ಜನರಿಗೊಂದು ನ್ಯಾಯ, ಶಾಸಕರಿಗೊಂದು ನ್ಯಾಯ..! ಇದೆಂಥಾ ಪ್ರಜಾಪ್ರಭುತ್ವ..? ಮುಖ್ಯಮಂತ್ರಿ ಪರಿಹಾರ ನಿಧಿಗೆ ಜನ ಪರದಾಡಬೇಕು. ಆದ್ರೆ, ಜನಪ್ರತಿನಿಧಿಗಳಿಗೆ ಇವೆಲ್ಲಾ ಆರಾಮಾಗಿ ಸಿಗುತ್ತೆ.
ಹೌದು, ಆರ್ ಟಿಐ ನಲ್ಲಿ ಬಯಲಾಗಿದೆ ‘ಮೆಡಿಕಲ್ ಬಿಲ್ ಕರ್ಮಕಾಂಡ’. ಶಾಸಕರು ಮತ್ತು ಅವರ ಫ್ಯಾಮಿಲಿಯ ಮೆಡಿಕಲ್ ಖರ್ಚು ನೋಡಿದ್ರೆ ತಲೆ ತಿರುಗುತ್ತೆ..! 2013ರ ಏಪ್ರಿಲ್ ನಿಂದ ಇಲ್ಲಿಯವರೆಗೆ ಮಾಜಿ, ಹಾಲಿ ಶಾಸಕರ ಮೆಡಿಕಲ್ ಬಿಲ್ ಬಹಿರಂಗವಾಗಿದೆ. ಶಾಸಕರು ಸಾರ್ವಜನಿಕರ ದುಡ್ಡಲ್ಲಿ ಟ್ರೀಟ್ಮೆಂಟ್ ಪಡೆದು ‘ಭರ್ಜರಿ’ ಬಿಲ್ ಮಾಡಿದ್ದಾರೆ..!
ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ 70ಲಕ್ಷ, ಮಾಜಿ ಶಾಸಕ ದಿ. ಚಿಕ್ಕಮಾದು 32 ಲಕ್ಷ ರೂ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ್ 14 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಮಾಜಿ ಶಾಸಕ ವೈಎಸ್ ವಿ ದತ್ತ ತಮ್ಮ ಪತ್ನಿಯ ಆರೋಗ್ಯಕ್ಕಾಗಿ ಖರ್ಚು ಮಾಡಿರೋದು 32 ಲಕ್ಷ..! ಶಾಸಕ ಆರ್. ಅಶೋಕ್ ರಿಂದ 4,75,000 ರೂಪಾಯಿ. ಶಾಸಕ ಗೋಪಾಲಯ್ಯರಿಂದ 6,75,000ಸಾವಿರ ರೂಪಾಯಿ ಖರ್ಚು. ಕುಮಾರಸ್ವಾಮಿ ಶಾಸಕರಾಗಿದ್ದಾಗ ಕಳೆದ ವರ್ಷ ಏಪ್ರಿಲ್ ನಲ್ಲಿ 11,20,932 ರೂ ಖರ್ಚು ಮಾಡಿದ್ರು..!
2015 -16 ರಲ್ಲಿ ಶಾಸಕರ ಮೆಡಿಕಲ್ ಬಿಲ್ 1,43,32,000 ರೂ. 2017-18ರಲ್ಲಿ ಶಾಸಕರ ಕುಟುಂಬದವರ ಮೆಡಿಕಲ್ ಬಿಲ್ 1,23,84,000 ರೂ..! 2018-19ರಲ್ಲಿ ಇಲ್ಲಿತನಕದ ಶಾಸಕರ ಮೆಡಿಕಲ್ ಬಿಲ್ ಬರೋಬ್ಬರಿ 72 ಲಕ್ಷ ರೂಪಾಯಿ..!
ಹೀಗೆ ಮುಖ್ಯಮಂತ್ರಿ ಪರಿಹಾರ ನಿಧಿ ದುಡ್ಡು ಜನಸಾಮಾನ್ಯರಿಗೆ ಸಿಗೋದು ಬಹಳ ಕಷ್ಟ. ಬರಬೇಕಾದ ಹಣವನ್ನು ಪಡೆಯಲು ಜನ ಹೈರಾಣಾಗುತ್ತಾರೆ. ಎಷ್ಟೋ ಮಂದಿ ಈ ಸರ್ಕಾರದ ಹಣಕ್ಕಾಗಿ ಓಡಾಟ ಮಾಡಿ ಸುಸ್ತಾಗಿ, ಬೇಡಪ್ಪಾ ಬೇಡ..ಸಾಕು ಅಂತ ಸುಮ್ನೆ ಕೂರ್ತಾರೆ. ಆದ್ರೆ, ಶಾಸಕರಿಗೆ ಮಾತ್ರೆ ಆರಾಮಾಗಿ ಕೋಟಿ ಕೋಟಿ ಬಿಲ್ ಮೊತ್ತ ಸಿಗುತ್ತೆ..!
ಜನರಿಗೊಂದು ನ್ಯಾಯ, ಶಾಸಕರಿಗೊಂದು ನ್ಯಾಯ – ಇದು ಮೆಡಿಕಲ್ ಬಿಲ್ ಕರ್ಮಕಾಂಡ..!
TRENDING ARTICLES