Friday, January 3, 2025

ಅಜರುದ್ದೀನ್ ರೀತಿ ನನ್ನ ನಿಷೇಧವನ್ನೂ ಹಿಂಪಡೆಯಬಹದುಲ್ಲವೇ..?

ಐಪಿಎಲ್ ನ ಸ್ಪಾರ್ಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಜೀವ ನಿಷೇಧಕ್ಕೆ ಒಳಗಾಗಿರೋ ಶ್ರೀಶಾಂತ್ ಸುಪ್ರೀಕೋರ್ಟ್ ಮೊರೆ ಹೋಗಿದ್ದು, ಅಜರುದ್ದೀನ್ ಅವರಂತೆ ತನ್ನ ನಿಷೇಧವನ್ನೂ ತೆರವುಗೊಳಿಸಿ ಅಂತ ಮನವಿ ಮಾಡಿಕೊಂಡಿದ್ದಾರೆ.
ಶ್ರೀಶಾಂತ್ 2013ರ ಐಪಿಎಲ್ ವೇಳೆ ಸ್ಪಾರ್ಟ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪವನ್ನು ಎದುರಿಸುತ್ತಿರೋ ಶ್ರೀಶಾಂತ್, ಟೀಮ್ ಇಂಡಿಯಾ ಮಾ ಜಿ ನಾಯಕ ಅಜರುದ್ದೀನ್ ಅವರ ಪ್ರಕರಣವನ್ನು ಸುಪ್ರೀಂಕೋರ್ಟ್ ನಲ್ಲಿ ಪ್ರಸ್ತಾಪಿಸಿದ್ದಾರೆ.
2000ನೇ ಇಸವಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ಆರೋಪ ಅಜರುದ್ದೀನ್ ಎದುರಿಸಿದ್ರು. ಆಂಧ್ರಪ್ರದೇಶ ಹೈಕೋರ್ಟ್ 2012 ನವೆಂಬರ್ 8ರಂದು ಇವರ ಮೇಲಿನ ನಿಷೇಧವನ್ನು ತೆರವು ಮಾಡಿತ್ತು. ಈ ವಿಷ್ಯವನ್ನು ಪ್ರಸ್ತಾಪಿಸಿರುವ ಶ್ರೀಶಾಂತ್, ”ಅಜರುದ್ದೀನ್ ನಿಷೇಧ ಹಿಂಪಡೆಯಬಹುದಾದರೆ, ನನ್ನ ಆಜೀವ ನಿಷೇಧವನ್ನೂ ಯಾಕೆ ವಾಪಸ್ಸು ಪಡೆಯಬಾರದು” ಅಂತ ಸುಪ್ರೀಕೋರ್ಟ್ ನಲ್ಲಿ ಕೇಳಿದ್ದಾರೆ.
”ಶ್ರೀಶಾಂತ್​ಗೆ 35 ವರ್ಷ ವಯಸ್ಸು. ಈ ಕೂಡಲೇ ಅವರ ನಿಷೇಧವನ್ನು ತೆರವು ಮಾಡದಿದ್ದರೆ ಅವರ ಕ್ರಿಕೆಟ್ ಕೆರಿಯರ್ ಅಂತ್ಯವಾಗುತ್ತೆ. ಕೌಂಟಿ ಸೇರಿದಂತೆ ಹತ್ತಾರು ಅವಕಾಶಗಳು ಶ್ರೀಶಾಂತ್ ಮುಂದಿದೆ” ಎಂದು ಶ್ರೀಶಾಂತ್ ಪರ ವಕೀಲ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.
ನ್ಯಾ.ಅಶೋಕ್ ಭೂಷಣ್ ಮತ್ತು ಅಜಯ್ ರಸ್ಟೋಗಿ ಅವರ ನೇತೃತ್ವದ ಪೀಠ ಶ್ರೀಶಾಂತ್ ಅರ್ಜಿಯನ್ನು ಪರಿಗಣಿಸಿದ್ದು, ವಿಚಾರಣೆಯನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿದೆ.

RELATED ARTICLES

Related Articles

TRENDING ARTICLES