Tuesday, January 7, 2025

ಈ ಬಾರಿ ಐಪಿಎಲ್ ಆಡಲ್ಲ ಮಿಚೆಲ್ ಸ್ಟಾರ್ಕ್..! ಕಾರಣ ಏನ್ ಗೊತ್ತಾ..?

12ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೂ ಮುನ್ನವೇ ತಂಡದ ಪ್ರಮುಖ ವೇಗಿಯನ್ನ ಕಿಂಗ್​ಖಾನ್​ ಒಡೆತನದ ಕೆಕೆಆರ್​ ಟೀಮ್ ನಿಂದ ರಿಲೀಸ್ ಮಾಡಲಾಗಿದೆ. ಇದು ಕೆಕೆಆರ್​​ ಪಾಳಯಕ್ಕೆ ನಿಜಕ್ಕೂ ಆಘಾತಕಾರಿ ನ್ಯೂಸ್..!
ಕೋಲ್ಕತ್ತಾ ನೈಟ್​ ರೈಡರ್ಸ್​​ ನ ಬೌಲಿಂಗ್​​ ಶಕ್ತಿಯಾಗಿದ್ದ ಫಾಸ್ಟ್ ಬೌಲರ್ ಮಿಚೆಲ್​ ಸ್ಟಾರ್ಕ್​ 2019ರ ಐಪಿಎಲ್​ ಆಡುತ್ತಿಲ್ಲ. ಸದ್ಯದಲ್ಲೇ ಆರಂಭವಾಗಲಿರೋ ಭಾರತ ಹಾಗೂ ಸೌತ್​ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಅಲಭ್ಯರಾಗಿದ್ದ ಇವರು ಈ ಬಾರಿಯ ಐಪಿಎಲ್ ಆಡ್ತಿಲ್ಲ ಅನ್ನೋ ವಿಷಯವನ್ನ ಕೋಲ್ಕತ್ತಾ ನೈಟ್​ ರೈಡರ್ಸ್​ ಸ್ಪಷ್ಟಪಡಿಸಿದೆ.
ಇಂಜುರಿ ಸಮಸ್ಯೆಯನ್ನ ಎದುರಿಸುತ್ತಿರೋ ಮಿಚೆಲ್​ ಸ್ಟಾರ್ಕ್​​ರನ್ನ ಟೀಮ್ ನಿಂದ ರಿಲೀಸ್​ ಮಾಡಿರೋ ಕೆಕೆಆರ್​ ಟೆಕ್ಸ್ಟ್​​​​ ಮೆಸೆಜ್​ ಮೂಲಕ ಸ್ಟಾರ್ಕ್​ಗೂ ತಿಳಿಸಿರೋದಾಗಿ ಪ್ರಕಟಿಸಿದೆ.
ಕಳೆದ ಆವೃತ್ತಿಗೂ ಮೊದಲು ನಡೆದ ಹರಾಜಿನಲ್ಲಿ 2 ಕೋಟಿ ರೂ ಮೂಲ ಬೆಲೆಯ ಸ್ಟಾರ್ಕ್​ರನ್ನ 9.4 ಕೋಟಿಗೆ ಕೆಕೆಆರ್​ ಬಳಗ ಖರೀದಿಸಿತ್ತು. ಆದ್ರೆ, ಬಲಗಾಲ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸ್ಟಾರ್ಕ್​ ಟೂರ್ನಮೆಂಟ್​ನಿಂದ ಹೊರಗುಳಿದಿದ್ರು. ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಹಾಗೂ 2019ರ ವಿಶ್ವಕಪ್​ನ ಸಿದ್ಧತೆ ಉದ್ದೇಶದಿಂದ ಸ್ಟಾರ್ಕ್​ 2019ರ ಐಪಿಎಲ್​​​ನಲ್ಲಿ ಆಡುವುದು ಅನುಮಾನ ಎಂಬ ಸುದ್ದಿ ಮೊದಲೇ ಚಾಲ್ತಿಯಲ್ಲಿತ್ತು. ಇದೀಗ ಕೆಕೆಆರ್ ಸ್ಟಾರ್ಕ್​ರನ್ನ ರಿಲೀಸ್ ಮಾಡಿ ಇದನ್ನ ಅಧಿಕೃತವಾಗಿಸಿದೆ. ಬಿಸಿಸಿಐ ಹಾಗೂ ಕ್ರಿಕೆಟ್ ಆಸ್ಟ್ರೇಲಿಯಾ ಕೂಡ ಇದಕ್ಕೆ ಸಮ್ಮತಿ ನೀಡಿದ್ದು, ಸ್ಟಾರ್ಕ್ ಅವರನ್ನು ತಂಡದಿಂದ ಕೈಬಿಟ್ಟಿದ್ದಾಗಿ ಕೆಕೆಆರ್ ತಂಡ ಅಧಿಕೃತವಾಗಿ ಪ್ರಕಟಿಸಿದೆ.

RELATED ARTICLES

Related Articles

TRENDING ARTICLES