Friday, July 19, 2024

ಭಾರತಕ್ಕೆ 6 ವಿಕೆಟ್ ಜಯ ; ಸರಣಿ ಸಮಬಲ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ 20 ಮ್ಯಾಚ್ ನಲ್ಲಿ ಟೀಮ್ಇಂಡಿಯಾ 6 ವಿಕೆಟ್ ಅಂತರದ ಜಯ ಸಾಧಿಸಿದೆ. ಕ್ಯಾಪ್ಟನ್ ವಿರಾಟ್ ಕೊಹ್ಲಿಯವರ ಆಕರ್ಷಕ ಅರ್ಧಶತಕದ ನೆರವಿನಿಂದ ಟೀಮ್ಇಂಡಿಯಾ 3 ಪಂದ್ಯಗಳ ಟಿ-20 ಸರಣಿಯನ್ನ 1-1ರ ಅಂತರದ ಸಮಬಲಗೊಳಿಸಿಕೊಳ್ಳುವಲ್ಲಿ ಯಶಸ್ವಿಯಾಯ್ತು. ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿತ್ತು. 2ನೇ ಮ್ಯಾಚ್ ಮಳೆಯಿಂದಾಗಿ ರದ್ದಾಗಿತ್ತು. ಇಂದಿನ ಪಂದ್ಯದಲ್ಲಿ ಟೀಮ್ಇಂಡಿಯಾ ಸೋತಿದ್ರೆ ಸರಣಿ ಕೈ ಜಾರುತಿತ್ತು. ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತ್ತು. ಆರಂಭಿಕರಾಗಿ ಕಣಕ್ಕಿಳಿದ ನಾಯಕ ಆ್ಯರೋನ್ ಫಿಂಚ್ ಹಾಗೂ ಡಾರ್ಸಿ ಶಾರ್ಟ್ ತಂಡಕ್ಕೆ ಅಬ್ಬರದ ಆರಂಭ ಒದಗಿಸಿದ್ರು. ಈ ಜೋಡಿ ಮೊದಲ ವಿಕೆಟ್ ಗೆ 8.3 ಓವರ್ ಗಳಲ್ಲಿ 68 ರನ್ ಪೇರಿಸಿದರು. ಆದರೆ, ಭಾರತದ ಪರ ನಿಖರ ದಾಳಿ ಸಂಘಟಿಸಿದ ಕುಲ್ದೀಪ್ ಯಾದವ್ ಹಾಗೂ ಕೃಣಾಲ್ ಪಾಂಡ್ಯ ಆಸೀಸ್ ರನ್ ಓಟಕ್ಕೆ ಕಡಿವಾಣ ಹಾಕಿದ್ರು. ಅಂತಿಮವಾಗಿ ಕಾಂಗರೂ ಪಡೆ 6 ವಿಕೆಟ್ ನಷ್ಟಕ್ಕೆ 164 ರನ್ ಗಳ ಸವಾಲಿನ ಮೊತ್ತ ಪೇರಿಸಿತು. ಭಾರತದ ಪರ ಕೃಣಾಲ್ ಪಾಂಡ್ಯ 4 ವಿಕೆಟ್, ಕುಲ್ದೀಪ್ ಯಾದವ್ 1 ವಿಕೆಟ್ ಪಡೆದುಕೊಂಡ್ರು. 165ರನ್ ಗಳು ಟಾರ್ಗೆಟ್ ಪಡೆದುಕೊಂಡ ಟೀಮ್ಇಂಡಿಯಾ ಉತ್ತಮ ಪ್ರದರ್ಶನ ನೀಡಿತು. ಟೀಮ್ಇಂಡಿಯಾ ಪರ ಶಿಖರ್ ಧವನ್ ಕೇವಲ 22 ಬಾಲ್ ಗಳಲ್ಲಿ 41 ರನ್, ರೋಹಿತ್ ಶರ್ಮಾ 23 ರನ್ ಗಳಿಸಿದ್ರು. ಕನ್ನಡಿಗ ಕೆಎಲ್ ರಾಹುಲ್ ಈ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲಿಲ್ಲ. ಜೊತೆಗೆ ರಿಷಬ್ ಪಂತ್ ಕೂಡ ನಿರಾಸೆ ಮೂಡಿಸಿದರು. ಆದರೆ ಸಮಯೋಜಿತ ಇನ್ನಿಂಗ್ಸ್ ಕಟ್ಟಿದ ಕ್ಯಾಪ್ಟನ್ ಕೊಹ್ಲಿ ಭಾರತವನ್ನ ಗೆಲುವಿನ ದಡ ಸೇರಿಸಿದ್ರು. 41 ಎಸೆತಗಳಲ್ಲಿ ಕೊಹ್ಲಿ ಅಮೋಘ 61 ರನ್ ಮಾಡಿದ್ರು. ಇನ್ನು 4 ಪ್ರಮುಖ ವಿಕೆಟ್ ಉರುಳಿಸಿ ಭಾರತದ ಗೆಲುವಿಗೆ ಪಾತ್ರರಾದ ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರೆ, ಸರಣಿಯೂದ್ದಕ್ಕೂ ಬೆಸ್ಟ್ ಫರ್ಪಾಮೆನ್ಸ್ ನೀಡಿದ ಶಿಖರ್ ಧವನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.

RELATED ARTICLES

Related Articles

TRENDING ARTICLES