Sunday, May 11, 2025

ಮತ್ತೆ  ಜಿಟಿಡಿ VS ಸಿದ್ದರಾಮಯ್ಯ..! ಈ ಬಾರಿ ಗೆಲುವು ಯಾರಿಗೆ..?

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ ದೇವೇಗೌಡ ಮತ್ತೆ ಮುಖಾಮುಖಿ ಆಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವ್ರನ್ನು ಜಿಟಿಡಿ ಸೋಲಿಸಿದ್ರು. ಈ ಬಾರಿಯ ಸ್ಪರ್ಧೆಯಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಿದೆ.

ಅಂದಹಾಗೆ ಇದು ಜೆಟಿಡಿ VS ಸಿದ್ದರಾಮಯ್ಯ ಅವ್ರ ನೇರ ನೇರ ಫೈಟ್ ಅಲ್ಲ. ಇದು ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪಮೇಯರ್ ಗದ್ದುಗೆಯ ಫೈಟು.

ಮೇಯರ್ ಮತ್ತು ಉಪಮೇಯರ್ ಪಟ್ಟಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡ್ವೆ ಫೈಟ್ ಇದೆ. ಕಾಂಗ್ರೆಸ್ ಗೇ ಮೇಯರ್ ಸ್ಥಾನ ಸಿಗ್ಬೇಕು ಅಂತ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಹಠಕ್ಕೆ ಬಿದ್ದಿದ್ದು, ಇವ್ರಿಗೆ ಟಾಂಗ್ ಕೊಡೋಕೆ ಸಚಿವ ಜಿಟಿಡಿ ರೆಡಿಯಾಗಿದ್ದಾರೆ. ಹೇಗಾದ್ರು ಮಾಡಿ ಕಾಂಗ್ರೆಸ್ ಗೆ ಮೇಯರ್ ಗದ್ದುಗೆ ತಪ್ಪಿಸಲೇ ಬೇಕು ಅಂತ ಜಿ.ಟಿ ದೇವೇಗೌಡ ಮತ್ತು ಸಾ.ರಾ ಮಹೇಶ್ ಪ್ಲಾನ್ ಮಾಡಿದ್ದು, ಜೆಡಿಎಸ್ ಸದಸ್ಯರನ್ನು ಈಗಲ್ ಟನ್ ರೆಸಾರ್ಟ್ ಗೆ ರವಾನಿಸಲಾಗಿದೆ. ಇದ್ರಿಂದ ಪಾಲಿಕೆಯಲ್ಲಿ ಜೆಡಿಎಸ್-ಬಿಜೆಪಿಯ ಹಳೇ ದೋಸ್ತಿಯೇ ಮುಂದುವರೆಯೋ ಚಾನ್ಸ್ ಇದೆ. ಆದ್ರೆ, ಸಿದ್ದರಾಮಯ್ಯ ಅವ್ರಿಗೆ ಇದು ಮೈಸೂರಿನಲ್ಲಿ ತಮ್ಮ ಅಸ್ಥಿತ್ವದ ಪ್ರಶ್ನೆಯಾಗಿದೆ.

RELATED ARTICLES

Related Articles

TRENDING ARTICLES