#MeToo ಕ್ಯಾಂಪೇನಲ್ಲಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿಯರ ಮೇಲೆ ಕಿರುಚಾಡಿದ್ದ ಡೈರೆಕ್ಟರ್ ಗುರುಪ್ರಸಾದ್ ತನ್ನ ಪತ್ನಿ ಮತ್ತು ಮಗಳನ್ನೇ ಮನೆಯಿಂದ ಹೊರ ಹಾಕಿದ್ರಂತೆ..!
ಮಠ ಡೈರೆಕ್ಟರ್ ಗುರುಪ್ರಸಾದ್ ವಿರುದ್ಧ ಈ ಆರೋಪ ಮಾಡಿರೋದು ಬೇರ್ಯಾರು ಅಲ್ಲ. ಅವರ ಮೊದಲ ಪತ್ನಿ ಆರತಿ.
ಯಾರಿಗೂ ಯಾರ ಮೇಲೂ ಮಾತಾಡೋ ಹಕ್ಕಿಲ್ಲ. ಗುರುಗೆ ಸ್ವಂತ ಮಗಳಿದ್ದಾಳೆ. ಹೀಗಾಗಿ ಒಬ್ಬ ಅಪ್ಪನಾಗಿ ಬೇರೆ ಹೆಣ್ಣುಮಕ್ಕಳ ಬಗ್ಗೆ ಹೇಳೋಕು ಮುಂಚೆ ಯೋಚ್ನೆ ಮಾಡ್ಬೇಕು. ಅವರು ತನ್ನ 14 ವರ್ಷದ ಸ್ವಂತ ಮಗಳನ್ನು ಹಾಗೂ ನನ್ನನ್ನು (ಹೆಂಡ್ತಿಯನ್ನು) ಮಧ್ಯರಾತ್ರಿ ಮನೆಯಿಂದ ಆಚೆ ಹಾಕಿದ್ದರು. ಒಬ್ಬ ವ್ಯಕ್ತಿಗೆ ನಾವು ಬೇಡ ಅಂದ್ಮೇಲೆ ರಗಳೆ ಮಾಡಿ ಏನು ಪ್ರಯೋಜನ ಅಂತ ನಾನು ಏನೂ ರಂಪಾಟ ಮಾಡ್ಲಿಲ್ಲ ಅಷ್ಟೇ. ಇದಾಗಿ 3 ವರ್ಷ ಆಯ್ತು ಅಂತ ಆರತಿ ಹೇಳಿದ್ದಾರೆ.
ಅಪ್ಪನಾಗಿ ತನ್ನ ಜವಬ್ದಾರಿಯನ್ನು ಗುರು ನಿಭಾಯಿಸಿಲ್ಲ. ನಮ್ಗೂ ಅವರಿಗೂ ಯಾವ್ದೇ ರೀತಿ ಕಾಂಟೆಕ್ಟ್ ಈಗಿಲ್ಲ. ಇಬ್ಬರೂ ಒಪ್ಪಿ ಡಿವೋರ್ಸ್ ಗೆ ಅಪ್ಲೇ ಮಾಡಿದ್ದೇವೆ. ಆದ್ರೆ ಅವರು ಕೋರ್ಟ್ ಗೂ ಸರಿಯಾಗಿ ಬರ್ತಿಲ್ಲ. ಡಿವೋರ್ಸ್ ಪೇಪರ್ ಗೆ ಸಹಿ ಕೂಡ ಹಾಕಿಕೊಡ್ತಿಲ್ಲ ಅಂತ ಆರೋಪಿಸಿದ್ದಾರೆ.
ಶೂಟಿಂಗ್ ಟೈಮ್ ನಲ್ಲಿ ಪತ್ನಿ ನನ್ನ ಜೊತೆ ಇದ್ದರೆಂದು ಗುರುಪ್ರಸಾದ್ ಹೇಳಿದ್ದರು. ಈ ಬಗ್ಗೆಯೂ ಪ್ರತಿಕ್ರಿಯೆ ನೀಡಿರೋ ಆರತಿ, ಮಗಳಿಗೆ ರಜಾ ಇದ್ದಾಗ ಅವರ ಜೊತೆ ನಾವು ಶೂಟಿಂಗ್ ಗೆ ಹೋಗ್ತಿದ್ವಿ. ಹೀಗಾಗಿ ಈ ವೇಳೆಯೂ ಶೂಟಿಂಗ್ ನಲ್ಲಿ ನಾವಿದ್ವಿ. ನಾನು, ನನ್ನ ಮಗಳೇ ಸಂಗೀತಾ ಭಟ್ ಕಾಸ್ಟ್ಯುಮ್ ಡಿಸೈನ್ ಮಾಡಿದ್ವಿ ಅಂದಿದ್ದಾರೆ.