Monday, April 21, 2025

ಡೈರೆಕ್ಟರ್ ಗೆ ಕೊಲೆ ಬೆದರಿಕೆ ಹಾಕಿದ ಹುಚ್ಚ ವೆಂಕಟ್..!

ನಟ, ನಿರ್ದೇಶಕ ಹುಚ್ಚ ವೆಂಕಟರ್ ಡೈರೆಕ್ಟರ್ ಒಬ್ಬರಿಗೆ ಕೊಲೆ ಬೆದರಿಕೆ ಹಾಕಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಸದಾ ಒಂದಿಲ್ಲೊಂದು ಕಾಂಟ್ರವರ್ಸಿ ಮೂಲಕ ಸುದ್ದಿಯಲ್ಲಿರೋ ವೆಂಕಟ್ ಮೇಲೀಗ ಕೊಲೆ ಬೆದರಿಕೆ ಆರೋಪ ಬಂದಿದೆ.
ವೆಂಕಟ್ ವಿರುದ್ಧ ಈ ಆರೋಪ ಮಾಡಿರೋದು ‘ಫೇಸ್ ಬುಕ್ ಲೈಫ್’ ಸಿನಿಮಾ ಡೈರೆಕ್ಟರ್ ಕೀರ್ತನ್ ಶೆಟ್ಟಿ. ಇವ್ರು ಟ್ವೀಟ್ ಮೂಲಕ ಹುಚ್ಚ ವೆಂಕಟ್ ವಿರುದ್ಧ ಈ ಆರೋಪ ಮಾಡಿದ್ದಾರೆ. ನನ್ನ ಸಾವಿಗೆ ಹುಚ್ಚ ವೆಂಕಟ್ ಕಾರಣ, ಹುಚ್ಚ ವೆಂಕಟ್ ನಿಂದ ನನ್ನ ಮೇಲೆ ಹಲ್ಲೆಗೆ ಯತ್ನ ಅಂತ ಕೀರ್ತನ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಹುಚ್ಚ ವೆಂಕಟ್ ಸಿನಿಮಾದಲ್ಲಿ ಆ್ಯಕ್ಟ್ ಮಾಡ್ತೀನಿ ಅಂತ ಒಪ್ಪಿ 30,000 ರೂ ದುಡ್ಡು ಪಡೆದು ಶೂಟಿಂಗ್ ಗೆ ಬರದೇ ಕೈ ಕೊಟ್ಟಿದ್ದಾರೆ. ದುಡ್ಡು ಕೂಡ ವಾಪಸ್ಸು ಕೊಟ್ಟಿಲ್ಲ ಅಂತಲೂ ಕೀರ್ತನ್ ಆರೋಪಿಸಿದ್ದಾರೆ.

RELATED ARTICLES

Related Articles

TRENDING ARTICLES