Thursday, April 25, 2024

ಬೈ ಎಲೆಕ್ಷನ್ ರಿಸಲ್ಟ್ ಲೈವ್… ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ..!

3 ಲೋಕಸಭಾ ಕ್ಷೇತ್ರ ಮತ್ತು 2 ವಿಧಾನ ಸಭಾ ಕ್ಷೇತ್ರದ ಬೈ ಎಲೆಕ್ಷನ್ ನ ರಿಸಲ್ಟ್ ಲೈವ್. ಕ್ಷಣ ಕ್ಷಣದ ಮಾಹಿತಿ ನಿಮ್ಮ ‘ಪವರ್ ಟಿವಿ’ಯಲ್ಲಿ.
ನವೆಂಬರ್ 3ರಂದು ಶಿವಮೊಗ್ಗ, ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆದಿತ್ತು. ಇಂದು ಫಲಿತಾಂಶ ಹೊರಬೀಳುತ್ತಿದೆ. ದೀಪಾವಳಿ ಮುನ್ನ ಸಿಹಿ ಯಾರಿಗೆ? ಕಹಿ ಯಾರಿಗೆ ಅನ್ನೋ ಕುತೂಹಲ ಗರಿಗೆದರಿದೆ.
ರಿಸಲ್ಟ್ ನ ಬಿಸಿ ಕ್ಷಣದ ತಾಜಾ ನ್ಯೂಸ್ ಅಪ್ ಡೇಟ್ ಇಲ್ಲಿದೆ.

ವೆಬ್ ಸೈಟ್ : https://www.powertvnews.in
ಫೇಸ್ ಬುಕ್ : https://www.facebook.com/powertvnews
ಟ್ವೀಟರ್ : https://www.twitter.com/powertvnews
ಯೂಟ್ಯೂಬ್ : https://www.youtube.com/powertvnewsin

ಶಿವಮೊಗ್ಗ ಲೋಕಸಭಾ ಕ್ಷೇತ್ರ

ಶಿವಮೊಗ್ಗ ಲೋಕಸಭೆ ಕಣದಲ್ಲಿರೋದು ಮೂವರು ಮಾಜಿ ಮುಖ್ಯಮಂತ್ರಿಗಳ ಪುತ್ರರು. ಬಿಜೆಪಿ ರಾಜ್ಯಾಧ್ಯಕ್ಷ, ರಾಜ್ಯದ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಮಗ ಬಿ.ವೈ ರಾಘವೇಂದ್ರ, ಎಸ್. ಬಂಗಾರಪ್ಪ ಅವರ ಮಗ ಮಧುಬಂಗಾರಪ್ಪ ಹಾಗೂ ಜೆ.ಎಚ್ ಪಟೇಲ್ ಅವರ ಮಗ ಮಹಿಮಾ ಪಟೇಲ್ ಕಣದಲ್ಲಿದ್ದಾರೆ. ಬಿಜೆಪಿ ಕ್ಯಾಂಡಿಡೇಟ್ ಆಗಿರೋ ಬಿ.ವೈ ರಾಘವೇಂದ್ರ, ಮೈತ್ರಿ ಕ್ಯಾಂಡಿಡೇಟ್ ಆಗಿರೋ ಮಧು ಬಂಗಾರಪ್ಪ ಹಾಗೂ ಜೆಡಿಯು ಕ್ಯಾಂಡಿಡೇಟ್ ಮಹಿಮಾ ಪಟೇಲ್ ಇದ್ದು, ಇವರುಗಳಲ್ಲಿ ಮತದಾರ ಯಾರ ಕೈ ಹಿಡಿದಿದ್ದಾರೆ ಅನ್ನೋದನ್ನು ಕಾದು ನೋಡೋಣ.

ಶಿವಮೊಗ್ಗದಲ್ಲಿ ಮಾತ್ರ ಅರಳಿದ ಕಮಲ

ಮಧ್ಯಾಹ್ನ 12.45 :  ಬಿಜೆಪಿ ಕ್ಯಾಂಡಿಡೇಟ್ ಬಿ.ವೈ ರಾಘವೇಂದ್ರ ಅವರಿಗೆ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಅವರ ವಿರುದ್ಧ 52,168 ಮತಗಳ ಅಂತರದ ಗೆಲುವು.

ಬೆಳಗ್ಗೆ 10.45 : 11ನೇ ಸುತ್ತಿನ ಎಣಿಕೆ ಮುಕ್ತಾಯ. ಬಿಜೆಪಿಯ ಬಿ.ವೈ ರಾಘವೇಂದ್ರ ಅವರಿಗೆ 41,232 ಮತಗಳ ಮುನ್ನಡೆ.

ಬೆಳಗ್ಗೆ 10.00 : 6ನೇ ಸುತ್ತಿನಲ್ಲಿ ಬಿ. ವೈ ರಾಘವೇಂದ್ರ ಮುನ್ನಡೆ. 17, 821 ಮತಗಳ ಮುನ್ನಡೆಯಲ್ಲಿದ್ದಾರೆ ರಾಘವೇಂದ್ರ . ಜೆಡಿಎಸ್ ನ ಮಧು ಬಂಗಾರಪ್ಪ ಅವರಿಗೆ 1,75,876, ಬಿಜೆಪಿಯ ರಾಘವೇಂದ್ರ ಅವರಿಗೆ 1,94,684 ಮತಗಳು ಬಂದಿವೆ. . ಜೆಡಿಯುನ ಮಹಿಮಾ ಪಟೇಲ್ ಗೆ 3,113 ಮಗತಗಳು ಹಾಗೂ ಪಕ್ಷೇತರ ಕ್ಯಾಂಡಿಡೇಟ್ ಶಶಿಕುಮಾರ್ ಅವರಿಗೆ 6,288 ಮತಗಳು ಬಂದಿವೆ.

ಬೆಳಗ್ಗೆ 9.45 : ಐದನೇ ಸುತ್ತು ಮುಕ್ತಾಯ. ಆರನೇ ಸುತ್ತಿನಲ್ಲಿ ಬಿ. ವೈ ರಾಘವೇಂದ್ರ ಮುನ್ನಡೆ. 15,168 ಮತಗಳ ಮುನ್ನಡೆಯಲ್ಲಿದ್ದಾರೆ ರಾಘವೇಂದ್ರ . ಜೆಡಿಎಸ್ ನ ಮಧು ಬಂಗಾರಪ್ಪ ಅವರಿಗೆ 1,52,638, ಬಿಜೆಪಿಯ ರಾಘವೇಂದ್ರ ಅವರಿಗೆ 1,69, 476 ಮತಗಳು ಬಂದಿವೆ. ಫೈಟ್ ನೀಡುವಲ್ಲೂ ಜೆಡಿಯುನ ಮಹಿಮಾ ಪಟೇಲ್ ವಿಫಲ. ಕೇವಲ 2,711 ಮತಗಳನ್ನು ಪಡೆದಿರೋ ಮಹಿಮಾ ಪಟೇಲ್. ಮಹಿಮಾ ಅವರಿಗಿಂತ ಪಕ್ಷೇತರ ಕ್ಯಾಂಡಿಡೇಟ್ ಶಶಿಕುಮಾರ್ ಅವರು ಹೆಚ್ಚು ಮತ (5,429) ಮತಗಳನ್ನು ಪಡೆದಿದ್ದಾರೆ.

ಬೆಳಗ್ಗೆ 9.35 : 4ನೇ ಸುತ್ತಿನಲ್ಲಿ ಬಿಜೆಪಿಯ ಬಿ.ವೈ ರಾಘವೇಂದ್ರ 14,477 ಮತಗಳ ಮುನ್ನಡೆ. ನೆಕ್ ಟು ನೆಕ್ ಫೈಟ್ ಕಾಣ್ತಿದ್ವೀವಿ. ಜೆಡಿಎಸ್ / ಮೈತ್ರಿಯ ಮಧು ಬಂಗಾರಪ್ಪಗೆ 1,18,302, ಬಿಜೆಪಿಯ ರಾಘವೇಂದ್ರಗೆ 1,31,526, ಜೆಡಿಯುನ ಮಹಿಮಾ ಪಟೇಲ್ ಗೆ 4,210 ಮತಗಳು ಬಂದಿವೆ.

ಬೆಳಗ್ಗೆ 9.25 : ನಾಲ್ಕನೇ ಸುತ್ತಿನಲ್ಲಿ ಬಿಜೆಪಿಯ ಬಿ.ವೈ ರಾಘವೇಂದ್ರ 5,723 ಮತಗಳ ಮುನ್ನಡೆ. ನೆಕ್ ಟು ನೆಕ್ ಫೈಟ್ ಕಾಣ್ತಿದ್ವೀವಿ. ಜೆಡಿಎಸ್ / ಮೈತ್ರಿಯ ಮಧು ಬಂಗಾರಪ್ಪಗೆ 96,547, ಬಿಜೆಪಿಯ ರಾಘವೇಂದ್ರಗೆ 1,03,083, ಜೆಡಿಯುನ ಮಹಿಮಾ ಪಟೇಲ್ ಗೆ 1,642, ಪಕ್ಷೇತರ ಕ್ಯಾಂಡಿಡೇಟ್ ಶಶಿ ಕುಮಾರ್ 3,409 ಮತಗಳು ಬಂದಿವೆ.

ಬೆಳಗ್ಗೆ 9.20 : ಮೂರನೇ ಸುತ್ತಿನಲ್ಲಿ ಬಿಜೆಪಿಯ ಬಿ.ವೈ ರಾಘವೇಂದ್ರ 6,440 ಮತಗಳ ಮುನ್ನಡೆ. ನೆಕ್ ಟು ನೆಕ್ ಫೈಟ್ ಕಾಣ್ತಿದ್ವೀವಿ. ಜೆಡಿಎಸ್ / ಮೈತ್ರಿಯ ಮಧು ಬಂಗಾರಪ್ಪ – 82,913, ಬಿಜೆಪಿಯ ರಾಘವೇಂದ್ರಗೆ 89,459, ಜೆಡಿಯುನ ಮಹಿಮಾ ಪಟೇಲ್ ಗೆ 1,328, ಪಕ್ಷೇತರ ಕ್ಯಾಂಡಿಡೇಟ್ ಶಶಿ ಕುಮಾರ್ 2,823 ಮತಗಳು ಬಂದಿವೆ.

ಬೆಳಗ್ಗೆ 9.15 : ಮೊದಲ ಸುತ್ತಿನಲ್ಲಿ ಬಿ.ವೈ ರಾಘವೇಂದ್ರಗೆ ಮುನ್ನಡೆ. ಜೆಡಿಎಸ್ / ಮೈತ್ರಿಯ ಮಧು ಬಂಗಾರಪ್ಪ – 78,299, ಬಿಜೆಪಿಯ ರಾಘವೇಂದ್ರಗೆ 84,727, ಜೆಡಿಯುನ ಮಹಿಮಾ ಪಟೇಲ್ ಗೆ 1,328, ಪಕ್ಷೇತರ ಕ್ಯಾಂಡಿಡೇಟ್ ಶಶಿ ಕುಮಾರ್ 2,823 ಮತಗಳು ಬಂದಿವೆ.

ಬೆಳಗ್ಗೆ 9.5 : ಜೆಡಿಎಸ್ / ಮೈತ್ರಿಯ ಮಧು ಬಂಗಾರಪ್ಪ -65, 480, ಬಿಜೆಪಿಯ ರಾಘವೇಂದ್ರಗೆ 69,604, ಜೆಡಿಯುನ ಮಹಿಮಾ ಪಟೇಲ್ ಗೆ 1,079, ಪಕ್ಷೇತರ ಕ್ಯಾಂಡಿಡೇಟ್ ಶಶಿ ಕುಮಾರ್ 2,250ಮತಗಳು ಬಂದಿವೆ

ಬೆಳಗ್ಗೆ 9.00 : ಜೆಡಿಎಸ್ / ಮೈತ್ರಿ ಕ್ಯಾಂಡಿಡೇಟ್ ಮಧು ಬಂಗಾರಪ್ಪ ಪಡೆದಿರೋ ಮತಗಳು 56,012.ಬಿಜೆಪಿಯ ಬಿ. ವೈ ರಾಘವೇಂದ್ರ ಅವರು ಪಡೆದಿರೋ ಮತಗಳ ಸಂಖ್ಯೆ  56,011, ಜೆಡಿಯು ಕ್ಯಾಂಡಿಡೇಟ್ ಮಹಿಮಾ ಪಟೇಲ್ ಪಡೆದಿರೋ ಮತಗಳು 818. ಪಕ್ಷೇತರ ಅಭ್ಯರ್ಥಿ ಶಶಿಕುಮಾರ್ ಅವರಿಗೆ ಬಂದಿರೋ ಮತಗಳು 1,840. ನೋಟಾಕ್ಕೆ ಬಿದ್ದ ವೋಟ್ ಗಳು 1,090ಮತಗಳು.

ಬೆಳಗ್ಗೆ 8.55 : ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಬಿಡಲಿಲ್ಲ ಅಂತ ಬಿಇಎಲ್ ಅಧಿಕಾರಿ ಗರಂ ಆಗಿದ್ದಾರೆ. ಮೊಬೈಲ್ ಬಿಡ್ದೇ ಇದ್ರೆ ನಾನು ಒಳಗೆ ಬರಲ್ಲ ಅಂತ ಪೊಲೀಸರೊಡನೆ ಜಗಳಕ್ಕಿಳಿದ ಇವಿಎಂ ತಂತ್ರಜ್ಱ. ಮತ ಎಣಿಕೆಯನ್ನೇ ನಿಲ್ಲಿಸಿ ಬಿಡ್ತೀನಿ ಅಂದ ಅಧಿಕಾರಿ. 

ಬೆಳಗ್ಗೆ 8.35 :  ಬಿಜೆಪಿ ಅಭ್ಯರ್ಥಿ ಬಿ.ವೈ  ರಾಘವೇಂದ್ರ ಅವರಿಗೆ 1,200 ಮತಗಳ ಮುನ್ನಡೆ.

ಬೆಳಗ್ಗೆ 8 ಗಂಟೆ : ಮತ ಕೌಂಟಿಂಗ್ ಶುರು

ಬೆಳಗ್ಗೆ 7.45 : ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಸಿಬ್ಬಂದಿ

ಬೆಳಗ್ಗೆ 7.00 ಗಂಟೆ :  ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ನಗರದ ಸಹ್ಯಾದ್ರಿ ಕಾಲೇಜ್ ಮತ ಎಣಿಕೆಯ ಕೇಂದ್ರವಾಗಿದೆ.
ಮತ ಎಣಿಕೆ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಬೆಳಗ್ಗೆ 8 ಗಂಟೆಗೆ ಆರಂಭವಾಗುವ ಮತ ಎಣಿಕೆ ಆರಂಭವಾಗಲಿದೆ.
ಮೊದಲು ಅಂಚೆ ಮತದಾನದ ಮತ ಎಣಿಕೆ ಕಾರ್ಯ ನಡೆಯುತ್ತದೆ. ಮತ ಎಣಿಕೆಗಾಗಿ 1 ತಾಲೂಕಿಗೆ 2 ಕೊಠಡಿಗಳನ್ನು ಸೀಮಿತ
8 ಕ್ಷೇತ್ರಗಳಿಗಾಗಿ 16 ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಗೆ 7 ಟೇಬಲ್ ಗಳಂತೆ, ಒಟ್ಟು 16 ಕೊಠಡಿಗೆ 112 ಟೇಬಲ್ ಗಳಲ್ಲಿ ಮತ ಎಣಿಕೆ ನಡೆಯುತ್ತದೆ.

ಬಳ್ಳಾರಿ ಲೋಕಸಭಾ ಕ್ಷೇತ್ರ

ಬಳ್ಳಾರಿಯಲ್ಲಿ ಮೈತ್ರಿಯ ಕ್ಯಾಂಡಿಡೇಟ್ ಆಗಿ ವಿ.ಎಸ್ ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಕಣದಲ್ಲಿದ್ದಾರೆ. ವಿಜಯ ಲಕ್ಷ್ಮೀ ಯಾರಿಗೆ ಒಲಿಯುತ್ತಾಳೆ ಅನ್ನೋದು ಕುತೂಹಲ.

ಬಿಜೆಪಿ ಭದ್ರಕೋಟೆ ಛಿದ್ರ..!

ಮಧ್ಯಾಹ್ನ 12.45  : ವಿ.ಎಸ್ ಉಗ್ರಪ್ಪ ಅವರು 2,43,271 ಮತಗಳ ಅಂತರದ ಜಯಭೇರಿ ಬಾರಿಸುವುದರೊಂದಿಗೆ ಬಿಜೆಪಿಯ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದಾರೆ.

ಬೆಳಗ್ಗೆ 11.50 : 15ನೇ ಸುತ್ತಿನ ಮತ ಎಣಿಕೆ ಪೂರ್ಣ. 2,14,826 ಮತಗಳ ಅಂತರದಿಂದ ಉಗ್ರಪ್ಪ ಮುನ್ನಡೆ.

ಬೆಳಗ್ಗೆ 11.15 : 14ನೇ ಸುತ್ತು ಮತ ಎಣಿಕೆ ಸಂಪೂರ್ಣ. ಕಾಂಗ್ರೆಸ್ 1,98,307 ಮತಗಳ ಭಾರೀ ಮುನ್ನಡೆ. ಕಾಂಗ್ರೆಸ್ ನ ಉಗ್ರಪ್ಪಗೆ 5,15,179 ಮತಗಳು, ಬಿಜೆಪಿ ಜೆ ಶಾಂತ ಅವರಿಗೆ 3,16,872 ಮತಗಳು ಬಂದಿವೆ.

ಬೆಳಗ್ಗೆ 10.50 : 13ನೇ ಸುತ್ತು ಮತ ಎಣಿಕೆ- ಕಾಂಗ್ರೆಸ್ ಗೆ 1,84,203 ಮತಗಳ ಭಾರೀ ಮುನ್ನಡೆ.

ಬೆಳಗ್ಗೆ 10.40 : ಕಾಂಗ್ರೆಸ್ 1,74,294 ಮತಗಳ ಭಾರೀ ಮುನ್ನಡೆ

ಬೆಳಗ್ಗೆ 10.20 : 9ನೇ ಸುತ್ತು ಮತ ಎಣಿಕೆ ಸಂಪೂರ್ಣ. ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ – 3,34,907 ಮತಗಳನ್ನು, ಬಿಜೆಪಿಯ ಜೆ ಶಾಂತ -1,94,376 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ 1,40,531 ಮತಗಳ ಭಾರೀ ಮುನ್ನಡೆ.

ಬೆಳಗ್ಗೆ : 9.50 : ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಭಾರೀ ಮುನ್ನಡೆ ಹಿನ್ನೆಲೆ. ಮತ ಎಣಿಕೆ ಕೇಂದ್ರದ ಹೊರಗೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ . ಬಿಜೆಪಿ ಅಭ್ಯರ್ಥಿ ಶಾಂತಾ ಅವರಿಗೆ ಹಿನ್ನೆಡೆ. ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರವನ್ನು ಮುನ್ನಡೆ ಕಾಯ್ದುಕೊಂಡಿರುವ ಉಗ್ರಪ್ಪ.

ಬೆಳಗ್ಗೆ 9.35 : 5ನೇ ಸುತ್ತಿನ ಕೌಂಟಿಂಗ್ ನಲ್ಲಿ ವಿ.ಎಸ್ ಉಗ್ರಪ್ಪ 1,90,862 ಮತಗಳನ್ನು ಪಡೆದಿದ್ದಾರೆ. 84,257 ಮತಗಳ ಉಗ್ರಪ್ಪ ಮುನ್ನಡೆ ಸಾಧಿಸಿದ್ದಾರೆ.

ಬೆಳಗ್ಗೆ 9.25 : 4ನೇ ಸುತ್ತಿನ ಕೌಂಟಿಂಗ್ ಮುಕ್ತಾಯ. ಕಾಂಗ್ರೆಸ್/ ಮೈತ್ರಿಯ ವಿ.ಎಸ್ ಉಗ್ರಪ್ಪ ಅವರಿಗೆ 64,000 ಮತಗಳ ಮುನ್ನಡೆ. ಉಗ್ರಪ್ಪ 1,50,948 ಮತಗಳು, ಬಿಜೆಪಿಯ ಜೆ. ಶಾಂತಾಗೆ 86,948ಮತಗಳು ಬಂದಿವೆ.

ಬೆಳಗ್ಗೆ 9.00 : ಕಾಂಗ್ರೆಸ್ ಗೆ ಭಾರೀ ಮುನ್ನಡೆ. ಕಾಂಗ್ರೆಸ್ – ವಿ ಎಸ್ ಉಗ್ರಪ್ಪ ಪಡೆದ ಮತಗಳು 74,668, ಬಿಜೆಪಿಯ ಜೆ ಶಾಂತಾ ಪಡೆದ ಮತಗಳು 43,530. ಎರಡನೇ ಹಂತ ಮುಕ್ತಾಯ, ಉಗ್ರಪ್ಪಗೆ 31,138 ಮತಗಳ ಮುನ್ನಡೆ.

ಬೆಳಗ್ಗೆ 8.45 : ಮೊದಲ ಸುತ್ತಿನಲ್ಲಿ ಕಾಂಗ್ರೆಸ್/ ಮೈತ್ರಿ ಕ್ಯಾಂಡಿಡೇಟ್ ವಿ.ಎಸ್ ಉಗ್ರಪ್ಪಗೆ 17,480  ಮತಗಳ ಮುನ್ನುಡೆ.  ಮೊದಲ
ಉಗ್ರಪ್ಪ ಗೆ ಬಿದ್ದಿರೋ ಮತಗಳ ಸಂಖ್ಯೆ  39,254.ಬಿಜೆಪಿಯ ಜೆ ಶಾಂತಾ ಪಡೆದ ಮತಗಳು 21,774

ಬೆಳಗ್ಗೆ 8.25 : ಅಂಚೆಮತಗಳ ಎಣಿಕೆಯಲ್ಲಿ ಕಾಂಗ್ರೆಸ್ ನ ವಿ.ಎಸ್ ಉಗ್ರಪ್ಪ ಅವರಿಗೆ ಅಲ್ಪಮತಗಳ ಮುನ್ನಡೆ.

ಬೆಳಗ್ಗೆ 8 ಗಂಟೆ : ಮತ ಕೌಂಟಿಂಗ್ ಶುರು

ಬೆಳಗ್ಗೆ 7.45 : ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಸಿಬ್ಬಂದಿ

ಬೆಳಗ್ಗೆ 7.00 ಗಂಟೆ :  ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, 8 ಗಂಟೆಗೆ ಎಣಿಕೆ ಪ್ರಕ್ರಿಯೆ ಶುರುವಾಗ್ತಿದೆ. ಬಳ್ಳಾರಿಯ ರಾವ್​ ಬಹದ್ದೂರ್ ವೈ.ಮಹಾಬಲೇಶ್ವರ ತಾಂತ್ರಿಕ ವಿದ್ಯಾಲಯದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.

ಮಂಡ್ಯ ಲೋಕಸಭಾ ಕ್ಷೇತ್ರ

ಮಂಡ್ಯ ಲೋಕಸಭಾ ಉಪ ಚುನಾವಣೆ ಫಲಿತಾಂಶ ಕೂಡ ಕುತೂಹಲ ಕೆರಳಿಸಿದೆ. ದೋಸ್ತಿ ಪಕ್ಷಗಳ ಅಭ್ಯರ್ಥಿ ಎಲ್​.ಆರ್ ಶಿವರಾಮೇಗೌಡ ಹಾಗೂ ಬಿಜೆಪಿ ಕ್ಯಾಂಡಿಡೇಟ್ ಡಾ.ಸಿದ್ದರಾಮಯ್ಯ ನಡುವೆ ಪೈಪೋಟಿ ಇದೆ.

ಮಂಡ್ಯದಲ್ಲಿ ಮೈತ್ರಿ ಕ್ಯಾಂಡಿಡೇಟ್ ಗೆ ದಾಖಲೆ ಗೆಲುವು

ಬೆಳಗ್ಗೆ 11. 50 : ಮಂಡ್ಯದಲ್ಲಿ ಜೆಡಿಎಸ್ ಗೆ ಭರ್ಜರಿ ಗೆಲುವು. 3,24,925ಮತಗಳ ಅಂತರದ ದಾಖಲೆ ಗೆಲುವು
ಮೈತ್ರಿಕೂಟದ ಜೆಡಿಎಸ್ ಅಭ್ಯರ್ಥಿ ಎಲ್ ಆರ್ ಶಿವರಾಮೇಗೌಡ.

ಬೆಳಗ್ಗೆ 10.55 : 5ಲಕ್ಷ ಗಡಿ ದಾಟಿದ ಜೆಡಿಎಸ್.  ಜೆಡಿಎಸ್ ಗೆ 2.86ಲಕ್ಷ ಮತಗಳ ಭಾರೀ ಮುನ್ನಡೆ.

ಬೆಳಗ್ಗೆ 10.40 : ಜೆಡಿಎಸ್ ಗೆ 2,34,512ಮತಗಳ ಮುನ್ನಡೆ.

ಬೆಳಗ್ಗೆ 10.05 : ಮಂಡ್ಯದಲ್ಲಿ ಜೆಡಿಎಸ್‌ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಇತಿಹಾಸ ಸೃಷ್ಠಿಸಿದ್ದಾರೆ. ಇವ್ರು ರೆಬಲ್ ಸ್ಟಾರ್ ಅಂಬರೀಶ್ ಅವರ ರೆಕಾರ್ಡ್ ಬ್ರೇಕ್ ಮಾಡಿದ್ದಾರೆ. ಮಾಜಿ ಸಂಸದ ಅಂಬರೀಶ್ ದಾಖಲೆ ಸರಿಗಟ್ಟಿದ ಶಿವರಾಮೇಗೌಡ ಸರಿಗಟ್ಟಿ ಹೊಸ ದಾಖಲೆ ಮಾಡಿದ್ದಾರೆ. 1998ರಲ್ಲಿ 1,80,523 ಮತಗಳ ಅಂತರದಿಂದ ಅಂಬರೀಶ್ ಗೆದ್ದಿದ್ದರು. ಪ್ರಸ್ತುತ ಆ ದಾಖಲೆ ಸರಿಗಟ್ಟಿದ ಮೈತ್ರಿ ಸರ್ಕಾರದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಮುರಿದಿದ್ದಾರೆ. ಬರೋಬ್ಬರಿ 1,84,972 ಮತಗಳ ಮುನ್ನಡೆ ಕಾಯ್ದುಕೊಂಡಿರುವ ಇವರು ಭಾರೀ ಅಂತರದ ಗೆಲುವು ಸಾಧಿಸೋದು ಪಕ್ಕಾ ಆಗಿದೆ.

ಬೆಳಗ್ಗೆ 9.40 : 2ಲಕ್ಷ ಗಡಿ ದಾಟಿದ ಜೆಡಿಎಸ್. ಜೆಡಿಎಸ್ ಗೆ 1,32,292ಮತಗಳ ಮುನ್ನಡೆ. ಜೆಡಿಎಸ್ ತೆಕ್ಕೆಗೆ ಈಗಾಗಲೇ ಬಂದಿವೆ 2,09,675 ಮತಗಳು, ಬಿಜೆಪಿಗೆ 77,383 ಮತಗಳು ಬಂದಿವೆ. ನೋಟಾಗೆ 5,476 ಮತಗಳು ಬಿದ್ದಿವೆ. 6ನೇ ಸುತ್ತಿನ ಮತ ಎಣಿಕೆ ಪ್ರಗತಿಯಲ್ಲಿದೆ.

ಬೆಳಗ್ಗೆ 9.15 : ಜೆಡಿಎಸ್ ಗೆ 60,340ಮತಗಳ ಮುನ್ನಡೆ. ಜೆಡಿಎಸ್ /ದೋಸ್ತಿ ಅಭ್ಯರ್ಥಿ ಎಲ್​.ಆರ್ ಶಿವರಾಮೇಗೌಡ ಪಡೆದ ಮತಗಳು 95,176, ಬಿಜೆಪಿಯ ಡಾ.ಸಿದ್ದರಾಮಯ್ಯ 35,176 ಮತಗಳು ಬಂದಿವೆ.

ಬೆಳಗ್ಗೆ 8.50 : ಜೆಡಿಎಸ್ ಗೆ 24627ಮತಗಳ ಮುನ್ನಡೆ. ಜೆಡಿಎಸ್ 36,840 ಮತಗಳು, ಬಿಜೆಪಿ 12,213 ಮತಗಳು, ನೋಟಾಗೆ 944 ಮತಗಳು.  ಎರಡನೇ ಸುತ್ತಿನ ಎಣಿಕೆ ಮುಕ್ತಾರ. ಮೂರನೇ ಸುತ್ತಿನ ಮತ ಎಣಿಕೆ ಆರಂಭ

ಬೆಳಗ್ಗೆ 8.45 : ಜೆಡಿಎಸ್ ಗೆ 17,914ಮತಗಳ ಮುನ್ನಡೆ. ಜೆಡಿಎಸ್ 26,582 ಮತಗಳು, ಬಿಜೆಪಿ 8, 668 ಮತಗಳು, ನೋಟಾಗೆ  596 ಮತಗಳು ಬಿದ್ದಿವೆ. ಎರಡನೇ ಸುತ್ತಿನ ಮತ ಎಣಿಕೆ ಪೂರ್ಣ.

ಬೆಳಗ್ಗೆ 8.35 : ಜೆಡಿಎಸ್ ಗೆ 7,330ಮತಗಳ ಮುನ್ನಡೆ. ಜೆಡಿಎಸ್ 10, 064, ಬಿಜೆಪಿ 2,734 ಮತಗಳು ಬಂದಿವೆ. ನೋಟಾಗೆ ಬಿದ್ದ  226 ಮತಗಳು ಬಿದ್ದಿವೆ.

ಬೆಳಗ್ಗೆ 8.15 : ಇವಿಎಂ ಮತಗಳ ಎಣಿಕೆ ಆರಂಭ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಮತಗಳ ಎಣಿಕೆ ಶುರು.

ಬೆಳಗ್ಗೆ 8.5 : ಅಂಚೆ ಮತಗಳ ಎಣಿಕೆಗೆ ತಾಂತ್ರಿಕ ತೊಂದರೆ, ಸ್ಕ್ಯಾನ್ ಆಗದೆ ಎಣಿಕೆಗೆ ಅಡ್ಡಿ. ಅಂಚೆ ಮತಗಳು ಸ್ಕ್ಯಾನ್ ಆಗದೆ ಅಧಿಕಾರಿಗಳ ಪರದಾಟ.

ಬೆಳಗ್ಗೆ 8 ಗಂಟೆ : ಮತ ಕೌಂಟಿಂಗ್ ಶುರು

ಬೆಳಗ್ಗೆ 7.45 : ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಸಿಬ್ಬಂದಿ

ಬೆಳಗ್ಗೆ 7.00 ಗಂಟೆ :  ಮಂಡ್ಯ ಲೋಕಸಭಾ ಉಪ ಚುನಾವಣೆ ಮತ ಎಣಿಕೆ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದತ್ತ ಆಗಮಿಸಿದ್ದಾರೆ ಅಧಿಕಾರಿಗಳು ಮತ್ತು ಸಿಬ್ಬಂದಿ.
ಮಂಡ್ಯದ ಸರ್ಕಾರಿ ಮಹಾ ವಿದ್ಯಾಲಯದಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯ. ಎಣಿಕೆ ಕೇಂದ್ರಕ್ಕೆ ಆಗಮಿಸುತ್ತಿರುವ
ಪ್ರತಿಯೊಬ್ಬರನ್ನು ತಪಾಸಣೆ ಮಾಡ್ತಿದ್ದಾರೆ ಪೊಲೀಸರು.

 

ರಾಮನಗರ ವಿಧಾನಸಭಾ ಕ್ಷೇತ್ರ

ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಅವರ ಪತ್ನಿ ಮಿತ್ರ ಪಕ್ಷದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಕಣದಲ್ಲಿದ್ದಾರೆ. ವೋಟಿಂಗ್ ಗೆ ಎರಡೇ ದಿನ ಬಾಕಿ ಇರುವಾಗ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್​.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು. ಅನಿತಾ ಕುಮಾರಸ್ವಾಮಿ ಅವರ ಗೆಲುವು ಬಹುತೇಕ ನಿಶ್ಚಿತ ಅಂತ ಹೇಳಲಾಗ್ತಿದೆ. ಯಾವುದಕ್ಕೂ ರಿಸೆಲ್ಟ್ ಬರೋತನಕ ಕಾಯಲೇ ಬೇಕು.

ರಾಮನಗರದ ಮೊದಲ ಶಾಸಕಿಯಾದ ಅನಿತಾ ಕುಮಾರಸ್ವಾಮಿ..!

ಮಧ್ಯಾಹ್ನ 12.00 : ಮೈತ್ರಿ ಕ್ಯಾಂಡಿಡೇಟ್ ಜೆಡಿಎಸ್ ನ ಅನಿತಾ ಕುಮಾರಸ್ವಾಮಿ ಅವ್ರಿಗೆ 1,09,137 ಮತಗಳ ಅಂತರದ ಭರ್ಜರಿ ಗೆಲುವು.

ಬೆಳಗ್ಗೆ 11.31 : 18 ನೇ ಸುತ್ತು ಮುಕ್ತಾಯ. 1 ಲಕ್ಷಕ್ಕೂ ಅಧಿಕ ಮತಗಳಿಂದ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಮುನ್ನಡೆ.

ಬೆಳಗ್ಗೆ 10.50 : 13 ನೇ ಸುತ್ತು ಮುಕ್ತಾಯ. ಜೆಡಿಎಸ್ ಗೆ 71,613 ಮತಗಳ ಮುನ್ನಡೆ.

ಬೆಳಗ್ಗೆ 10.40 : 11ನೇ ಸುತ್ತಿನ ಎಣಿಕೆ ಮುಕ್ತಾಯ. ಅನಿತಾ ಕುಮಾರಸ್ವಾಮಿಗೆ 59,767 ಮತಗಳ ಮುನ್ನಡೆ.

ಬೆಳಗ್ಗೆ 10.25 : 10 ನೇ ಸುತ್ತು ಮುಕ್ತಾಯ. ಜೆಡಿಎಸ್ ಅನಿತಾ ಕುಮಾರಸ್ವಾಮಿಗೆ – 62,238, ಬಿಜೆಪಿಯ ಚಂದ್ರಶೇಖರ್ 8,524
ಮತಗಳು ಬಂದಿವೆ. 53,714 ಮತಗಳ ಮುನ್ನಡೆ ಸಾಧಿಸಿದ್ದಾರೆ ಅನಿತಾ ಕುಮಾರಸ್ವಾಮಿ‌.

ಬೆಳಗ್ಗೆ 10. 10 : ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿಗೆ ಗೆಲುವು.  ಚುನಾವಣಾ ಆಯೋಗದ ಅಧಿಕೃತ ಆದೇಶ ಬಾಕಿ

ಬೆಳಗ್ಗೆ 10.05 : 9 ನೇ ಸುತ್ತು ಮುಕ್ತಾಯ. ಜೆಡಿಎಸ್ ಅನಿತಾ ಕುಮಾರಸ್ವಾಮಿಗೆ – 54,868, ಬಿಜೆಪಿಯ ಚಂದ್ರಶೇಖರ್ 7,627
ಮತಗಳು ಬಂದಿವೆ. 47,241ಮತಗಳ ಮುನ್ನಡೆ ಸಾಧಿಸಿದ್ದಾರೆ ಅನಿತಾ ಕುಮಾರಸ್ವಾಮಿ‌.

ಬೆಳಗ್ಗೆ 9.50 : 7 ನೇ ಸುತ್ತು ಮುಕ್ತಾಯ. ಜೆಡಿಎಸ್ ಅನಿತಾ ಕುಮಾರಸ್ವಾಮಿಗೆ – 41,650, ಬಿಜೆಪಿಯ ಚಂದ್ರಶೇಖರ್ 6,655 ಮತಗಳು ಬಂದಿವೆ. 34,995 ಮತಗಳ ಮುನ್ನಡೆ ಸಾಧಿಸಿದ್ದಾರೆ ಅನಿತಾ ಕುಮಾರಸ್ವಾಮಿ‌.

ಬೆಳಗ್ಗೆ 9.40 : 6 ನೇ ಸುತ್ತು ಮುಕ್ತಾಯ. ಜೆಡಿಎಸ್ ನ ಅನಿತಾ ಕುಮಾರಸ್ವಾಮಿಗೆ 33,859, ಬಿಜೆಪಿಯ ಚಂದ್ರಶೇಖರ್ 5,861 ಮತಗಳು ಪಡೆದಿದ್ದಾರೆ. 27,998 ಮತಗಳ ಲೀಡ್ ನಲ್ಲಿದ್ದಾರೆ ಅನಿತಾ ಕುಮಾರಸ್ವಾಮಿ‌.

ಬೆಳಗ್ಗೆ 9.15 : ನಾಲ್ಕನೆ ಸುತ್ತಿನ ಮತ ಎಣಿಕೆ ಮುಕ್ತಾಯ. ಮೈತ್ರಿಗೆ 18,766 ಮತಗಳ ಮುನ್ನಡೆ. ಜೆಡಿಎಸ್/ಮೈತ್ರಿಯ ಅನಿತಾ ಕುಮಾರಸ್ವಾಮಿಗೆ 22,691 ಎಲ್ ಚಂದ್ರಶೇಖರ್ 3,925,ನೋಟಾಗೆ 591 ಮತಗಳು ಬಂದಿವೆ.

ಬೆಳಗ್ಗೆ 8.45 : 2ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಅನಿತಾ ಕುಮಾರಸ್ವಾಮಿಗೆ 10,241, ಎಲ್ ಚಂದ್ರಶೇಖರ್ ಗೆ 1,811 ಮತ ಮುನ್ನಡೆ.  ಜೆಡಿಎಸ್/ ಮೈತ್ರಿ ಕ್ಯಾಂಡಿಡೇಟ್ ಅನಿತಾ ಕುಮಾರಸ್ವಾಮಿ ಅವರಿಗೆ 8,430 ಮತಗಳ ಮುನ್ನಡೆ.

ಬೆಳಗ್ಗೆ 8.30 : ಮೊದಲ ಸುತ್ತಿನ ಮತ ಎಣಿಕೆ- ಅನಿತಾ ಕುಮಾರಸ್ವಾಮಿ 4,674 ಮತಗಳು, ಎಲ್ ಚಂದ್ರಶೇಖರ್ 797, ನೋಟಾ 107 ಮತಗಳು. ಜೆಡಿಎಸ್/ಮೈತ್ರಿ ಕ್ಯಾಂಡಿಡೇಟ್ ಅನಿತಾ ಕುಮಾರಸ್ವಾಮಿ ಅವರಿಗೆ  3,877 ಮತಗಳ ಮುನ್ನಡೆ.

ಬೆಳಗ್ಗೆ 8.20 : ಮೊದಲ ಸುತ್ತಿನ ಮತ ಎಣಿಕೆ- ಅನಿತಾ ಕುಮಾರಸ್ವಾಮಿ ಮುನ್ನಡೆ. 
ಬೆಳಗ್ಗೆ 8.10 :
  ಮತ ಅಸಿಂಧು,ಕೇವಲ 1 ಅಂಚೆ ಮತದಾನ ಮಾತ್ರ ಆಗಿತ್ತು.  ಆ ಅಂಚೆ ವೋಟ್ ಕೂಡ ಅಸಿಂಧು

ಬೆಳಗ್ಗೆ 8.5  : ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರು ಅಂಚೆ ಮತ ಎಣಿಕೆಯಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಬೆಳಗ್ಗೆ 8 ಗಂಟೆ : ಮತ ಕೌಂಟಿಂಗ್ ಶುರು

ಬೆಳಗ್ಗೆ 7.45 : ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಸಿಬ್ಬಂದಿ

ಬೆಳಗ್ಗೆ 7.00 ಗಂಟೆ :  ಮತದಾನ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗ್ತಿದೆ. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿರುವ ಸ್ಟ್ರಾಂಗ್ ರೂಮ್ ಇದೆ. ಮತ ಎಣಿಕೆಗೆ 2 ಕೌಂಟಿಂಗ್ ಹಾಲ್ ವ್ಯವಸ್ಥೆ ಮಾಡಲಾಗಿದೆ. ಎರಡೂ ರೂಮ್ ನಲ್ಲಿ 14 ಟೇಬಲ್ ಗಳು,ಪ್ರತಿ ಟೇಬಲ್ ನಲ್ಲಿ 3 ಮಂದಿ ಅಧಿಕಾರಿಗಳಿರಲಿದ್ದಾರೆ. ಒಟ್ಟು 47 ಅಧಿಕಾರಿಳು, ಹೆಚ್ಚುವರಿಯಾಗಿ 10 ಆಧಿಕಾರಿಗಳನ್ನು ನಿಯೋಜಿಸಲಾಗಿದೆ.
ಮೊದಲಿಗೆ ಪೋಸ್ಟಲ್ ಮತಗಳ ಕೌಂಟಿಂಗ್, ನಂತರ ಇವಿಎಂ ಮಷಿನ್ ಕೌಂಟಿಂಗ್ ನಡೆಯುತ್ತೆ. ಒಟ್ಟು 20 ಸುತ್ತಿನ ಮತ ಎಣಿಕೆ ನಡೆಯಲಿದ್ದು, ಪ್ರತಿ ಸುತ್ತಿನಲ್ಲೂ 14 ಪೋಲಿಂಗ್ ಸ್ಟೇಷನ್ ಗಳ ಎಣಿಕೆ ನಡೆಯುತ್ತದೆ.

 

ಜಮಖಂಡಿ ವಿಧಾನಸಭಾ ಕ್ಷೇತ್ರ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಕ್ಯಾಂಡಿಡೇಟ್ ಆಗಿ ಆನಂದ್ ನ್ಯಾಮಗೌಡ ಹಾಗೂ ಬಿಜೆಪಿ ಕ್ಯಾಂಡಿಡೇಟ್ ಆಗಿ ಶ್ರೀಕಾಂತ್ ಕುಲಕರ್ಣಿ ಕಣದಲ್ಲಿದ್ದಾರೆ. ವಿಜಯ ಮಾಲೆ ಯಾರ ಕೊರಳಿಗೆ ಬೀಳುತ್ತೆ ಅನ್ನೋದು ಕುತೂಹಲ.

ಮೊದಲ ಚುನಾವಣೆಯಲ್ಲೇ ನ್ಯಾಮಗೌಡಗೆ ಭರ್ಜರಿ ಗೆಲುವು

ಮಧ್ಯಾಹ್ನ 12 ಗಂಟೆ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ದೋಸ್ತಿ ಸರ್ಕಾರದ ಕ್ಯಾಂಡಿಡೇಟ್ ಆಗಿ ಆನಂದ್ ನ್ಯಾಮಗೌಡ 39,480 ಮತಗಳ ಅಂತರದ ಗೆಲುವು ಪಡೆದಿದ್ದಾರೆ.

ಬೆಳಗ್ಗೆ 11.45 :  ಆನಂದ ನ್ಯಾಮಗೌಡ ಗೆಲವು ನಿಶ್ಚಿತ. ಆನಂದ ನ್ಯಾಮಗೌಡಗೆ 96,968 ಮತಗಳು ಬಂದಿವೆ.
ಬಿಜೆಪಿ ಅಭ್ಯರ್ಥಿ ಶ್ರೀಕಾಂತ್ ಕುಲಕರ್ಣಿ 57,492 ಮತಗಳನ್ನು ಪಡೆದಿದ್ದಾರೆ.

ಬೆಳಗ್ಗೆ 10.15 : 12ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಮುನ್ನಡೆ ಕಾಯ್ದು ಕೊಂಡು ಹೋಗುತ್ತಿರುವ ಕಾಂಗ್ರೇಸ್ ಅಭ್ಯರ್ಥಿ ಆನಂದ ನ್ಯಾಮಗೌಡ. ಕಾಂಗ್ರೆಸ್ ನ ಆನಂದ್ ನ್ಯಾಮಗೌಡ್ 29, 116 ಮತಗಳಿಂದ ಮುನ್ನಡೆ. 71,787ಮತಗಳನ್ನು ಪಡೆದಿದ್ದಾರೆ ನ್ಯಾಮೆಗೌಡ. ಬಿಜೆಪಿಯ ಶ್ರೀಕಾಂತ್ ಕುಲಕರ್ಣಿಗೆ 42,671 ಬಂದಿವೆ.

ಬೆಳಗ್ಗೆ 9.40 : 7 ನೇ ಸುತ್ತಿನ ಮತ ಎಣಿಕೆ ಮುಕ್ತಾಯ. ಕಾಂಗ್ರೆಸ್ ನ ಆನಂದ್ ನ್ಯಾಮಗೌಡ್ ಗೆ 42,446 ಮಗತಗಳು, ಬಿಜೆಪಿಯ ಶ್ರೀಕಾಂತ್ ಕುಲಕರ್ಣಿ 25,930 ಮತಗಳು ಬಂದಿವೆ. ಕಾಂಗ್ರೆಸ್/ ಮೈತ್ರಿಯ ಆನಂದ್ ನ್ಯಾಮಗೌಡ್ 16,516 ಮತಗಳಿಂದ ಮುನ್ನಡೆ.

ಬೆಳಗ್ಗೆ 8.40 : 3, 785ಮತಗಳಿಂದ ಕಾಂಗ್ರೆಸ್ / ಮೈತ್ರಿಗೆ ಮುನ್ನಡೆ. ಕಾಂಗ್ರೆಸ್- 10,882ಮತಗಳು, ಬಿಜೆಪಿ-7,097ಮತಗಳು.

ಬೆಳಗ್ಗೆ 8.30 : ಮೊದಲ ಸುತ್ತಿನ ಮತ ಎಣಿಕೆ‌ ಮುಕ್ತಾಯ. ಕಾಂಗ್ರೆಸ್ ಗೆ1,700 ಮತಗಳ ಮುನ್ನಡೆ. ಕಾಂಗ್ರೆಸ್/ದೋಸ್ತಿ ಕ್ಯಾಂಡಿಡೇಟ್ ನ್ಯಾಮಗೌಡ ಅವರಿಗೆ ಮುನ್ನಡೆ. ಬಿಜೆಪಿ ಕ್ಯಾಂಡಿಡೇಟ್ ಶ್ರೀಕಾಂತ್ ಕುಲಕರ್ಣಿಗೆ ಹಿನ್ನಡೆ.  ಕಾಂಗ್ರೆಸ್ ಗೆ 5,490 ಮತಗಳು, ಬಿಜೆಪಿಗೆ  3,764 ಮತಗಳು.

ಬೆಳಗ್ಗೆ 8.20 : ಮೈತ್ರಿ (ಕಾಂಗ್ರೆಸ್) ಕ್ಯಾಂಡಿಡೇಟ್ ಆನಂದ್ ನ್ಯಾಮಗೌಡ 60 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಬೆಳಗ್ಗೆ 8 ಗಂಟೆ : ಮತ ಕೌಂಟಿಂಗ್ ಶುರು

ಬೆಳಗ್ಗೆ 7.45 : ಸ್ಟ್ರಾಂಗ್ ರೂಮ್ ಓಪನ್ ಮಾಡಿದ ಸಿಬ್ಬಂದಿ

ಬೆಳಗ್ಗೆ 7.00 ಗಂಟೆ : ಜಮಖಂಡಿ ವಿಧಾನಸಭೆ ಚುನಾವಣೆ ರಿಸಲ್ಟ್ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಮತ ಎಣಿಕೆಗೆ ಸಕಲ ಸಿದ್ಧತೆ ನಡೆದಿದೆ.
ಮತ‌ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ. ನಗರದ ಮಿನಿ ವಿಧಾನಸೌಧದಲ್ಲಿ‌ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮತ ಎಣಿಕೆಗೆ 14ಟೇಬಲಗಳನ್ನು ವ್ಯವಸ್ಥೆ ಮಾಡಲಾಗಿದೆ. 1 ಟೇಬಲ್​ಗೆ 3 ಜನ ಚುನಾವಣಾ ಸಿಬ್ಬಂದಿ ನಿಯೋಜನೆ ಆಗಿದ್ದಾರೆ. ಪಕ್ಷಗಳ ಮುಖಂಡರು, ಏಜೆಂಟರು ಕೂರಲು ಪ್ರತ್ಯೇಕ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಕೇಂದ್ರದಿಂದ 50ಮೀಟರ್ ಹೊರಗಡೆ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದಾರೆ.
ಭದ್ರತೆ ದೃಷ್ಠಿಯಿಂದ ಕೆ.ಎಸ್.ಆರ್.ಪಿ,ಪೊಲೀಸ್ ಸಿಬ್ಬಂದಿ ಸೇರಿ 500ಜನ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಎಂಟು ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 11 ಗಂಟೆ ಹೊತ್ತಿಗೆ ಸಂಪೂರ್ಣ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

 

RELATED ARTICLES

Related Articles

TRENDING ARTICLES