Monday, January 27, 2025

ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ

ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಅಂಬರೀಶ್​ ಪಾರ್ಥಿವ ಶರೀರ ತಲುಪಿದೆ. ಕ್ರೀಡಾಂಗಣದಲ್ಲಿ ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದು, ಹಿರಿಯ ನಟನಿಗೆ ಅಂತಿಮ ನಮನ ಸಲ್ಲಿಸಲು ಸಾಗರೋಪಾದಿಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. “ಪಾರ್ಥಿವ ಶರೀರ ವೀಕ್ಷಣೆಗೆ ಬಿಡುತ್ತಿಲ್ಲ, ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ” ಅಂತ ಅಭಿಮಾನಿಗಳು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಸಾರ್ವಜನಿಕರು ಅಂಬರೀಶ್​ ಅವರು ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿರುವುದರಿಂದ ಪೊಲೀಸರು ಬಹಳ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ಧಾರೆ.

ಸೋಮವಾರ ( ನ.26) ಬೆಳಗ್ಗೆ 6ಗಂಟೆಯ ವರೆಗೆ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಗಲಿದ ‘ಅಂಬಿ’ಗನಿಗೆ ಅಂತಿಮ ನಮನ ಸಲ್ಲಿಸೋ ಅವಕಾಶವಿದೆ. ನಂತರ ಬೆಂಗಳೂರಿಗೆ ಅಂಬಿಯ ಪಾರ್ಥಿವ ಶರೀರವನ್ನು ವಾಪಸ್ಸು ತರಲಾಗುತ್ತದೆ. ಕಂಠೀರವ ಸ್ಟುಡಿಯೋದಲ್ಲಿರುವ ವರನಟ ಡಾ. ರಾಜ್​ಕುಮಾರ್​ ಅವರ ಸಮಾಧಿ ಬಳಿಯೇ ಅಂಬರೀಶ್​ ಅವರ ಅಂತ್ಯಕ್ರಿಯೆ ನೆರವೇರಲಿದೆ.

ಅಂಬಿ ಪಾರ್ಥಿವ ಶರೀರ ಮಂಡ್ಯಕ್ಕೆ ರವಾನೆ

ನಾಳೆ ಮಧ್ಯಾಹ್ನ ಕಂಠೀರವ ಸ್ಟೂಡಿಯೋದಲ್ಲಿ ಅಂಬಿ ಅಂತ್ಯಕ್ರಿಯೆ

ಅಂಬರೀಶ್​ಗೆ ಮಂಡ್ಯದ ಗಂಡು ಬಿರುದು ಕೊಟ್ಟವರು ಜಿ.ಮಾದೇಗೌಡ್ರು..!

ಏರ್​ಲಿಫ್ಟ್ ಮೂಲಕ ಮಂಡ್ಯಕ್ಕೆ ಅಂಬರೀಶ್ ಪಾರ್ಥಿವ ಶರೀರ

ಸಾವಿನಲ್ಲೂ ಒಂದಾದ ಅಂಬಿ ಸಹೋದರರು..!

ರಾಜ್ಯ- ರಾಷ್ಟ್ರಮಟ್ಟದ ಧ್ವನಿಯಾಗಿದ್ದರು ಅಂಬರೀಶ್ -ಪಿಎಂ ಮೋದಿ

ಅಂಬರಕ್ಕೇರಿದ ‘ಅಂಬಿ’ಗ..!

ಕಂಠೀರವ ಸ್ಟೇಡಿಯಂ ತಲುಪಿದ ಅಂಬಿ ಪ್ರಾರ್ಥಿವ ಶರೀರ

ಅಂಬಿಗೆ ಗುರುವಾರ ಕರೆಮಾಡಿದ್ದೆ… ಕನೆಕ್ಟ್ ಆಗಿರ್ಲಿಲ್ಲ -ಜಗ್ಗೇಶ್

ಪಯಣ ಮುಗಿಸಿದ ‘ಅಂಬಿ’ಗನ ಕೊನೆಯ ಪತ್ರ..!

ಡಾ.ರಾಜ್ ಸಮಾಧಿ ಬಳಿ ಅಂಬಿ ಅಂತ್ಯಕ್ರಿಯೆ

ರಾಜ್ಯದ ಪಾಲಿಗೆ ಕರಾಳ ದಿನ – ಡಾ.ಜಿ ಪರಮೇಶ್ವರ್

ಅಂಬರೀಶ್ ಅವರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ : ಬಿಎಸ್ ವೈ

ಅಂಬರೀಶ್ ಅಜಾತಶತ್ರು -ಸಿದ್ದರಾಮಯ್ಯ

ಅಂಬರೀಶ್ ಅವರ ಅಗಲಿಕೆ ಆಘಾತವನ್ನುಂಟು ಮಾಡಿದೆ : ಎಚ್.ಡಿ ದೇವೇಗೌಡ್ರು

ಅಪ್ಪಾಜಿಯನ್ನು ಕಳೆದುಕೊಂಡಿದ್ದನ್ನು ಅರಗಿಸಿಕೊಳ್ಳಲಾಗ್ತಿಲ್ಲ – ದರ್ಶನ್

ಹುಸಿ ಕೋಪದಿಂದಲೇ ಪ್ರೀತಿ ಸಂಪಾದಿಸಿದ್ದ ಎಲ್ಲರ ಅಣ್ಣ ಅಂಬಿ – ಡಿ.ವಿ ಸದಾನಂದ ಗೌಡ

ಅಂಬರೀಶ್ ನಿಧನಕ್ಕೆ ರಜನಿಕಾಂತ್ ಸಂತಾಪ

ರೆಬಲ್ ಸ್ಟಾರ್ ಅಂಬರೀಶ್ ವಿಧಿವಶ

RELATED ARTICLES

Related Articles

TRENDING ARTICLES