Wednesday, December 25, 2024

ಅಬ್ಬರದ ಚುನಾವಣಾ ಪ್ರಚಾರಕ್ಕೆ ತೆರೆ..!

ಜೈಪುರ: ನೂರಕ್ಕೂ ಹೆಚ್ಚು ಚುನಾವಣಾ ರ‍್ಯಾಲಿ ಹಾಗೂ ರೋಡ್​ ಶೋನೊಂದಿಗೆ ರಾಜಸ್ಥಾನದಲ್ಲಿ ನಡೆದ ಭರ್ಜರಿ ಚುನಾವಣಾ ಪ್ರಾಚಾರ ಇಂದು ಸಂಜೆ ಕೊನೆಯಾಗಿದೆ. ಶುಕ್ರವಾರ ವಿಧಾನಸಭಾ ಚುನಾವಣೆ ನಡೆಯಲಿದೆ.

199 ವಿಧಾನಸಭಾ ಕ್ಷೇತ್ರಗಳಿಂದ ಒಟ್ಟು 2,274 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಅಲ್ವಾರ್​ ರಾಮಘರ್​ ಕ್ಷೇತ್ರದಲ್ಲಿ ಬಿಎಸ್​ಪಿ ಅಭ್ಯರ್ಥಿ ನಿಧನರಾಗಿರುವುದರಿಂದ ಆ ಕ್ಷೇತ್ರದ ಚುನಾವಣೆ ದಿನಾಂಕ ಮುಂದೂಡಲಾಗಿದೆ.

“ಇಂದು ಸಂಜೆ 5 ಗಂಟೆಗೆ ಚುನಾವಣಾ ಪ್ರಚಾರ ಕೊನೆಗೊಂಡಿದೆ. ಶುಕ್ರವಾರ 199 ಕ್ಷೇತ್ರಗಳಲ್ಲಿ ಬೆಳಗ್ಗೆ 8ಗಂಟೆಯಿಂದ ಸಂಜೆ 5ರ ತನಕ ಚುನಾವಣೆ ನಡೆಯಲಿದೆ. ಚುನಾವಣೆಯ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನೂ ಒದಗಿಸಲಾಗಿದೆ” ಅಂತ ಮುಖ್ಯ ಚುನಾವಣಾಧಿಕಾರಿ ಆನಂದ್​ ಕುಮಾರ್​ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಒಟ್ಟು 4.7 ಮತದಾರರಿದ್ದಾರೆ. ಆರಂಭದ ದಿನಗಳ ಪ್ರಚಾರದಲ್ಲಿ ಕೃಷಿಕರ ಸಮಸ್ಯೆಗಳಿಗೆ ಹಾಗೂ ಭ್ರಷ್ಟಾಚಾರದ ವಿಚಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಹಾಗೇ ಹಿಂದುತ್ವದ ಕುರಿತಾಗಿಯೂ ರಾಜಕೀಯ ಮುಖಂಡರು ಪ್ರಚಾರದ ವೇಳೆ ಮಾತನಾಡಿದ್ದರು. ಪ್ರಧಾನಿ ಮೋದಿ, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​, ಕೇಂದ್ರ ಗೃಹ ಸಚಿವ ರಾಜ್​ನಾಥ್​ ಸಿಂಗ್​ ಸೇರಿ ಹಲವು ಬಿಜೆಪಿ ನಾಯಕರು ಪ್ರಚಾರದಲ್ಲಿ ತೊಡಗಿದ್ದರು. ಕಾಂಗ್ರೆಸ್​ನಿಂದ ಅಧ್ಯಕ್ಷ ರಾಹುಲ್​ಗಾಂಧಿ, ರಾಜಸ್ಥಾನ ಕಾಂಗ್ರೆಸ್​ ಅಧ್ಯಕ್ಷ ಸಚಿನ್​, ಮಾಜಿ ಸಿಎಂ ಅಶೋಕ್​ ಅವರು ಪ್ರಚಾರದಲ್ಲಿ ಭಾಗವಹಿಸಿದ್ದರು.  ಬಿಎಸ್​ಪಿಯ ಮಾಯಾವತಿ ಅವರೂ ಪ್ರಚಾರ ನಡೆಸಿದ್ದರು. ಡಿಸೆಂಬರ್​ 11ರಂದು ಮತ ಎಣಿಕೆ ನಡೆಯಲಿದೆ.

RELATED ARTICLES

Related Articles

TRENDING ARTICLES