Thursday, December 5, 2024

ಮೋದಿಗೆ ಮುಸ್ಲೀಂ ಹೆಂಡ್ತಿಯರ ಚಿಂತೆ-ಇಂಬ್ರಾಹಿಂ..!

ಪ್ರಧಾನಿ ನರೇಂದ್ರ ಮೋದಿ ಅವ್ರಿಗೆ ರಾಮಮಂದಿರ ಚಿಂತೆ ಇಲ್ಲ. ತನ್ನ ಪತ್ನಿಯ ಬಗ್ಗೆಯೂ ಗೊತ್ತಿಲ್ಲ. ಅವ್ರಿಗೆ ಮುಸ್ಲೀಂ ಹೆಂಡ್ತಿಯರ ಚಿಂತೆ.ಮುಸ್ಲೀಮರ ಹೆಂಡ್ತಿಯರ ಬಗ್ಗೆ ಮಾತಾಡೋ ಅವರು ತಮ್ಮ ಹೆಂಡ್ತಿಗೆ ಜೀವನಾಂಶ ಕೊಡ್ತಿದ್ದಾರಾ ಅಂತ ಪರಿಷತ್ ಸದಸ್ಯ ಸಿ. ಎಂ ಇಂಬ್ರಾಹಿಂ ಪ್ರಶ್ನೆ ಮಾಡಿದ್ದಾರೆ.


ಅಯೋಧ್ಯೆ ವಿವಾದವನ್ನು ಬಗೆಹರಿಸೋನ ಇಚ್ಛಾ ಶಕ್ತಿ ಬಿಜೆಪಿಗಿಲ್ಲ. ಅವರು ಈ ವಿಷ್ಯವನ್ನು ಇಟ್ಕೊಂಡು ಮತ ಕೇಳ್ತಿದ್ದಾರೆ. ಹುಬ್ಬಳಿಯ ಈದ್ಗಾ ಮೈದಾನ ಇಟ್ಕೊಂಡು ಮತ ಕೇಳಿದ್ದ ಇವರು (ಬಿಜೆಪಿ) ಈಗ ಅಯೋಧ್ಯೆ ವಿಚಾರ ಇಟ್ಕೊಂಡು ಮತ ಕೇಳ್ತಿದ್ದಾರೆ ಇದು ಬಹಳಾ ಕೀಳು ಮಟ್ಟದ ರಾಜಕೀಯ ಅಂತ ಹೇಳಿದ್ದಾರೆ.
ಇಂದು ದೇಶದಲ್ಲಿ ಸಾಮಾನ್ಯ ಜನರು ಬದುಕುವುದೇ ಕಷ್ಟ. ಗೋ ದೇವ್ರು ಅಂದು ಪೂಜೆ ಮಾಡೋ ಬಿಜೆಪಿಯವರು ಗೋವಾದಲ್ಲಿ ಏನ್ ಮಾಡ್ತಿದ್ದಾರೆ. ಮೋದಿ ಅಧಿಕಾರಕ್ಕೆ ಬಂದಮೇಲೆಯೇ ಗೋ ಮಾಂಸ ರಫ್ತು ಹೆಚ್ಚಾಗಿರೋದು ಅಂತ ಆರೋಪಿಸಿದ ಅವರು ಮುಂದಿನ ಲೋಕಾಸಭಾ ಎಲೆಕ್ಷನ್ ನಲ್ಲಿ ಮೈತ್ರಿ ಸರ್ಕಾರವೇ ಗೆಲುವು ಸಾಧಿಸೋದು ಅಂತ ಸುದ್ದಿಗೋಷ್ಠಿಯಲ್ಲಿ ಭವಿಷ್ಯ ನುಡಿದ್ರು.

RELATED ARTICLES

Related Articles

TRENDING ARTICLES