Friday, March 29, 2024

ಅಂಬಿ ಹೇಳಿದ ಭವಿಷ್ಯ ನಿಜವಾಯ್ತು..!

ಬಹಳಾ ಕುತೂಹಲಕ್ಕೆ ಕಾರಣವಾಗಿದ್ದ 3 ಲೋಕಸಭಾ ಕ್ಷೇತ್ರ ಮತ್ತು 2 ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ರಿಸೆಲ್ಟ್ ಬಂದಿದೆ. ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದ್ದು, ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಶಿವಮೊಗ್ಗದಲ್ಲಿ ಮಾತ್ರ ಕಮಲ ಅರಳಿದೆ. ಅದೂ ಕೂಡ ಸುಲಭದಲ್ಲಿ ದಕ್ಕಿದ ಜಯವಂತೂ ಅಲ್ಲ. 52,168 ಮತಗಳಿಂದ ಬಿ.ವೈ ರಾಘವೇಂದ್ರ ಮೈತ್ರಿ ಕ್ಯಾಂಡಿಡೇಟ್ ಮಧು ಬಂಗಾರಪ್ಪ ಅವ್ರನ್ನು ಸೋಲಿಸಿದ್ದಾರೆ. ಇದನ್ನು ಭಾರೀ ದೊಡ್ಡ ಜಯಭೇರಿ ಅಂತ ಕರೆಯೋಕೆ ಆಗಲ್ಲ.
ಇನ್ನುಳಿದಂತೆ ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಕ್ಯಾಂಡಿಡೇಟ್ ಗಳಾದ ಎಲ್. ಆರ್ ಶಿವರಾಮೇಗೌಡ ಹಾಗೂ ವಿ.ಎಸ್ ಉಗ್ರಪ್ಪ ಗೆದ್ದಿದ್ದಾರೆ. ಅದೇರೀತಿ ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲೂ ಕ್ರಮವಾಗಿ ಅನಿತಾ ಕುಮಾರಸ್ವಾಮಿ ಮತ್ತು ಆನಂದ ನ್ಯಾಮಗೌಡ ಗೆಲವಿನ ನಗೆ ಬೀರಿದ್ದು, ಇಲ್ಲೂ ಮೈತ್ರಿಯದ್ದೇ ಕಾರುಬಾರು.
5 ಕ್ಷೇತ್ರಗಳ ಬೈ ಎಲೆಕ್ಷನ್ ಸಾಕಷ್ಟು ವಿಶೇಷತೆ, ರೆಕಾರ್ಡ್ ಗಳಿಗೆ ಸಾಕ್ಷಿಯಾಯಿತು. ಅದ್ರಲ್ಲೂ ಮುಖ್ಯವಾಗಿ ಮಂಡ್ಯದಲ್ಲಿ ಎಲ್. ಆರ್ ಶಿವರಾಮೇಗೌಡ ರೆಬಲ್ ಸ್ಟಾರ್ ಅಂಬರೀಶ್, ಪುಟ್ಟರಾಜು ಹಾಗೂ ರಮ್ಯಾ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಶಿವರಾಮೇಗೌಡ ರೆಕಾರ್ಡ್ ಮಾಡ್ತಾರೆ ಅಂತ ಅಂಬರೀಶ್ ಹೇಳಿದ್ರು. ಅಂಬಿ ಭವಿಷ್ಯ ಸತ್ಯವಾಯ್ತು.

1998ರಲ್ಲಿ ಅಂಬರೀಶ್ ಭಾರಿ ಅಂತರದಿಂದ ಜಿ.ಮಾದೇಗೌಡ ಅವರನ್ನು ಮಣಿಸಿದ್ರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಅಂಬರೀಶ್ 4,31,439 ಮತ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಿ.ಮಾದೇಗೌಡ 2,50,916 ಮತ ಗಳಿಸಿದ್ದರು. ಬರೋಬ್ಬರಿ 1,80,523 ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಮಾಡಿದ್ರು ಅಂಬಿ.
2012ರಲ್ಲಿ ನಡೆದ ಲೋಕಸಭಾ ಬೈ ಎಲೆಕ್ಷನ್ ನಲ್ಲಿ ರಮ್ಯಾ 5,18,852 ಮತಗಳನ್ನು, 2014ರ ಲೋಕಸಭಾ ಚುನಾವಣೆಯಲ್ಲಿ ಪುಟ್ಟರಾಜು 5,24,370 ಮತಗಳನ್ನು ಪಡೆದಿದ್ರು. ಶಿವರಾಮೇಗೌಡ 5,69,302 ಮತ ಪಡೆದಿದ್ದಾರೆ.
ಇಷ್ಟೊಂದು ಮತಗಳಿಕೆ, ಭಾರೀ ಅಂತರದ ಜಯದೊಂದಿಗೆ ಶಿವರಾಮೇಗೌಡ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. 3,24,925 ಮತಗಳ ಅಂತರದ ಗೆಲವು ಪಡೆಯೋ ಮೂಲಕ ಅಂಬಿ ರೆಕಾರ್ಡ್ ಪುಡಿ ಮಾಡಿದ್ದಲ್ಲದೆ, 5,69,302 ಮತ ಪಡೆದು ಪುಟ್ಟರಾಜು ಹಾಗೂ ರಮ್ಯಾ ಪಡೆದಿದ್ದಕ್ಕಿಂತ ಹೆಚ್ಚು ವೋಟ್ ಪಡೆದಿದ್ದಾರೆ. ಹೀಗೆ ಶಂಕರೇಗೌಡ ರೆಕಾರ್ಡ್ ಮಾಡಿದ್ದು, ಇವರು ಈ ಎಲೆಕ್ಷನ್ ನಲ್ಲಿ ಹಿಸ್ಟರಿ ಕ್ರಿಯೇಟ್ ಮಾಡ್ತಾರೆ ಅಂತ ಅಂಬರೀಶ್ ಭವಿಷ್ಯ ನುಡಿದಿದ್ರು.

RELATED ARTICLES

Related Articles

TRENDING ARTICLES