2019ರ ಐಪಿಎಲ್ ಆರಂಭಕ್ಕೆ ಇನ್ನು ಹಲವು ತಿಂಗಳುಗಳಿರುವಾಗಲೇ ಪ್ರಾಂಚೈಸಿಗಳಲ್ಲಿ ಕಾರ್ಯ ಚಟುವಟಿಕೆಗಳು ಜೋರಾಗಿವೆ. ಎಲ್ಲಾ ತಂಡಗಳು ಡಿಸೆಂಬರ್ 17 ಹಾಗೂ 18ರಂದು ಜೈಪುರದಲ್ಲಿ ನಡೆಯುವ ಬಿಡ್ಡಿಂಗ್ನಲ್ಲಿ ಆಟಗಾರರನ್ನು ಖರೀದಿಸುವ ಬಗ್ಗೆ ತಲೆಕೆಡಿಸಿಕೊಂಡಿವೆ. ಆದ್ರೆ, ಟೂರ್ನಿಯ ಪ್ರಮುಖ ತಂಡವೊಂದು ತನ್ನ ಹೆಸರನ್ನೆ ಬದಲಿಸಿದೆ.
ಹೌದು..! ಇಷ್ಟು ದಿನ ಡೆಲ್ಲಿ ಡೇರ್ಡೆವಿಲ್ಸ್ ಆಗಿದ್ದ ತಂಡ ಇನ್ಮುಂದೆ ಡೆಲ್ಲಿ ಕ್ಯಾಪಿಟಲ್ ಆಗಿದೆ. ಐಪಿಎಲ್ ಆರಂಭದಿಂದಲೂ ಡೆಲ್ಲಿ ಡೇರ್ಡೆವಿಲ್ಸ್ ಆಗಿ ಅಭಿಮಾನಿಗಳನ್ನ ರಂಜಿಸಿದ್ದ ಟೀಮ್ ಇದೀಗ ಡೆಲ್ಲಿ ಕ್ಯಾಪಿಟಲ್ ಅಂತ ಮರು ನಾಮಕರಣ ಮಾಡಿಕೊಂಡಿದೆ.
ಟೂರ್ನಿ ಆರಂಭದ 2 ಆವೃತ್ತಿಗಳಲ್ಲಿ ಸೆಮೀಸ್ ಪ್ರವೇಶಿಸಿದ್ದ ಡೆಲ್ಲಿ ಡೇರ್ಡೆವಿಲ್ಸ್, ಬಳಿಕ 2012ರಲ್ಲಿ ಫ್ಲೇ ಆಫ್ ಸುತ್ತು ಪ್ರವೇಶಿಸಿದ್ದನ್ನ ಬಿಟ್ರೆ ಹೇಳಿಕೊಳ್ಳುವಂಥಾ ಪ್ರದರ್ಶನವನ್ನ ನೀಡಿಲ್ಲ. ಆದ್ರೆ 2019ರ ಆವೃತ್ತಿಗೆ ತಂಡ ಹಲವು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಅದಲ್ಲದೇ ಸ್ಫೋಟಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರು ಸನ್ ರೈಸರ್ಸ್ ತೊರೆದು ಡೆಲ್ಲಿ ಸೇರಿರುವುದು ತಂಡಕ್ಕೆ ಆನೆ ಬಲ ಬಂದಂತಾಗಿದೆ.
ಈ ಮೊದಲು ನಾಯಕತ್ವ ಹಾಗೂ ಆಟಗಾರರಲ್ಲಿ ಹಲವು ಬದಲಾವಣೆಗಳನ್ನ ಮಾಡಿದ್ದ ತಂಡ ಇದೀಗ ಮರು ನಾಮಕರಣವನ್ನೂ ಮಾಡಿದೆ. ಒಟ್ಟಿನಲ್ಲಿ ಹಲವು ಬದಲಾವಣೆಗಳೊಂದಿಗೆ 2019ರ ಐಪಿಎಲ್ಗೆ ಸಜ್ಜಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿಯಲ್ಲಿ ಹೇಗೆ ಪ್ರದರ್ಶನ ನೀಡುತ್ತೆ ಅನ್ನೋದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಡೆಲ್ಲಿ ಡೇರ್ ಡೆವಿಲ್ಸ್ಗೆ ಮರು ನಾಮಕರಣ..!
TRENDING ARTICLES