್ನಡೆ ಮತ್ತು ಗೆಲುವು.

3.07 ಮಧ್ಯಾಹ್ನ : ಬಿಜೆಪಿ 40ರಲ್ಲಿ ಮುನ್ನಡೆ, 28ರಲ್ಲಿ ಗೆಲುವು. ಕಾಂಗ್ರೆಸ್ 70ರಲ್ಲಿ ಮುನ್ನಡೆ, 37ರಲ್ಲಿ ಗೆಲುವು. ಇತರೆ 12ರಲ್ಲಿ ಗೆಲುವು, 12ರಲ್ಲಿ ಮುನ್ನಡೆ.

2.17 ಮಧ್ಯಾಹ್ನ : ಬಿಜೆಪಿ ಗೆಲುವು-14, ಮುನ್ನಡೆ 54, ಕಾಂಗ್ರೆಸ್ ಗೆಲುವು-22, ಮುನ್ನಡೆ-83. ಇತರೆ ಮುನ್ನಡೆ-19, ಗೆಲುವು-7.

1.41 ಮಧ್ಯಾಹ್ನ : ಬಿಜೆಪಿ 67ರಲ್ಲಿ ಮುನ್ನಡೆ, 5ರಲ್ಲಿ ಗೆಲುವು. ಕಾಂಗ್ರೆಸ್​ 89ರಲ್ಲಿ ಮುನ್ನಡೆ, 12ರಲ್ಲಿ ಗೆಲುವು. ಇತರೆ 22ರಲ್ಲಿ ಮುನ್ನಡೆ, 4ರಲ್ಲಿ ಗೆಲುವು.

1.10 ಮಧ್ಯಾಹ್ನ : ಬಿಜೆಪಿ 70ರಲ್ಲಿ ಮುನ್ನಡೆ, 2ರಲ್ಲಿನ ಗೆಲುವು. ಕಾಂಗ್ರೆಸ್ 94ರಲ್ಲಿ ಮುನ್ನಡೆ, 7ರಲ್ಲಿ ಗೆಲುವು.

12.55 ಮಧ್ಯಾಹ್ನ : ಬಿಜೆಪಿ 72ರಲ್ಲಿ ಮುನ್ನಡೆ, 2ರಲ್ಲಿ ಗೆಲುವು. ಕಾಂಗ್ರೆಸ್​ 97ರಲ್ಲಿ ಮುನ್ನಡೆ, 3ರಲ್ಲಿ ಗೆಲುವು. ಇತರೆ 25ರಲ್ಲಿ ಇತರೆ ಮುನ್ನಡೆ.

12.40 ಮಧ್ಯಾಹ್ನ : ಬಿಜೆಪಿ 74ರಲ್ಲಿ ಮುನ್ನಡೆ, 2ರಲ್ಲಿ ಗೆಲುವು. ಕಾಂಗ್ರೆಸ್ 97ರಲ್ಲಿ ಮುನ್ನಡೆ 2ರಲ್ಲಿ ಗೆಲುವು ಪಡೆದಿದೆ.

12.24 ಮಧ್ಯಾಹ್ನ : ಬಿಜೆಪಿ 72ರಲ್ಲಿ ಮುನ್ನಡೆ 1ರಲ್ಲಿ ಗೆಲುವು. ಕಾಂಗ್ರೆಸ್​ 102ರಲ್ಲಿ ಮುನ್ನಡೆ, 1ರಲ್ಲಿ

11.51ಬೆಳಗ್ಗೆ : ಕಾಂಗ್ರೆಸ್​ 74ರಲ್ಲಿ ಮುನ್ನಡೆ 1ರಲ್ಲಿ ಗೆಲುವು.

11.42 ಬೆಳಗ್ಗೆ :ಕಾಂಗ್ರೆಸ್​ 97, ಬಿಜೆಪಿ 78, ಇತರೆ 23 ಕಡೆಗಳಲ್ಲಿ ಮುನ್ನಡೆ.

11.33 ಬೆಳಗ್ಗೆ : ಕಾಂಗ್ರೆಸ್​+95, ಬಿಜೆಪಿ 79, ಬಿಎಸ್​ಪಿ 4, ಇತರೆ 21ರಲ್ಲಿ ಮುನ್ನಡೆ.

10.53 ಬೆಳಗ್ಗೆ : ಕಾಂಗ್ರೆಸ್ 98, ಬಿಜೆಪಿ 82, ಬಿಎಸ್​ ಪಿ 3, ಇತರೆ 16 ಕ್ಷೇತ್ರಗಳಲ್ಲಿ ಮುನ್ನಡೆ.

10.35 ಬೆಳಗ್ಗೆ : ಬಿಜೆಪಿ 78, ಕಾಂಗ್ರೆಸ್​+ 102, ಬಿಎಸ್​ಪಿ 3, ಇತರೆ 12ರಲ್ಲಿ ಮುನ್ನಡೆ.

10.22 ಬೆಳಗ್ಗೆ : ಬಿಜೆಪಿ 75, ಕಾಂಗ್ರೆಸ್​ + 101, ಬಿಎಸ್​ಪಿ 3, ಇತರೆ 12 ರಲ್ಲಿ ಮುನ್ನಡೆ.

10.14 ಬೆಳಗ್ಗೆ : ಬಿಜೆಪಿ 76, ಕಾಂಗ್ರೆಸ್​ 99, ಬಿಎಸ್​ಪಿ 3, ಇತರೆ 14 ಕಡೆಗಳಲ್ಲಿ ಮುನ್ನಡೆ.

10.00 ಬೆಳಗ್ಗೆ : ಬಿಜೆಪಿ 70, ಕಾಂಗ್ರೆಸ್​ + 100, ಬಿಎಸ್​ಪಿ 3, ಇತರೆ 14 ಕ್ಷೇತ್ರಗಳಲ್ಲಿ ಮುನ್ನಡೆ.

9.53 ಬೆಳಗ್ಗೆ : ಬಿಜೆಪಿ 67, ಕಾಂಗ್ರೆಸ್​ +99, ಬಿಎಸ್​ಪಿ 3, ಇತರೆ 15ರಲ್ಲಿ ಮುನ್ನಡೆ.

9.48 ಬೆಳಗ್ಗೆ : ಬಿಜೆಪಿ 67, ಕಾಂಗ್ರೆಸ್​+97, ಬಿಎಸ್​ಪಿ 3, ಇತರೆ 14 ರಲ್ಲಿ ಮುನ್ನಡೆ.

9.39 ಬೆಳಗ್ಗೆ : ಬಿಜೆಪಿ 69, ಕಾಂಗ್ರೆಸ್​ + 89, ಬಿಎಸ್​ಪಿ 3, ಇತರೆ 11ರಲ್ಲಿ ಮುನ್ನಡೆ.

9.32 ಬೆಳಗ್ಗೆ : ಬಿಜೆಪಿ 71, ಕಾಂಗ್ರೆಸ್​+ 82, ಬಿಎಸ್​ಪಿ 1, ಇತರೆ 10

9.14 ಬೆಳಗ್ಗೆ : ಬಿಜೆಪಿ 52, ಕಾಂಗ್ರೆಸ್ + 75, ಬಿಎಸ್​ಪಿ 2

9.05 ಬೆಳಗ್ಗೆ : ಬಿಜೆಪಿ 40, ಕಾಂಗ್ರೆಸ್ +57, ಬಿಎಸ್​ಪಿ 0

8.55 ಬೆಳಗ್ಗೆ : ಬಿಜೆಪಿ 34, ಕಾಂಗ್ರೆಸ್ + 45 ಬಿಎಸ್ ಪಿ 0

8.45 :  ಕಾಂಗ್ರೆಸ್ 49, ಬಿಜೆಪಿ 24 ಕ್ಷೇತ್ರಗಳಲ್ಲಿ ಮುನ್ನಡೆ.

8.15 ಬೆಳಗ್ಗೆ : ಕಾಂಗ್ರೆಸ್ 30, ಬಿಜೆಪಿ 13 ಕ್ಷೇತ್ರಗಳಲ್ಲಿ ಮುನ್ನಡೆ.

7.55 ಬೆಳಗ್ಗೆ : ಮತ ಎಣಿಕೆ ಆರಂಭ

ರಾಜಸ್ಥಾನದಲ್ಲಿ 35 ಸೆಂಟರ್​ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು. ಒಟ್ಟು 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ ಎಂದು ರಾಜಸ್ಥಾನದ ಮುಖ್ಯ ಚುನಾವಣೆ ಅಧಿಕಾರಿ ಆನಂದ ಕುಮಾರ್ ತಿಳಿಸಿದ್ದಾರೆ.  ಕೌಂಟಿಂಗ್​ ನಡೆಯುವ ಸ್ಥಳದಲ್ಲಿ ಅತೀ ಹೆಚ್ಚು ಭದ್ರತೆ ನಿಯೋಜನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಸಾರ್ವಜನಿಕರಿಗಾಗಿ ಫಲಿತಾಂಶದ ಮಾಹಿತಿಯನ್ನ 350 ಎಲ್​ಇಡಿ ಸ್ಕ್ರೀನ್​ ವ್ಯವಸ್ಥೆ ಮಾಡಲಾಗಿದೆ. 

ಒಟ್ಟು ಕ್ಷೇತ್ರಗಳು : 199, ಮ್ಯಾಜಿಕ್ ನಂ-100

ಘಟಾನುಘಟಿಗಳು

ಅಭ್ಯರ್ಥಿ : ವಸುಂಧರಾ ರಾಜೆ

ಪಕ್ಷ : ಬಿಜೆಪಿ

ಕ್ಷೇತ್ರ : ಝಲ್ರಾಪಟಣ್

ರಾಜಸ್ಥಾನದ ಹಾಲಿ ಮುಖ್ಯಮಂತ್ರಿ ವಸುಂಧರಾ ರಾಜೆ. ಮಧ್ಯಪ್ರದೇಶದ ರಾಜವಂಶಸ್ಥ ಸಿಂಧಿಯಾ ವಂಶಕ್ಕೆ ಸೇರಿದವರು. ಕಳೆದ 3 ಚುನಾವಣೆಗಳಲ್ಲೂ ಝಲ್ರಾಪಟಣ್ ಕ್ಷೇತ್ರದಿಂದ ಸ್ಪರ್ಧಿಸ್ತಿದ್ದಾರೆ.  2 ಬಾರಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದವರು. 2003 ಮತ್ತು 2013ರಲ್ಲಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ರು. ಈ ಬಾರಿ ಕಾಂಗ್ರೆಸ್‍ನ ಮಾನವೇಂದ್ರ ಸಿಂಗ್ ಅವರು ವಸುಂಧರಾ ರಾಜೆ ಅವರ  ಎದುರಾಳಿ. ರಾಜೆ ವಿರುದ್ಧ ಆಡಳಿತ ವಿರೋಧಿ ಅಲೆ ಗೋಚರಿಸುತ್ತಿದ್ದು, ಫಲಿತಾಂಶ ಕುತೂಹಲ ಮೂಡಿಸಿದೆ.

ಅಭ್ಯರ್ಥಿ : ಅಶೋಕ್ ಗೆಹ್ಲೋಟ್

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಸರ್ದಾರ್‍ಪುರ

ಅಶೋಕ್ ಗೆಹ್ಲೋಟ್ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ. 3ನೇ ಬಾರಿ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿದ್ದರು. ಸದ್ಯ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಸರ್ದಾರ್‍ಪುರ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಸ್ಪರ್ಧಿಸಿದ್ದಾರೆ. 2013ರಲ್ಲಿ ಬಿಜೆಪಿಯ ಶಂಭು ವಿರುದ್ಧ ಗೆಲುವು ಸಾಧಿಸಿದ್ರು. ಈ ಬಾರಿಯೂ ಗೆಹ್ಲೋಟ್ ವಿರುದ್ಧ ಶಂಭು ಸ್ಪರ್ಧೆ ಮಾಡಿದ್ದಾರೆ.

ಅಭ್ಯರ್ಥಿ : ಮಾನವೇಂದ್ರ ಸಿಂಗ್

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಝಲ್ರಾಪಟಣ್

ಬಿಜೆಪಿ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರ ಪುತ್ರ ಮಾನವೇಂದ್ರ ಸಿಂಗ್. 2013ರಲ್ಲಿ ಬಿಜೆಪಿಯಿಂದ ಶಾಸಕರಾಗಿದ್ದರು. ಬಿಜೆಪಿಯಲ್ಲಿದ್ದಾಗ ಸಿಎಂ ವಿರುದ್ಧವೇ ಟೀಕಾ ಪ್ರಹಾರ ನಡೆಸಿದ್ದರು. ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕೈ ಪಡೆ ಸೇರಿದ್ದರು.ಸಿಎಂ ವಸುಂಧರಾ ರಾಜೆ ವಿರುದ್ಧವೇ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.

ಅಭ್ಯರ್ಥಿ : ಸಚಿನ್ ಪೈಲಟ್

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಟೊಂಕ್

ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಲ್ಲೊಬ್ಬರು. ಯುವ ಮುಖಂಡ, ಮಾಜಿ ಸಂಸದ, ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿರುವ ಇವರು, ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧೆ ಮಾಡಿದ್ದಾರೆ. ಮಾಜಿ ಸಂಸದ ರಾಜೇಶ್ ಪೈಲಟ್ ಪುತ್ರ ಈ ಸಚಿನ್ ಪೈಲಟ್. ಪೈಲಟ್ ವಿರುದ್ಧ ಬಿಜೆಪಿಯ ಏಕೈಕ ಮುಸ್ಲಿಂ ಅಭ್ಯರ್ಥಿ ಯುನುಸ್ ಖಾನ್ ಸ್ಪರ್ಧಿಸಿದ್ದಾರೆ.

ಅಭ್ಯರ್ಥಿ : ಶಂಭು ಎಸ್. ಖಟೇಸರ್

ಪಕ್ಷ : ಬಿಜೆಪಿ

ಕ್ಷೇತ್ರ : ಸರ್ದಾರ್‍ಪುರ

ರಾಜಸ್ಥಾನ ಸ್ಟೇಟ್ ಸೀಡ್ ಕಾರ್ಪೋರೇಷನ್ ಮಾಜಿ ಅಧ್ಯಕ್ಷರು. ರಾಜಸ್ಥಾನದ ಮಾಲಿ ಸಮುದಾಯದ ಪ್ರಭಾವಿ ಮುಖಂಡರು ಕೂಡ ಹೌದು. ಈ ಹಿಂದೆ ಬಹುಜನ ಸಮಾಜ ಪಕ್ಷದ ಅಗ್ರಗಣ್ಯ ನಾಯಕರಾಗಿದ್ರು. 2013ರಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದ ಇವರು, 2008, 2009ರಲ್ಲಿ ಬಿಎಸ್‍ಪಿಯಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈ ಬಾರಿ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ವಿರುದ್ಧ ಕಣದಲ್ಲಿದ್ದಾರೆ.

ಅಭ್ಯರ್ಥಿ : ಯೂನುಸ್ ಖಾನ್
ಪಕ್ಷ : ಬಿಜೆಪಿ
ಕ್ಷೇತ್ರ : ಟೊಂಕ್

ಹಾಲಿ ಲೋಕೋಪಯೋಗಿ, ಸಾರಿಗೆ ಇಲಾಖೆಯ ಸಚಿವ ಯೂನುಸ್ ಖಾನ್. ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ವಿರುದ್ಧ ಕಣದಲ್ಲಿದ್ದಾರೆ. ಇವರು ಬಿಜೆಪಿ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಮುಖಂಡರು. ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಆಪ್ತರಲ್ಲೊಬ್ಬರು ಅನ್ನೋದನ್ನಿಲ್ಲಿ ಸ್ಮರಿಸಬಹುದು.

 

                        ಮಧ್ಯಪ್ರದೇಶ

6.05 ಸಂಜೆ : ಬಿಜೆಪಿ 76 ಮುನ್ನಡೆ, ಗೆಲುವು-32, ಕಾಂಗ್ರೆಸ್ 76 ಮುನ್ನಡೆ, ಗೆಲುವು 36.

4.14 ಮಧ್ಯಾಹ್ನ : ಬಿಜೆಪಿ 12 ರಲ್ಲಿ ಗೆಲುವು, 89ರಲ್ಲಿ ಮುನ್ನಡೆ. ಕಾಂಗ್ರೆಸ್ 110 ಕ್ಷೇತ್ರಗಳಲ್ಲಿ ಮುನ್ನಡೆ, 8 ಕ್ಷೇತ್ರಗಳಲ್ಲಿ ಗೆಲುವಿನ ಕೇಕೆ ಹಾಕಿದೆ.

3.27 ಮಧ್ಯಾಹ್ನ :  ಬಿಜೆಪಿ 100ರಲ್ಲಿ ಮುನ್ನಡೆ, 4ರಲ್ಲಿ ಗೆಲುವು. ಕಾಂಗ್ರೆಸ್ 115ರಲ್ಲಿ ಮುನ್ನಡೆ. ಇತರೆ ಮುನ್ನಡೆ-11.

3.11 ಮಧ್ಯಾಹ್ನ : ಬಿಜೆಪಿ 100ರಲ್ಲಿ ಮುನ್ನಡೆ, 4ರಲ್ಲಿ ಗೆಲುವು. ಕಾಂಗ್ರೆಸ್ 115 ಮುನ್ನಡೆ. ಇತರೆ 11ರಲ್ಲಿ ಮುನ್ನಡೆ.

2.17 ಮಧ್ಯಾಹ್ನ : ಬಿಜೆಪಿ ಮುನ್ನಡೆ 109, ಗೆಲುವು 2. ಕಾಂಗ್ರೆಸ್ + ಮುನ್ನಡೆ-109, ಇತರೆ 10 ಮುನ್ನಡೆ.

1.43 ಮಧ್ಯಾಹ್ನ : ಕಾಂಗ್ರೆಸ್ 111, ಬಿಜೆಪಿ 108, ಬಿಎಸ್​ಪಿ 5, ಇತರೆ 6 ಮುನ್ನಡೆ.

1.12 ಮಧ್ಯಾಹ್ನ : ಕಾಂಗ್ರೆಸ್ ಗೆ ಎಸ್ ಪಿ ಬೆಂಬಲ.2 ಕ್ಷೇತ್ರಗಳಲ್ಲಿ ಎಸ್​ ಪಿ ಮುನ್ನಡೆ ಸಾಧಿಸಿದೆ.

12.58 ಮಧ್ಯಾಹ್ನ : ಬಿಜೆಪಿ 107, ಕಾಂಗ್ರೆಸ್  109,ಬಿಎಸ್​ಪಿ 6 ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

12.42 ಮಧ್ಯಾಹ್ನ : ಬಿಜೆಪಿ 104ರಲ್ಲಿ ಮುನ್ನಡೆ, 115 ಕಾಂಗ್ರೆಸ್ ಮತ್ತು 11 ಸ್ಥಾನಗಳಲ್ಲಿ ಇತರೆ ಮುನ್ನಡೆ.

12.26 ಮಧ್ಯಾಹ್ನ : ಬಿಜೆಪಿ 105, ಕಾಂಗ್ರೆಸ್​ + 114, ಇತರೆ 11ರಲ್ಲಿ ಮುನ್ನಡೆ.

12.00 ಮಧ್ಯಾಹ್ನ : ಬಿಜೆಪಿ 102, ಕಾಂಗ್ರೆಸ್​ 116, ಬಿಎಸ್​ ಪಿ 5, ಇತರೆ 7ರಲ್ಲಿ ಮುನ್ನಡೆ.

11.52 ಬೆಳಗ್ಗೆ : ಬಿಜೆಪಿ 112, ಕಾಂಗ್ರೆಸ್ 108, ಬಿಎಸ್​ಪಿ 5, ಇತರೆ 5ರಲ್ಲಿ ಮುನ್ನಡೆ.

11.43 ಬೆಳಗ್ಗೆ : ಬಿಜೆಪಿ 115, ಕಾಂಗ್ರೆಸ್​ 106, ಬಿಎಸ್​ಪಿ 4, ಇತರೆ 5 ಕ್ಷೇತ್ರಗಳಲ್ಲಿ ಮುನ್ನಡೆ .

11.35 ಬೆಳಗ್ಗೆ : ಕಾಂಗ್ರೆಸ್​ 110, ಬಿಜೆಪಿ 109, ಬಿಎಸ್​ಪಿ 5, ಇತರೆ 6ರಲ್ಲಿ ಮುನ್ನಡೆ.

10.54 ಬೆಳಗ್ಗೆ : ಕಾಂಗ್ರೆಸ್ 114, ಬಿಜೆಪಿ 99, ಬಿಎಸ್​ಪಿ 4, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

10.36 ಬೆಳಗ್ಗೆ : ಬಿಜೆಪಿ 96, ಕಾಂಗ್ರೆಸ್​ 110, ಬಿಎಸ್​ಪಿ 5, ಇತರೆ 8 ಕ್ಷೇತ್ರಗಳಲ್ಲಿ ಮುನ್ನಡೆ.

10.24 ಬೆಳಗ್ಗೆ : ಬಿಜೆಪಿ 101, ಕಾಂಗ್ರೆಸ್​ 102, ಬಿಎಸ್​ ಪಿ 6, ಇತರೆ 5

10.15 ಬೆಳಗ್ಗೆ : ಬಿಜೆಪಿ 95, ಕಾಂಗ್ರೆಸ್​ 103, ಬಿಎಸ್​ಪಿ 6, ಇತರೆ 5ರಲ್ಲಿ ಮುನ್ನಡೆ.

10.02 ಬೆಳಗ್ಗೆ : ಬಿಜೆಪಿ 88, ಕಾಂಗ್ರೆಸ್​ 103, ಬಿಎಸ್​ ಪಿ 5, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

9.54 ಬೆಳಗ್ಗೆ : ಬಿಜೆಪಿ 88, ಕಾಂಗ್ರೆಸ್ 99, ಬಿಎಸ್​ಪಿ 5, ಇತರೆ 5 ಕ್ಷೇತ್ರಗಳಲ್ಲಿ  ಮುನ್ನಡೆ.

9.49 ಬೆಳಗ್ಗೆ : ಬಿಜೆಪಿ 83, ಕಾಂಗ್ರೆಸ್​ 98, ಬಿಎಸ್​ಪಿ 5, ಇತರೆ 4

9.40 ಬೆಳಗ್ಗೆ : ಬಿಜೆಪಿ 65, ಕಾಂಗ್ರೆಸ್​ 83, ಬಿಎಸ್​ಪಿ 5, ಇತರೆ 3ರಲ್ಲಿ ಮುನ್ನಡೆ.

9.33 ಬೆಳಗ್ಗೆ : ಬಿಜೆಪಿ 59,  ಕಾಂಗ್ರೆಸ್ 71, ಬಿಎಸ್​ಪಿ 5, ಇತರೆ 2

9.15 ಬೆಳಗ್ಗೆ : ಬಿಜೆಪಿ 45, ಕಾಂಗ್ರೆಸ್ 37, ಬಿಎಸ್​ಪಿ 2, ಇತರೆ 2

9.05 ಬೆಳಗ್ಗೆ : ಬಿಜೆಪಿ 35, ಕಾಂಗ್ರೆಸ್ 34, ಬಿಎಸ್​ಪಿ 1, ಇತರೆ 2

8.50 ಬೆಳಗ್ಗೆ : ಬಿಜೆಪಿ 37, ಕಾಂಗ್ರೆಸ್ 42 ಕ್ಷೇತ್ರಗಳಲ್ಲಿ ಮುನ್ನಡೆ.

8.20 ಬೆಳಗ್ಗೆ : ಬಿಜೆಪಿ 32, ಕಾಂಗ್ರೆಸ್ 29 ಸ್ಥಾನಗಳಲ್ಲಿ ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಮುನ್ನಡೆ.

7.55 ಬೆಳಗ್ಗೆ : ಮತ ಎಣಿಕೆ ಆರಂಭ

ಮಧ್ಯಪ್ರದೇಶದಲ್ಲಿ 51 ಸೆಂಟರ್​ಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮತಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಒಂದು ಟೇಬಲ್ ಪೋಸ್ಟಲ್ ವೋಟ್​ಗಳ ಕೌಂಟಿಂಗ್​ಗೆ ಮಿಸಲೀಡಲಾಗಿದೆ. ಕೌಂಟಿಂಗ್​ಗೆ ಒಟ್ಟು 14,600 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ಒಟ್ಟು ಕ್ಷೇತ್ರ -230, ಮ್ಯಾಜಿಕ್ ನಂಬರ್-116

ಘಟಾನುಘಟಿಗಳು

ಅಭ್ಯರ್ಥಿ : ಶಿವರಾಜ್ ಸಿಂಗ್ ಚೌಹಾಣ್

ಕ್ಷೇತ್ರ : ಬುಧ್ನಿ

ಪಕ್ಷ: ಬಿಜೆಪಿ

ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ  ಶಿವರಾಜ್ ಸಿಂಗ್ ಚೌಹಾಣ್. ಮೂರು ಬಾರಿ ಸಿಎಂ ಪಟ್ಟ ಅಲಂಕರಿಸಿರುವ ಖ್ಯಾತಿ ಚೌಹಾಣ್ ಅವರದ್ದು. 1990ರಲ್ಲಿ ಮೊದಲ ಬಾರಿಗೆ ಬುಧ್ನಿ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆ ಆದ ಇವರು, 1996-1997ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿದ್ರು. 1997-98ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಆಗಿದ್ರು. ಕಟ್ಟರ್ ಹಿಂದುವಾದಿಯಾಗಿರುವ ಶಿವರಾಜ್ ಸಿಂಗ್ ಚೌಹಾಣ್. ಈ ಬಾರಿ ಪ್ರತಿಸ್ಪರ್ಧಿ ಅರುಣ್ ಯಾದವ್ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಅಭ್ಯರ್ಥಿ : ಅಜಯ್ ಸಿಂಗ್

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಛೌರ್ಹತ್

ಮಧ್ಯಪ್ರದೇಶದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಕುನ್ವರ್ ಅರ್ಜುನ್ ಸಿಂಗ್ ಅವರ ಪುತ್ರ ಅಜಯ್ ಸಿಂಗ್.1995ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ ಇವರು, 5 ಬಾರಿ ಶಾಸಕರಾಗಿ ಆಯ್ಕೆಯಾದ ಖ್ಯಾತಿ ಹೊಂದಿದ್ದಾರೆ.

ಅಭ್ಯರ್ಥಿ : ಜೈವರ್ಧನ್

ಪಕ್ಷ : ಕಾಂಗ್ರೆಸ್

ಕ್ಷೇತ್ರ : ರಘೋಗಢ

ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್, ರಘೋಗಢ ಕ್ಷೇತ್ರದ ಕಾಂಗ್ರೆಸ್ ಕ್ಯಾಂಡಿಡೇಟ್. ಈ ಹಿಂದಿನಿಂದಲೂ ಕಾಂಗ್ರೆಸ್ ಭದ್ರಕೋಟೆ ಆಗಿದೆ.ಈ ಕ್ಷೇತ್ರದಲ್ಲಿ ಬಿಜೆಪಿ ಗೆದ್ದ ಉದಾಹರಣೆಯೇ ಇಲ್ಲ. ಈ ಸಲ ಬಿಜೆಪಿಯ ಭುಪೇಂದ್ರ ರಘುವಂಶಿ ವಿರುದ್ಧ ಸ್ಪರ್ಧೆಯಲ್ಲಿದ್ದಾರೆ ಜೈವರ್ಧನ್.

ಅಭ್ಯರ್ಥಿ :ಕೃಷ್ಣಾ ಗೌರ್

ಪಕ್ಷ: ಬಿಜೆಪಿ

ಕ್ಷೇತ್ರ : ಗೋವಿಂದಪುರ

ಮಾಜಿ ಮುಖ್ಯಮಂತ್ರಿ ಬಹುಲಾಲ್ ಗೌರ್ ಅವರ ಪುತ್ರಿ ಕೃಷ್ಣಾ ಗೌರ್. ಗೋವಿಂದಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಬಿಜೆಪಿ ಭದ್ರಕೋಟೆ ಗೋವಿಂದಪುರ. 1974-2013ರವರೆಗೆ ಗೋವಿಂದಪುರದಿಂದ ಆಯ್ಕೆಯಾಗಿದ್ದರು ಬಹುಲಾಲ್. ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಿಂದ ಈ ಬಾರಿ ಪುತ್ರಿಗೆ ಟಿಕೆಟ್ ಸಿಕ್ಕಿದೆ.

ಅಭ್ಯರ್ಥಿ : ಯಶೋಧರಾ ರಾಜೆ ಸಿಂಧಿಯಾ

ಕ್ಷೇತ್ರ : ಶಿವಪುರಿ

ಪಕ್ಷ : ಬಿಜೆಪಿ

ಪ್ರಸಕ್ತ ವಾಣಿಜ್ಯ, ಕೈಗಾರಿಕೆ ಮತ್ತು ಉದ್ಯೋಗ ಸಚಿವೆ ಯಶೋಧರಾ ರಾಜೆ ಸಿಂಧಿಯಾ. ಇವರು ರಾಜಸ್ಥಾನ ಸಿಎಂ ವಸುಂಧರಾ ರಾಜೆಯವರ ಸಹೋದರಿ. ಕಾಂಗ್ರೆಸ್ ನಾಯಕ ಜೋತಿರಾದಿತ್ಯ ಸಿಂಧಿಯಾ ಅವರ ಅತ್ತೆ. ಗ್ವಾಲಿಯರ್ ರಾಜಮನೆತನಕ್ಕೆ ಸೇರಿದವರು 1998ರಲ್ಲಿ ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ.

                        ಮಿಜೋರಾಂ

ಮಿಜೋರಾಂ ಎಮ್ಎನ್​ಎಫ್ ತೆಕ್ಕೆಗೆ; ಮುಖ್ಯಮಂತ್ರಿಗೇ ಸೋಲು..!

ಎಮ್​ ಎನ್ ಎಫ್ ಗೆ ಭರ್ಜರಿ ಗೆಲುವು 

2.22 ಮಧ್ಯಾಹ್ನ : ಎಮ್​ಎನ್ಎಫ್ 26 ಗೆಲುವು, ಕಾಂಗ್ರೆಸ್ 5 ಗೆಲುವು, ಇತರೆ 9 ಗೆಲುವು

1.45 ಮಧ್ಯಾಹ್ನ : ಎಂಎನ್​ಎಫ್ 23ರಲ್ಲಿ ಗೆಲುವು, 3ರಲ್ಲಿ ಮುನ್ನಡೆ. ಕಾಂಗ್ರೆಸ್​ 5ರಲ್ಲಿ ಗೆಲುವು. ಇತರೆ 9ರಲ್ಲಿ ಗೆಲುವು.

1.14 ಮಧ್ಯಾಹ್ನ : ಎಂಎನ್​ಎಫ್ 20ರಲ್ಲಿ ಗೆಲುವು 5ರಲ್ಲಿ ಮುನ್ನಡೆ. ಕಾಂಗ್ರೆಸ್ 6 ಕಡೆಗಳಲ್ಲಿ ಗೆಲುವು. ಇತರೆ 9ರಲ್ಲಿ ಗೆಲುವು.

12.59 ಮಧ್ಯಾಹ್ನ : ಎಂಎನ್​ಎಫ್​ 20ರಲ್ಲಿ ಗೆಲುವು, 5ರಲ್ಲಿ ಮುನ್ನಡೆ.

12.44 ಮಧ್ಯಾಹ್ನ : ಎಂಎನ್​ ಎಫ್ 19ರಲ್ಲಿ ಗೆಲುವು, 6ರಲ್ಲಿ ಮುನ್ನಡೆ.

12.28 ಮಧ್ಯಾಹ್ನ : ಎಂಎನ್​ಎಫ್ 7 ರಲ್ಲಿ ಮುನ್ನಡೆ, 18ರಲ್ಲಿ ಗೆಲುವು. ಕಾಂಗ್ರೆಸ್​ 4ರಲ್ಲಿ ಮುನ್ನಡೆ, 2ರಲ್ಲಿ ಗೆಲುವು. ಇತರೆ ತಲಾ 5 ಮುನ್ನಡೆ ಮತ್ತು ಗೆಲುವು.

12.00 ಮಧ್ಯಾಹ್ನ : ಎಂಎನ್​ ಎಫ್​ 11ರಲ್ಲಿ ಮುನ್ನಡೆ, 14ರಲ್ಲಿ ಗೆಲುವು. ಕಾಂಗ್ರೆಸ್​ 5ರಲ್ಲಿ ಮುನ್ನಡೆ, ಇತರೆ 4ರಲ್ಲಿ ಮುನ್ನಡೆ, 5ರಲ್ಲಿ ಗೆಲುವು.

11.55 ಬೆಳಗ್ಗೆ : ಎಂಎನ್​ಎಫ್ 13ರಲ್ಲಿ ಮುನ್ನಡೆ 12ರಲ್ಲಿ ಗೆಲುವು.

11.44 ಬೆಳಗ್ಗೆ : ಎಂಎನ್​ ಎಫ್ 14 ರಲ್ಲಿ ಮುನ್ನಡೆ, 11ರಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್​ 6ರಲ್ಲಿ ಮುನ್ನಡೆ ಕಾಯ್ದಿರಿಸಿಕೊಂಡಿದ್ದು, ಇತರೆ 8ರಲ್ಲಿ ಮುನ್ನಡೆ, 1ರಲ್ಲಿ ಗೆಲುವು ಸಾಧಿಸಿದೆ.

11.36 ಬೆಳಗ್ಗೆ : ಎಮ್​ಎನ್​ಎಫ್ 14, ಕಾಂಗ್ರೆಸ್​, ಇತರೆ 7ರಲ್ಲಿ ಮುನ್ನಡೆ.

10.55 ಬೆಳಗ್ಗೆ : ಎಮ್​ ಎನ್ಎಫ್​ 25, ಕಾಂಗ್ರೆಸ್​ 7, ಇತರೆ 8 ಕ್ಷೇತ್ರಗಳಲ್ಲಿ ಮುನ್ನಡೆ.

10.39 ಬೆಳಗ್ಗೆ : ಎಮ್​ಎನ್ ಎಫ್ 26, ಕಾಂಗ್ರೆಸ್ 7, ಇತರೆ 7ರಲ್ಲಿ ಮುನ್ನಡೆ.

10.24 ಬೆಳಗ್ಗೆ :  ಎಂಎನ್​ ಎಫ್ 27, ಕಾಂಗ್ರೆಸ್​ 8, ಇತರೆ 5ರಲ್ಲಿ ಮುನ್ನಡೆ.

10.17 ಬೆಳಗ್ಗೆ : ಎಂಎನ್​ ಎಫ್ 26, ಕಾಂಗ್ರೆಸ್ 8, ಇತರೆ 6ರಲ್ಲಿ ಮುನ್ನಡೆ.

10.03 ಬೆಳಗ್ಗೆ : ಎಂಎನ್ಎಫ್ 23, ಕಾಂಗ್ರೆಸ್​ 7, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

9.56 ಬೆಳಗ್ಗೆ : ಎಂಎನ್​ಎಫ್​ 22, ಕಾಂಗ್ರೆಸ್​ 7, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

9.50 ಬೆಳಗ್ಗೆ : ಎಂಎನ್​ ಎಫ್​ 21, ಕಾಂಗ್ರೆಸ್ 7, ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ.

9.41 ಬೆಳಗ್ಗೆ : ಎಂಎನ್​ಎಫ್ 22, ಕಾಂಗ್ರೆಸ್​​ 4, ಇತರೆ 6ರಲ್ಲಿ ಮುನ್ನಡೆ.

9.35 ಬೆಳಗ್ಗೆ : ಎಂಎನ್ ಎಫ್ 17, ಕಾಂಗ್ರೆಸ್ 5, ಇತರೆ 7ರಲ್ಲಿ ಮುನ್ನಡೆ.

9.15 ಬೆಳಗ್ಗೆ : ಎಂಎನ್​ಎಫ್ 16, ಕಾಂಗ್ರೆಸ್ 13 ರಲ್ಲಿ ಮುನ್ನಡೆ.

8.55 ಬೆಳಗ್ಗೆ :ಎಂಎನ್ ಎಫ್ 11 ಹಾಗೂ ಕಾಂಗ್ರೆಸ್ 09 ಸ್ಥಾನದಲ್ಲಿ ಮುನ್ನಡೆ

8.35 : ಮಿಜೋರಾಂನಲ್ಲಿ ಎಂಎನ್ ಎಫ್ 03 ಹಾಗೂ ಕಾಂಗ್ರೆಸ್ 1 ಕ್ಷೇತ್ರದಲ್ಲಿ ಮುನ್ನಡೆ.

7.55 ಬೆಳಗ್ಗೆ : ಮತ ಎಣಿಕೆ ಆರಂಭ

ಮಿಜೋರಾಂನಲ್ಲೂ ಸಹ ಫಲಿತಾಂಶ ಸಹ ಕುತೂಹಲ ಮೂಡಿಸಿದೆ. ಒಟ್ಟು 13 ಮತಕೇಂದ್ರಗಳಲ್ಲಿ ಮತಎಣಿಕೆ ಪ್ರಕ್ರಿಯೆ ನಡೆಯಲಿದೆ. ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಿದೆ. ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ. ಪ್ರತಿ ಮತಎಣಿಕೆಯ ಕೇಂದ್ರದಲ್ಲೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.

ಒಟ್ಟು ಕ್ಷೇತ್ರಗಳು 40, ಮ್ಯಾಜಿಕ್ ನಂಬರ್ 21

ಘಟಾನುಘಟಿಗಳು

ಅಭ್ಯರ್ಥಿ : ಲಾಲ್ಡುಹೊಮಾ

ಪಕ್ಷ : ಝೆಡ್‍ಎನ್‍ಪಿ

ಕ್ಷೇತ್ರ : ಸೆರ್‍ಛಿಪ್, ಐಜ್ವಾಲ್ ಪಶ್ಚಿಮ-1

ಮಿಜೋರಾಂ ವಿಧಾನಸಭಾ ವಿರೋಧ ಪಕ್ಷದ ನಾಯಕ  ಲಾಲ್ಡುಹೊಮಾ. ಝೋರಾಮ್ ನ್ಯಾಷನಲಿಸ್ಟ್ ಪಾರ್ಟಿ ಸಂಸ್ಥಾಪಕ ಅಧ್ಯಕ್ಷರೂ ಹೌದು.  ಸಿಎಂ ಲಾಲ್ ಥನ್ ಹವ್ಲಾ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಸೆರ್‍ಛಿಪ್ ಕ್ಷೇತ್ರದಿಂದ ಸಿಎಂ ವಿರುದ್ಧ ಕಣಕ್ಕಿಳಿದಿರೋ  ಲಾಲ್ಡುಹೊಮಾ. 2 ಕ್ಷೇತ್ರಗಳಿಂದ ಆಯ್ಕೆ ಬಯಸಿರುವ ಲಾಲ್ಡುಹೊಮಾ.

ಅಭ್ಯರ್ಥಿ : ಲಾಲ್ ಥನ್ ಹವ್ಲಾ

ಪಕ್ಷ : ಕಾಂಗ್ರೆಸ್

ಕ್ಷೇತ್ರ : ಸೆರ್‍ಛಿಪ್, ಛಂಫಾಯ್ ದಕ್ಷಿಣ

ಮಿಜೋರಾಂ ಮುಖ್ಯಮಂತ್ರಿ ಲಾಲ್ ಥಾನ್ಹಾವಾಲಾ. 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಈಶಾನ್ಯ ರಾಜ್ಯಗಳ ಪ್ರಭಾವಿ ಕಾಂಗ್ರೆಸ್ ಮುಖಂಡ. 2008ರಿಂದಲೂ ಮಿಜೋರಾಂ ಸಿಎಂ ಆಗಿ ಆಡಳಿತ ನಡೆಸ್ತಿದ್ದಾರೆ. ಮಿಜೋರಾಂ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಹೌದು. ಸರ್ಕಾರಿ ಅಧಿಕಾರಿ ಆಗಿದ್ದರು. 1967ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರ್ಪಡೆ ಆದ್ರು. 1978ರಲ್ಲಿ ಮಿಜೋರಾಂ ಶಾಸನಸಭೆಗೆ ಮೊದಲ ಬಾರಿಗೆ ಆಯ್ಕೆಯಾದ್ರು. 2013ರಲ್ಲಿ ಒಟ್ಟು 40 ಸೀಟುಗಳ ಪೈಕಿ 34 ಕಾಂಗ್ರೆಸ್ ಶಾಸಕನ್ನು ಗೆಲ್ಲಿಸಿದ್ರು.

                        ಛತ್ತೀಸ್​ಗಢ

ಬಿಜೆಪಿಯ 15 ವರ್ಷದ ಆಡಳಿತ ಕೊನೆಗೊಳಿಸಿದ ಕಾಂಗ್ರೆಸ್..!

90 ಕ್ಷೇತ್ರಗಳಲ್ಲಿ ಕಾಂಗ್ರೆಸ್ 67 ಸ್ಥಾನದೊಂದಿಗೆ ಆಡಳಿತವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

6.14 ಸಂಜೆ : ಕಾಂಗ್ರೆಸ್ ಗೆಲುವು ಬಹುತೇಕ ಖಚಿತ. 20 ಕ್ಷೇತ್ರಗಳಲ್ಲಿ ಈಗಾಗಲೇ ಗೆದ್ದಿರೋ ಕಾಂಗ್ರೆಸ್ 47 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದಿರಿಸಿಕೊಂಡಿದೆ.

4.18 ಮಧ್ಯಾಹ್ನ :  ಕಾಂಗ್ರೆಸ್ 54ರಲ್ಲಿ ಮುನ್ನಡೆ, 11ರಲ್ಲಿ ಗೆಲುವು ಪಡೆದಿದೆ. ಬಿಜೆಪಿ 17ರಲ್ಲಿ ಮುನ್ನಡೆ ಕಾಯ್ದಿರಿಸಿಕೊಂಡಿದೆ.

3.29 ಮಧ್ಯಾಹ್ನ : ಬಿಜೆಪಿ17ರಲ್ಲಿ ಮುನ್ನಡೆ, ಕಾಂಗ್ರೆಸ್ 65ರಲ್ಲಿ ಮುನ್ನಡೆ, 1ರಲ್ಲಿ ಗೆಲುವು. ಇತರೆ 7ರಲ್ಲಿ ಮುನ್ನಡೆ.

3.09 ಮಧ್ಯಾಹ್ನ : ಬಿಜೆಪಿ 17ರಲ್ಲಿ ಮುನ್ನಡೆ, ಕಾಂಗ್ರೆಸ್ 65ರಲ್ಲಿ ಮುನ್ನಡೆ, 1ರಲ್ಲಿ ಗೆಲುವು. ಇತರೆ 7ರಲ್ಲಿ ಮುನ್ನಡೆ.

1.47 ಮಧ್ಯಾಹ್ನ :  ಬಿಜೆಪಿ 20 ಮುನ್ನಡೆ, ಕಾಂಗ್ರೆಸ್ 64, ಇತರೆ 6 ರಲ್ಲಿ ಮುನ್ನಡೆ.

1.17 ಮಧ್ಯಾಹ್ನ : ಬಿಜೆಪಿ. 18, ಕಾಂಗ್ರೆಸ್ 66 ಮತ್ತು ಇತರೆ 6 ಕ್ಷೇತ್ರಗಳಲ್ಲಿ ಮುನ್ನಡೆ ಇದೆ.

1.01 ಮಧ್ಯಾಹ್ನ : ಬಿಜೆಪಿ 17, ಕಾಂಗ್ರೆಸ್​ 67, ಇತರೆ 6 ಕಡೆಗಳಲ್ಲಿ ಮುನ್ನಡೆ.

12.46 ಮಧ್ಯಾಹ್ನ : ಬಿಜೆಪಿ 16, ಕಾಂಗ್ರೆಸ್ 67, ಇತರೆ 7 ಕ್ಷೇತ್ರಗಳಲ್ಲಿ ಮುನ್ನಡೆ.

12.29 ಮಧ್ಯಾಹ್ನ : ಬಿಜೆಪಿ 18, ಕಾಂಗ್ರೆಸ್ 66, ಇತರೆ 6 ಮುನ್ನಡೆ.

12.14 ಮಧ್ಯಾಹ್ನ : ಬಿಜೆಪಿ 18, ಕಾಂಗ್ರೆಸ್ 64 ಸ್ಥಾನಗಳ ಮುನ್ನಡೆ.

11.55 ಬೆಳಗ್ಗೆ : ಕಾಂಗ್ರೆಸ್​ 60, ಬಿಜೆಪಿ 20, ಬಿಎಸ್​ಪಿ 10ರಲ್ಲಿ ಮುನ್ನಡೆ.

11.47 ಬೆಳಗ್ಗೆ : ಕಾಂಗ್ರೆಸ್ 59, ಬಿಜೆಪಿ 22, ಬಿಎಸ್​ಪಿ 8ರಲ್ಲಿ ಮುನ್ನಡೆ ಪಡೆದಿದೆ.

11.37 ಬೆಳಗ್ಗೆ : ಕಾಂಗ್ರೆಸ್​ 57, ಬಿಜೆಪಿ 24, ಬಿಎಸ್​ಪಿ+ 8, ಇತರೆ 1ರಲ್ಲಿ ಮುನ್ನಡೆ.

10.57 ಬೆಳಗ್ಗೆ : ಕಾಂಗ್ರೆಸ್​ 53, ಬಿಜೆಪಿ 26, ಬಿಎಸ್​ಪಿ+ 10ರಲ್ಲಿ ಮುನ್ನಡೆ.

10. 40 ಬೆಳಗ್ಗೆ : ಬಿಜೆಪಿ 26, ಕಾಂಗ್ರೆಸ್ 53, ಬಿಎಸ್​ಪಿ +3, ಇತರೆ 1ರಲ್ಲಿ ಮುನ್ನಡೆ.

10.25 ಬೆಳಗ್ಗೆ : ಬಿಜೆಪಿ 27, ಕಾಂಗ್ರೆಸ್ 51, ಬಿಎಸ್​ಪಿ+ 8, ಇತರೆ 1ರಲ್ಲಿ ಮುನ್ನಡೆ.

10.04 ಬೆಳಗ್ಗೆ : ಬಿಜೆಪಿ 26, ಕಾಂಗ್ರೆಸ್ 51, ಬಿಎಸ್​ಪಿ+ 6, ಇತರೆ 3ರಲ್ಲಿ ಮುನ್ನಡೆ.

10.04 ಬೆಳಗ್ಗೆ : ಬಿಜೆಪಿ 21, ಕಾಂಗ್ರೆಸ್​ 55, ಬಿಎಸ್​ಪಿ 3, ಇತರೆ 13ರಲ್ಲಿ ಮುನ್ನಡೆ ಇದೆ.

9.57 ಬೆಳಗ್ಗೆ : ಬಿಜೆಪಿ 21, ಕಾಂಗ್ರೆಸ್ 55, ಬಿಎಸ್​ಪಿ+5, ಇತರೆ 1

9.51 ಬೆಳಗ್ಗೆ : ಬಿಜೆಪಿ 27, ಕಾಂಗ್ರೆಸ್ + 98, ಬಿಎಸ್​ಪಿ 3, ಇತರೆ 15ರಲ್ಲಿ ಮುನ್ನಡೆ.

9.42 ಬೆಳಗ್ಗೆ : ಬಿಜೆಪಿ 22, ಕಾಂಗ್ರೆಸ್​ 57, ಇತರೆ 7ರಲ್ಲಿ ಮುನ್ನಡೆ.

9.36 ಬೆಳಗ್ಗೆ : ಬಿಜೆಪಿ 25, ಕಾಂಗ್ರೆಸ್​ 43, ಬಿಎಸ್​ಪಿ+4, ಇತರೆ 1

9.25 ಬೆಳಗ್ಗೆ :ಸರಳ ಬಹುಮತಕ್ಕೆ ಬೇಕಿರೋದು 46 ಸ್ಥಾನ. ಈಗಾಗಲೇ ಕಾಂಗ್ರೆಸ್ 46 ಸ್ಥಾನಗಳಲ್ಲಿ ಭರ್ಜರಿ ಆರಂಭಿಕ ಮುನ್ನಡೆ ಪಡೆದಿದೆ.

9.20 ಬೆಳಗ್ಗೆ : ಬಿಜೆಪಿ 28, ಕಾಂಗ್ರೆಸ್ 31, ಬಿಎಸ್​ಪಿ+4

9.05 ಬೆಳಗ್ಗೆ : ಬಿಜೆಪಿ 27, ಕಾಂಗ್ರೆಸ್ 19, ಬಿಎಸ್​ಪಿ+4, ಇತರೆ 1

8.55 ಬೆಳಗ್ಗೆ : ಬಿಜೆಪಿ 22, ಕಾಂಗ್ರೆಸ್ 18, ಬಿಎಸ್​ಪಿ+3, ಇತರೆ 1 ಮುನ್ನಡೆ.

8.00 ಬೆಳಗ್ಗೆ : ಬಿಜೆಪಿ 32, ಕಾಂಗ್ರೆಸ್ 29 ಸ್ಥಾನಗಳಲ್ಲಿ ಹಾಗೂ ಪಕ್ಷೇತರರು ಎರಡು ಸ್ಥಾನಗಳಲ್ಲಿ ಮುನ್ನಡೆ.

7.55 ಬೆಳಗ್ಗೆ : ಮತ ಎಣಿಕೆ ಆರಂಭ

ಈ ಬಾರಿ ಛತ್ತಿಸ್​ಗಡ ರಾಜ್ಯದ ಫಲಿತಾಂಶದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಆರಂಭವಾಗಿದೆ.ಒಟ್ಟು 27 ಜಿಲ್ಲಾ ಕೇಂದ್ರಗಳಲ್ಲಿ ಮತಎಣಿಕೆ ನಡೆಯುತ್ತಿದೆ. ಇನ್ನು ಭದ್ರತೆಗಾಗಿ ಮತಕೇಂದ್ರಗಳಲ್ಲಿ 5 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಜೊತೆಗೆ ಸಿಸಿಟಿವಿಯ ಕಣ್ಗಾವಲು ಸಹ ಇರಲಿದೆ. ಇನ್ನು ಮೊದಲ ಸುತ್ತಿನ ಮತ ಎಣಿಕೆ ಡಿಸ್ ಪ್ಲೇ ಆದ ಬಳಿಕವಷ್ಟೇ ಮತ್ತೊಂದು ಸುತ್ತಿನ ಮತಎಣಿಕೆ ಆರಂಭವಾಗಲಿದ್ದು, ಯಾವುದೇ ಗೊಂದಲಗಳಿಗೆ ಅವಕಾಶ ಕೊಡದಂತೆ ಪ್ಲಾನ್ ಮಾಡಲಾಗಿದೆ.

ಒಟ್ಟು ಕ್ಷೇತ್ರಗಳು- 90, ಮ್ಯಾಜಿಕ್ ನಂಬರ್ 46 

ಘಟಾನುಘಟಿಗಳು

ಅಭ್ಯರ್ಥಿ : ರಮಣ್ ಸಿಂಗ್

ಪಕ್ಷ: ಬಿಜೆಪಿ

ಕ್ಷೇತ್ರ : ರಾಜ್‍ನಂದಗಾಂವ್

ಹಾಲಿ ಛತ್ತೀಸ್‍ಗಢದ ಮುಖ್ಯಮಂತ್ರಿ ರಮಣ್ ಸಿಂಗ್. 1990ರಲ್ಲಿ ಮೊದಲ ಬಾರಿಗೆ ಮಧ್ಯಪ್ರದೇಶ ವಿಧಾನಸಭೆಗೆ ಆಯ್ಕೆ ಆದವರು.

1999ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆ ಆಗಿದ್ದ ರಮಣ್ ಸಿಂಗ್. 1999ರಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ಸಚಿವರಾಗಿದ್ರು. 2004ರಲ್ಲಿ ಛತ್ತೀಸ್‍ಗಢ ವಿಧಾನಸಭೆಗೆ ಪ್ರವೇಶಿಸಿದ್ರು. 2003ರಲ್ಲಿ ಛತ್ತೀಸ್‍ಗಢ ಮುಖ್ಯಮಂತ್ರಿಯಾದ್ರು. 2008ರಲ್ಲಿ 2ನೇ ಬಾರಿಗೆ ಛತ್ತೀಸ್‍ಗಢ ಮುಖ್ಯಮಂತ್ರಿಯಾಗಿ ಆಯ್ಕೆಯಾದ್ರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರಾಗಿರೋ ರಮಣ್ ಸಿಂಗ್.

ಅಭ್ಯರ್ಥಿ : ಅಜಿತ್ ಜೋಗಿ

ಪಕ್ಷ : ಜನತಾ ಕಾಂಗ್ರೆಸ್ ಛತ್ತೀಸ್‍ಗಢ

ಕ್ಷೇತ್ರ : ಮರ್ವಾಹಿ

ಛತ್ತೀಸ್‍ಗಢದ ಮೊದಲ ಮುಖ್ಯಮಂತ್ರಿ, ಛತ್ತೀಸ್‍ಗಢ ರಾಜ್ಯವಾದ ಮೇಲೆ ಮೊದಲ 3 ವರ್ಷ ಸಿಎಂ ಅಜಿತ್ ಜೋಗಿ.2003ರ ನಂತರ ರಮಣ್ ಸಿಂಗ್ ನೇತೃತ್ವದಲ್ಲಿ ನಿರಂತರ ಆಡಳಿತ ನಡೆಸುತ್ತಿದೆ. 1986ರಲ್ಲಿ ಮೊದಲ ಬಾರಿಗೆ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ರು. 1998ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ್ರು. 2004 ಮತ್ತು 2008 ರಲ್ಲಿಯೂ ಸಂಸದರಾಗಿ ಆಯ್ಕೆಯಾಗಿದ್ರು. ಈ ಸಲ ಬಿಎಸ್‍ಪಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಅಜಿತ್ ಜೋಗಿ.

ಅಭ್ಯರ್ಥಿ : ಕರುಣಾ ಶುಕ್ಲಾ

ಪಕ್ಷ : ಕಾಂಗ್ರೆಸ್

ಕ್ಷೇತ್ರ: ರಾಜ್‍ನಂದಗಾಂವ್

ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧಿ, 32 ವರ್ಷ ಬಿಜೆಪಿಯಲ್ಲಿದ್ದ ಕರುಣಾ ಶುಕ್ಲಾ ಬಿಜೆಪಿಯಿಂದ ಸಂಸದೆಯಾಗಿ ಆಯ್ಕೆಯಾಗಿದ್ದ ಕರುಣಾ ಶುಕ್ಲಾ 2014ರಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾದ್ರು. ಈ ಸಲ ಸಿಎಂ ರಮಣ್ ಸಿಂಗ್ ವಿರುದ್ಧ ಕಣದಲ್ಲಿದ್ದಾರೆ.

RELATED ARTICLES

Related Articles

TRENDING ARTICLES