ಟೀಮ್ ಇಂಡಿಯಾ ಕ್ಯಾಪ್ಟನ್ ತಮ್ಮ ‘ಭಾರತ ಬಿಟ್ಟು ತೊಲಗಿ’ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಬೇರೆ ದೇಶಗಳ ಪ್ಲೇಯರ್ ಗಳನ್ನು ಇಷ್ಟಪಡುವುದಾದ್ರೆ ಭಾರತದಲ್ಲಿರಬೇಡಿ ಅಂತ ವಿರಾಟ್ ಹೇಳಿದ್ರು. ಇವ್ರ ಈ ಹೇಳಿಕೆಗೆ ಬಹಳಾ ವಿರೋಧ ವ್ಯಕ್ತವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕೊಹ್ಲಿ ಟ್ರೋಲ್ ಗಳಿಗೆ ಆಹಾರ ಆಗಿದ್ರು.
ಭಾರತ ಬಿಟ್ಟು ಹೋಗಿ ಅನ್ನೋ ತಮ್ಮ ಹೇಳಿಕೆ ಕುರಿತು ಕೊಹ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ‘ಅವರ ಹೇಳಿಕೆಯಲ್ಲಿ ‘ಈ ಭಾರತೀಯರು’ ಅಂತ ನಮೂದಿಸಿದ್ದರ ವಿರುದ್ಧ ಪ್ರತಿಕ್ರಿಯೆ ನೀಡಿದ್ದೆ ಅಷ್ಟೇ. ನಾನೂ ಆಯ್ಕೆ ಸ್ವಾಂತ್ರ್ಯದ ಪರವಾಗಿದ್ದೇನೆ. ಹೋಗಲಿ, ಎಲ್ಲವನ್ನೂ ಮರೆತು ಬಿಡಿ. ಹಬ್ಬವನ್ನು ಖುಷಿಯಾಗಿ ಕಳೆಯಿರಿ. ಎಲ್ರಿಗೂ ಪ್ರೀತಿ, ನೆಮ್ಮದಿ ಸಿಗಲಿ’ ಅಂತ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ಅಭಿಮಾನಿಗಳಿಗೆ ಭಾರತ ಬಿಟ್ಟು ತೊಲಗಿ ಅಂದ ವಿರಾಟ್ ಕೊಹ್ಲಿ..!