Friday, December 27, 2024

ಅವಳು 4 ವರ್ಷದಿಂದ ಎಲ್ಲಿ ಮಲಗಿದ್ದಳು ಎಂದ ಕುಮಾರಸ್ವಾಮಿ..! ಅನ್ನದಾತರನ್ನು, ಹೆಣ್ಣನ್ನು ಅವಮಾನಿಸಿದ ಸಿಎಂ..!

ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ರೈತರನ್ನು ಮತ್ತು ಹೆಣ್ಣನ್ನು ಅವಮಾನಿಸಿದ್ದಾರೆ. ನಾಡದೊರೆಯ ಬಾಯಲ್ಲಿ ಇಂಥಾ ಮಾತು ಬರುತ್ತೆ ಅಂತ ಯಾರೂ ಊಹಿಸಿರಲಿಲ್ಲ. ತನ್ನನ್ನು ಟೀಕಿಸಿದ ಮಹಿಳೆ ಬಗ್ಗೆ ಸಿಎಂ ಕೆಟ್ಟದಾಗಿ ಮಾತಾಡಿದ್ದಾರೆ. ಅವಳು ಇಷ್ಟು ದಿನ ಎಲ್ಲಿ ಮಲಗಿದ್ದಳು ಅಂತ ಸಿಎಂ ಕೇಳಿದ್ದಾರೆ.
ಕಬ್ಬಿಗೆ ಬೆಂಬಲ ಬೆಲೆ, ಬಾಕಿ ಹಣಕ್ಕೆ ಒತ್ತಾಯಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರೋ ಪ್ರತಿಭಟನೆಯನ್ನು ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಬರಬೇಕಿದ್ದ ಸಿಎಂ ರೈತರ ಪ್ರತಿಭಟನೆಯ ಬಗ್ಗೆಯೇ ಬಾಯಿಗೆ ಬಂದಂಗೆ ನಾಲಿಗೆ ಹರಿಬಿಟ್ಟಿದ್ದಾರೆ.
ಸಿಎಂ ಆಗಲು ಕುಮಾರ ಸ್ವಾಮಿ ನಾಲಾಯಕ್ ಎಂದಿದ್ದ ಪ್ರತಿಭಟನಾ ನಿರತ ಮಹಿಳೆ ವಿರುದ್ಧ ಮಾತಾಡಿದ ಕುಮಾರಸ್ವಾಮಿ, ನಾಲ್ಕು ವರ್ಷದಿಂದ ಎಲ್ಲಿ ಮಲಗಿದ್ದಳು ಆ ಹೆಣ್ಣು ಮಗಳು? ಆ ಹೆಣ್ಣುಮಗಳು ಕೃಷಿ ಮಾಡಿದ್ದಾಳೋ ಇಲ್ವೋ ಗೊತ್ತಿಲ್ಲ ಅಂತ ಹೇಳಿ ಬೇಜವಬ್ದಾರಿ ಮೆರೆದಿದ್ದಾರೆ.
ಅಷ್ಟೇ ಅಲ್ಲದೆ, ಯಾರೋ ದರೋಡೆಕೋರರ ಮಾತು ಕೇಳಿ ಪ್ರತಿಭಟನೆ ನಡೆಸ್ತಿದ್ದಾರೆ. ಬೆಳಗಾವಿ ಸುವರ್ಣ ಸೌಧ ಗೇಟ್ ಒಡೆಯೋಕೆ ಹೋಗಿದ್ದಾರೆ. ಗಲಾಟೆ ಮಾಡುವವರು ರೈತರಲ್ಲ, ಅವರು ಗೂಂಡಾಗಳು ಅಂತ ಅನ್ನದಾತರನ್ನು ಗೂಂಡಾಗಳಿಗೆ ಹೋಲಿಸಿದ್ದಾರೆ ಸಿಎಂ.

ಮಾಧ್ಯಮಗಳ ಮೇಲೂ ಸಿಎಂಗೆ ಗರಂ..!
ಮಾಧ್ಯಮದವರ ಮೇಲೂ ಸಿಎಂ ಗರಂ ಆಗಿದ್ದಾರೆ. ಮಾಧ್ಯಮದವರು ಹೇಳಿಕೊಟ್ಟು ಹೋರಾಟ ಮಾಡಿಸುತ್ತಾರೆ.ಲಾರಿ ಕೆಳಗೆ ರೈತರನ್ನ ಮಲಗಿಸಿ ವಿಡಿಯೋ ತೆಗೆಯುತ್ತಾರೆ.ಕುಮಾರಸ್ವಾಮಿ ಸರ್ಕಾರದ ವಿರುದ್ದ ಹೋರಾಟ ಅಂತ ಬಿಂಬಿಸುತ್ತಾರೆ ಅಂತ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ.

RELATED ARTICLES

Related Articles

TRENDING ARTICLES