Thursday, January 2, 2025

ಸಚಿನ್ ಗಿಂತ   ಕೊಹ್ಲಿಯೇ ಬೆಸ್ಟ್ ಅಂತಿದೆ ಇವತ್ತು ಮಾಡಲಿರೋ ಈ  ರೆಕಾರ್ಡ್..!

ಕ್ರಿಕೆಟ್ ದೇವ್ರು ಸಚಿನ್ ತೆಂಡೂಲ್ಕರ್ ರೆಕಾರ್ಡ್ ಅನ್ನು ಬ್ರೇಕ್ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ ಅಂತ ಇಡೀ ಕ್ರಿಕೆಟ್ ಜಗತ್ತೇ ಮಾತಾಡಿಕೊಳ್ತಿದ್ದ ಕಾಲವೊಂದಿತ್ತು. ಆದ್ರೆ, ಈ ಮಾತುಗಳು ಕೇಳಿಬಂದಿದ್ದು ವಿರಾಟ್ ಕೊಹ್ಲಿ ಅನ್ನೋ ಯಂಗ್ ಪ್ಲೇಯರ್ ವರ್ಲ್ಡ್ ಕ್ರಿಕೆಟ್ ಗೆ ಎಂಟ್ರಿ ಕೊಡೋ ತನಕ ಮಾತ್ರ..! ಯಾವಾಗ ವಿರಾಟ್ ಟೀಮ್ ಇಂಡಿಯಾ ಸೇರಿಕೊಂಡ್ರೋ ಅವತ್ತೇ ಇಡೀ ಕ್ರಿಕೆಟ್ ಜಗತ್ತು ಯೂಟರ್ನ್ ಹೊಡೆದಿತ್ತು..! ಈ ವಿರಾಟ್ ಸಚಿನ್ ರೆಕಾರ್ಡನ್ನು ಮುರೀತಾರೆ ಅಂತ ಪ್ರೆಡಿಕ್ಟ್ ಮಾಡಲಾಗಿತ್ತು. ಅಂದು ಕ್ರಿಕೆಟ್ ದಿಗ್ಗಜರು, ವಿಶ್ಲೇಷಕರು, ಅಭಿಮಾನಿಗಳು ನುಡಿದಿದ್ದ ಭವಿಷ್ಯ ಒಂದೊಂದಾಗಿಯೇ ನಿಜವಾಗ್ತಾ ಬಂದಿದೆ. ವಿರಾಟ್ ಕೊಹ್ಲಿ ಕ್ರಿಕೆಟ್ ಬುಕ್ ನಲ್ಲಿ ಒಂದೊಂದೇ ಮೈಲಿಗಲ್ಲು ಸ್ಥಾಪಿಸ್ತಿದ್ದಾರೆ.

ಇಂದು ವಿಶಾಖಪಟ್ಟಣದಲ್ಲಿ ಟೀಮ್ ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ನಡುವೆ 2ನೇ ಒನ್ ಡೇ ಮ್ಯಾಚ್ ನಡೆಯಲಿದೆ. ಈ ಮ್ಯಾಚ್ ನಲ್ಲಿ ಕ್ಯಾಪ್ಟನ್ ಕೊಹ್ಲಿ ಮತ್ತೊಂದು ರೆಕಾರ್ಡ್ ಮಾಡೋ ಸಾಧ್ಯತೆ ಉಂಟು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವ್ರ ಬಿಗ್ ರೆಕಾರ್ಡ್ ವೊಂದನ್ನು ಕೊಹ್ಲಿ ಬ್ರೇಕ್ ಮಾಡಲಿದ್ದಾರೆ. ಈ ರೆಕಾರ್ಡ್ ಗೆ ರನ್ ಮಷಿನ್ ಕೊಹ್ಲಿಗೆ ಬೇಕಿರೋದು ಕೇವಲ 81 ರನ್ ಮಾತ್ರ..!

ಕೊಹ್ಲಿ 81ರನ್ ಗಳಿಸಿದ್ರೆ ಅತ್ಯಂತ ವೇಗವಾಗಿ 10 ಸಾವಿರ ರನ್ ಪೂರೈಸಿದ ಬ್ಯಾಟ್ಸ್ ಮನ್ ಅನ್ನೋ ಕಿರೀಟ ಮುಡಿಗೇರಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ದೆ ಈ ಮೂಲಕ ಸಚಿನ್ ರೆಕಾರ್ಡ್ ಅಳಿಸಲಿದ್ದಾರೆ. ಸಚಿನ್ 10 ಸಾವಿರ ರನ್ ಮಾಡೋಕೆ 259 ಇನ್ನಿಂಗ್ಸ್ ತಗೊಂಡಿದ್ರು. ಆದ್ರೆ ವಿರಾಟ್ ಈಗಾಗಲೇ 204 ಇನ್ನಿಂಗ್ಸ್ ಗಳನ್ನಾಡಿ 9,919 ರನ್ ಮಾಡಿದ್ದಾರೆ. ಒಟ್ನಲ್ಲಿ ಸಚಿನ್ ಗಿಂತ ಫಾಸ್ಟ್ ಆಗಿ ಕೊಹ್ಲಿ 10ಸಾವಿರ ರನ್ ಪೂರೈಸೋದ್ರಲ್ಲಿ ಡೌಟೇ ಇಲ್ಲ. ಇಂದಿನ ಮ್ಯಾಚ್ ನಲ್ಲೇ ಕೊಹ್ಲಿ ಈ ರೆಕಾರ್ಡ್ ಮಾಡೋ ಸಾಧ್ಯತೆ ಇದೆ. ಇಂದು ಮಾಡಲಿರೋ ರೆಕಾರ್ಡ್ ಹೇಳ್ತಿದೆ   ಸಚಿನ್ ಗಿಂತ ಕೊಹ್ಲಿಯೇ ಬೆಸ್ಟ್ ಅಂತ..!

RELATED ARTICLES

Related Articles

TRENDING ARTICLES