ಸಂಸದ ಪ್ರತಾಪ್ ಸಿಂಹ ಮೈತ್ರಿ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವ್ರ ವಿರುದ್ಧ ವಾಕ್ಸಮರ ಮುಂದುವರೆಸಿದ್ದಾರೆ.
ಶಿವಮೊಗ್ಗದಲ್ಲಿ ಮಾತಾಡಿದ ಪ್ರತಾಪ್ ಸಿಂಹ, 5 ಕ್ಷೇತ್ರಗಳ ಉಪಚುನಾವಣೆಗಳು, ಮುಂದಿನ ಬದಲಾವಣೆಗೆ ನಾಂದಿ ಹಾಡಲಿವೆ. ಈ ಬೈ ಎಲೆಕ್ಷನ್ ನಂತರ ಸರ್ಕಾರ ಪತನವಾಗುವುದು ಖಚಿತ. ಈ ಹಿನ್ನೆಲೆಯಲ್ಲಿಯೇ, ಎಲ್ಲರೂ ಬಂದು ಠಿಕಾಣಿ ಹೂಡಿದ್ದಾರೆ ಅಂತ ಹೇಳಿದ್ರು.
ನಿಮ್ಮಪ್ಪನ ಆಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲ್ಲ ಅಂತ ಹೇಳಿದವರು, ನಂತ್ರ ದೇವೆಗೌಡರ ಕಾಲು ಹಿಡಿದು, ಸರ್ಕಾರ ರಚನೆಗೆ ಮುಂದಾಗುತ್ತಾರೆ. ಕರ್ನಾಟಕದ ಜನತೆ, ಮೋದಿ ಹಾಗೂ ಯಡಿಯೂರಪ್ಪ ರ ಮೇಲೆ ವಿಶ್ವಾಸವನ್ನಿಟ್ಟಿದ್ದಾರೆ.ಕುಮಾರಸ್ವಾಮಿ ಮತ್ತು ದೇವೆಗೌಡರ ಮೇಲೆ ಭರವಸೆ ಇಟ್ಟಿಲ್ಲ. ಕಳೆದ ಬಾರಿ ಚುನಾವಣೆ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟ, ನಟಿಯರನ್ನು ಕರೆಸಿ ಪ್ರಚಾರ ನಡೆಸಿದ್ದರು. ಆದರೆ, ಏನಾಯಿತು? ಜನತೆ,ಯಡಿಯೂರಪ್ಪನವರ ಕೈ ಹಿಡಿದರು. ಯಾರನ್ನು ಏಕವಚನದಲ್ಲಿ ಸಿದ್ಧರಾಮಯ್ಯ ನಿಂದಿಸಿದ್ದರೋ ಅವರನ್ನೇ ಈಗ ಅಧಿನಾಯಕಿ ಅಂತ ಒಪ್ಪಿಕೊಂಡಿದ್ದಾರೆ ಅಂತ ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದ್ರು.
ಯಡಿಯೂರಪ್ಪನವರ ಆಸ್ತಿ ಬಗ್ಗೆ ಕುಮಾರಸ್ವಾಮಿ ಮಾತನಾಡುತ್ತಾರೆ, ಅವರ ಪತ್ನಿಯ ಆಸ್ತಿ ಬಗ್ಗೆ ಮಾತನಾಡಲಿ. ರಾಮನಗರದಲ್ಲಿ ಕುಮಾರಸ್ವಾಮಿ ಪತ್ನಿ, 167 ಕೋಟಿ ಚಿನ್ನದ ಆಲೂಗಡ್ಡೆ ಬೆಳೆದಿದ್ದಾರಾ ಅಂತ ಪ್ರಶ್ನೆ ಮಾಡಿದ ಪ್ರತಾಪ್ ಸಿಂಹ, ಕುಮಾರಸ್ವಾಮಿಯವರೇ, ಮುಖ್ಯಮಂತ್ರಿಯಾಗಿ ಮತ್ತು ಮಾಜಿ ಮುಖ್ಯಮಂತ್ರಿಯಾಗಿ, ನೀವು ಏನು ಮಾಡಿದ್ದಿರಿ ಅಂತ ಸ್ಪಷ್ಟಪಡಿಸಿ ಅಂತ ಸವಾಲು ಹಾಕಿದ್ರು.
ಯಡಿಯೂರಪ್ಪ ಮುಖ್ಯಮಂತ್ರಿಗಳು ಸಂಸದರಾದ ನಂತರ, ಶಿವಮೊಗ್ಗ ಅನೇಕ ಬದಲಾವಣೆ ಕಂಡಿದೆ, ಹಲವಾರು ರೈಲ್ವೆ ಯೋಜನೆಗಳು ಜಾರಿಯಾಗುತ್ತಿವೆ.ಯಡಿಯೂರಪ್ಪ ಸಂಸದರಾದ ಮೇಲೆ, ರೈಲ್ವೆ ಗೆ ಅತಿ ಹೆಚ್ಚು ಅನುದಾನ ತಂದಿದ್ದಾರೆ ಅಂತ ತಮ್ಮ ಪಕ್ಷ ಹಾಗೂ ರಾಜ್ಯಾಧ್ಯಕ್ಷರ ಪರ ಮೆಚ್ಚುಗೆಯ ಮಾತುಗಳನ್ನಾಡಿದ್ರು.