ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ)ನಲ್ಲಿ ಪ್ರಯೋಗ ನಡೆಸುವಾಗ ಸಿಲಿಂಡರ್ ಸ್ಫೋಟಗೊಂಡು ವಿಜ್ಞಾನಿ ಮೃತಪಟ್ಟಿರುವ ಘಟನೆ ನಡೆದಿದೆ.
ಹೈದರಾಬಾದ್ ಮೂಲದ ಏರೋಸ್ಪೇಸ್ ವಿಭಾಗದ ವಿಜ್ಞಾನಿ ಮನೋಜ್ ಕುಮಾರ್(32) ಮೃತಪಟ್ಟವರು. ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಸ್ಫೋಟ ನಡೆದಿದೆ. ಪ್ರಯೋಗಾಲಯದಲ್ಲಿ ಅಡುಗೆ ಅನಿಲವಿದ್ದ ಕಾರಣ ಇದರಿಂದಲೇ ಸ್ಫೋಟ ಸಂಭವಿಸರಬಹುದೆಂದು ಅಂದಾಜಿಸಲಾಗಿದೆ.