Saturday, November 16, 2024

ಟೀಮ್ ಇಂಡಿಯಾಕ್ಕೆ ಆಸೀಸ್ ಸವಾಲು

ಸತತ ಮೂರು ಮ್ಯಾಚ್ ಗಳನ್ನು ಗೆದ್ದು ಸೆಮಿಪೈನಲ್​ಗೆ ಲಗ್ಗೆ ಇಟ್ಟಿರೋ ಹರ್ಮನ್​​ ಪ್ರೀತ್​ ಕೌರ್​​ ನಾಯಕತ್ವದ ಟೀಮ್​ಇಂಡಿಯಾ ಇಂದು ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಗುಂಪು ಹಂತದ ಕೊನೆಯ ಮ್ಯಾಚ್ ಇದಾಗಿದೆ. ಗಯಾನಾದ ಪ್ರಾವಿಡೆನ್ಸ್​​ ಅಂಗಳದಲ್ಲಿ ನಡೆಯುವ ಈ ಮ್ಯಾಚ್ ಔಪಚಾರಿಕವಾಗಿದ್ದು, ಆಸ್ಟ್ರೇಲಿಯಾ ಗುಂಪು ಹಂತದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿ ಸೆಮೀಸ್​ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಆದರೆ, ಬಲಿಷ್ಟ ಆಸೀಸ್​ ವಿರುದ್ಧದ ಹೋರಾಟ ಕೌರ್​ ಬಳಗಕ್ಕೆ ಮುಂದಿನ ಹಂತದ ಸಿದ್ಧತೆಗೆ ಉತ್ತಮ ಅವಕಾಶವಾಗಿದೆ.

ಟೂರ್ನಿಯ ಮೊದಲ ಮ್ಯಾಚ್ ನಲ್ಲಿ ಹರ್ಮನ್​ಪ್ರೀತ್​ ಕೌರ್​ ತಮ್ಮ ಶಕತದ ಮೂಲಕ ಬಲ ತುಂಬಿದ್ರು. ನಂತರದ 2 ಮ್ಯಾಚ್ ಗಳಲ್ಲಿಯೂ ಅನುಭವಿ ಆಟಗಾರ್ತಿ ಮಿಥಾಲಿ ರಾಜ್​ ತಾಳ್ಮೆಯ ಅರ್ಧಶತಕ ಸಿಡಿಸಿ ಬೌಲರ್​ಗಳನ್ನು ಕಾಡಿದ್ದರು. ಹ್ಯಾಟ್ರಿಕ್​ ಗೆಲುವಿನ ಹಿಂದೆ ಟೀಮ್​ಇಂಡಿಯಾ ಬೌಲರ್​ಗಳ ಶ್ರಮ ಕೂಡ ಮಹತ್ವದ್ದು. ವಿಶೇಷವಾಗಿ ದೀಪ್ತಿ ಶರ್ಮಾ, ರಾಧಾ ಯಾದವ್​ ಮತ್ತು ಪೂನಮ್​ ಯಾದವ್ ತಮ್ಮ ಸ್ಪಿನ್​ ಕೈಚಳಕದಿಂದ ಮೋಡಿ ಮಾಡಿದ್ದಾರೆ. ಯುವ ಪ್ರತಿಭೆ ದಯಾಳನ್​ ಹೇಮಲತಾ ಕೂಡ ಬ್ಯಾಟ್ಸ್​​ಮನ್​ಗಳನ್ನ ಕಾಡಿದ್ದಾರೆ. ಇದೆ ವಿಶ್ವಾಸದೊಂದಿಗೆ ಟೀಮ್​ಇಂಡಿಯಾ ಇಂದು ಕಣಕ್ಕಿಳಿಯಲಿದೆ.

ಕಳೆದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವೂ ಶ್ರೇಷ್ಠ ಪ್ರದರ್ಶನ ನೀಡಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು 52 ರನ್​ಗಳಿಂದ ಸೋಲಿಸಿದ್ದ ಮೆಗ್​ ಲ್ಯಾನಿಂಗ್​ ಪಡೆ​, ನಂತರದ 2 ಹಣಾಹಣಿಯಲ್ಲಿ ಐರ್ಲೆಂಡ್​ ವಿರುದ್ಧ 9 ವಿಕೆಟ್​ ಹಾಗೂ ನ್ಯೂಜಿಲೆಂಡ್​ ವಿರುದ್ಧ 33 ರನ್​ಗಳ ಅಂತರದ ಜಯ ಸಾಧಿಸಿದೆ.

ಈ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಪರ ಅತಿ ಹೆಚ್ಚು ರನ್​ ಸಿಡಿಸಿದ ಆಟಗಾರ್ತಿಯಾಗಿರುವ ವಿಕೆಟ್​ಕೀಪರ್ ಬ್ಯಾಟ್ಸ್​ಮನ್​ ಅಲೀಸಾ ಹೀಲಿ, ಬೆತ್ ಮೂನಿ, ಆಲ್​ರೌಂಡರ್​ ಎಲಿಸಿ ಪೆರ್ರಿ ಆಸೀಸ್​ನ ಬ್ಯಾಟಿಂಗ್​ ಶಕ್ತಿಯಾಗಿದ್ದಾರೆ. ಮೆಗನ್ ಸ್ಕಟ್, ಎಲ್ಲೀಸ್ ವಿಲಾನಿ, ಸೋಫಿ ಮೊಲಿನೆಕ್ಸ್​ ತಂಡದ ಬೌಲಿಂಗ್​ ಬಲವಾಗಿದ್ದಾರೆ.

ಒಟ್ಟಿನಲ್ಲಿ, ಟಿ-20 ವಿಶ್ವಕಪ್​ನಲ್ಲಿ 3 ಬಾರಿಯ ಚಾಂಪಿಯನ್​ ವಿರುದ್ಧ 8 ವರ್ಷಗಳ ಬಳಿಕ ಸೆಮಿಫೈನಲ್ ಪ್ರವೇಶಿಸಿರೋ ಟೀಮ್​ಇಂಡಿಯಾದ ಹೋರಾಟ ಹೇಗಿರುತ್ತೆ ಅನ್ನೋದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಈಗಾಗಲೇ ಹ್ಯಾಟ್ರಿಕ್​ ಜಯ ಸಾಧಿಸಿ ವಿಶ್ವಕಪ್​ ಎತ್ತಿ ಹಿಡಿಯೋ ಕನಸು ಕಂಡಿರೋ ಟೀಮ್​ಇಂಡಿಯಾ ವನಿತೆಯರಿಗೆ ಆಲ್​ ದ ಬೆಸ್ಟ್​..

-ವಸಂತ್​ ಮಳವತ್ತಿ. ಸ್ಪೋರ್ಟ್ಸ್​ ಬ್ಯೂರೋ, ಪವರ್​ ಟಿವಿ

 

 

RELATED ARTICLES

Related Articles

TRENDING ARTICLES