ರಾಮನಗರ ಬಿಜೆಪಿ ಅಭ್ಯರ್ಥಿ ಎಲ್.ಚಂದ್ರಶೇಖರ್ ಚುನಾವಣಾ ಕಣದಿಂದ ಹಿಂದೆ ಸರಿದು ಮೈತ್ರಿ ಕ್ಯಾಂಡಿಡೇಟ್ ಅನಿತಾ ಕುಮಾರಸ್ವಾಮಿ ಅವ್ರಿಗೆ ಬೆಂಬಲ ಸೂಚಿಸೋದಾಗಿ ಹೇಳಿದ್ದಾರೆ. ಎಲೆಕ್ಷನ್ ಗೆ ಇನ್ನು ಕೇವಲ ಎರಡೇ ಎರಡು ದಿನ ಬಾಕಿ ಇರುವಾಗ ಚಂದ್ರಶೇಖರ್ ಈ ಡಿಸಿಷನ್ ತಗೊಂಡಿದ್ದಕ್ಕೆ ಸ್ವತಃ ಅವರ ತಂದೆ, ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸಿ.ಎಂ ಲಿಂಗಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಒಬ್ಬ ಹೋರಾಟಗಾರ ಅಪ್ಪನಿಗೆ ಹೇಡಿ ಮಗ. ನನ್ನ ರಾಜಕೀಯ ಜೀವನದಲ್ಲಿ ನಾನೆಂದೂ ಇಂಥಾ ಬೆಳವಣಿಗೆಯನ್ನು ನೋಡಿಲ್ಲ. ಮತದಾನಕ್ಕೆ ಎರಡೇ ಎರಡು ದಿನ ಮಾತ್ರ ಇರುವಾಗ ಪಲಾಯನ ಒಳ್ಳೆಯ ಬೆಳವಣಿಗೆ ಅಲ್ಲ. ಮಗನೇ ಆಗಲಿ, ಯಾರೇ ಆಗಲಿ ಇದು ಕೆಟ್ಟ ನಿರ್ಧಾರ ಅಂತ ಹೇಳಿದ್ದಾರೆ.
ನನ್ನ ರಾಜಕೀಯ ಜೀವನದಲ್ಲಿ ನಾನು ರಾಮನಗರಕ್ಕೆ ದೇವೇಗೌಡರು, ಕುಮಾರಸ್ವಾಮಿ ಬಂದ್ರೂ ಎಲ್ಲಿಗೂ ಓಡಿ ಹೋಗಿಲ್ಲ. ಅಂಬರೀಶ್ ವಿರುದ್ಧ ಕಣಕ್ಕಿಳಿದಾಗಲೂ ಕೊನೇ ತನಕ ಹೋರಾಡಿದ್ದೆ. ಚುನಾವಣಾ ಫಲಿತಾಂಶ ಬರೋ ತನಕ ಹೋರಾಟ ಮಾಡೋದು ಶೂರರ ಲಕ್ಷಣ. ಹೇಡಿಗಳು ಮಾತ್ರ ಮಧ್ಯದಲ್ಲೇ ಪಲಾಯನ ಮಾಡ್ತಾರೆ ಅಂತ ಲಿಂಗಪ್ಪ ಮಗನ ವಿರುದ್ಧ ಗರಂ ಆಗಿದ್ದಾರೆ. ಮಗನ ನಡುವಳಿಕೆ ನೋಡಿ ನಗೆ ಅಸಹ್ಯ ಆಗುತ್ತಿದೆ ಅಂದಿದ್ದಾರೆ.
ಹೋರಾಟಗಾರ ಮಗನಿಗೆ ಹೇಡಿ ಮಗ – ಪುತ್ರನ ಮೇಲೇ ತಂದೆ ಲಿಂಗಪ್ಪ ಬೇಸರ..!
TRENDING ARTICLES