Thursday, January 2, 2025

ರಕ್ಷಿತಾ ಪ್ರೇಮ್ ‘ಗಂಡ-ಹೆಂಡತಿ’ ರಿಜೆಕ್ಟ್ ಮಾಡಿದ್ದೇಕೆ..?

ಗಂಡ-ಹೆಂಡತಿ, 2006ರಲ್ಲಿ ರಿಲೀಸ್ ಆದ ಸ್ಯಾಂಡಲ್ ವುಡ್ ಮೂವಿ. ಇದು ಬಾಲಿವುಡ್ ನ ‘ಮರ್ಡರ್’ ರಿಮೇಕ್. ರಿಲೀಸ್ ಆಗಿ 12 ವರ್ಷ ಆದ್ಮೇಲೆ ಈಗ ಮತ್ತೆ ಈ ಮೂವಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ #MeToo. ಈ ಸಿನಿಮಾ ಹೀರೋಯಿನ್ ಸಂಜನಾ ಗಲ್ರಾನಿ ಡೈರೆಕ್ಟರ್ ರವಿ ಶ್ರೀವತ್ಸ ಅವ್ರ ಬಗ್ಗೆ ಆರೋಪ ಮಾಡ್ತಿದ್ದಾರೆ. ಒಂದೇ ಒಂದು ಕಿಸ್ ಸೀನ್ ಇರುತ್ತೆ ಅಂತ ನನ್ನ ಒಪ್ಪಿಸಿ ಲೆಕ್ಕವಿಲ್ಲದಷ್ಟು ಕಿಸ್ ಸೀನ್ ತೆಗೆದಿದ್ದಾರೆ. ನಾನು ಪ್ರಶ್ನೆ ಮಾಡಿದ್ರೆ ಸಿನಿಮಾ ಚೆನ್ನಾಗಿ ಬರ್ಬೇಕೋ ಬೇಡ್ವಾ? ನೀನು ಒಪ್ಪದೇ ಇದ್ರೆ ನಿರ್ಮಾಪಕರ ಮಂಡಳಿಗೆ ದೂರು ಕೊಡ್ತೀನಿ ಅಂತೆಲ್ಲಾ ಹೆದರಿಸಿ ಕಿಸ್ ಮಾಡಿಸಿದ್ರು. ಅದು ನನ್ನ ಫಸ್ಟ್ ಮೂವಿ ಆಗಿದ್ರಿಂದ ಪ್ರತಿಭಟಿಸೋ ಧೈರ್ಯ ಇರ್ಲಿಲ್ಲ. ಈಗ ಅವೆಲ್ಲವನ್ನೂ ಹೇಳೋ ಟೈಮ್ ಬಂದಿದೆ ಅಂತ ಸಂಜನಾ ‘ಗಂಡ-ಹೆಂಡತಿ’ ಯ ಕೆಟ್ಟ ಎಕ್ಸ್ಪೀರಿಯನ್ಸ್ ಅನ್ನು ಬಿಚ್ಚಿಟ್ಟಿದ್ದಾರೆ.

ಸಂಜನಾ  ಮಾಡಿರೋ ಆರೋಪ ಕೇಳ್ಸ್ಕೊಂಡು ರವಿ ಶ್ರೀವತ್ಸ ಸುಮ್ನೆ ಇರ್ತಾರಾ? ಪ್ರೆಸ್ ಮೀಟ್ ಮಾಡಿ ಸಂಜನಾ ಈಗ ಪಬ್ಲಿಸಿಟಿಗಾಗಿ ಹೀಗೆ ಮಾಡ್ತಿದ್ದಾರೆ. ಅವ್ರಿಗೆ ಸುಳ್ಳು ಹೇಳಿ ಸಿನಿಮಾ ಮಾಡಿಲ್ಲ ಅಂದಿದ್ದಾರೆ. ಇದೇ ವೇಳೆ ಮತ್ತೊಂದು ವಿಷ್ಯವನ್ನೂ ಅವ್ರು ಬಹಿರಂಗ ಪಡಿಸಿದ್ದಾರೆ.

ಸಂಜನಾ ಅವ್ರನ್ನು ‘ಗಂಡ-ಹೆಂಡತಿ’ಗೆ ಸೆಲೆಕ್ಟ್ ಮಾಡೋ ಮುಂಚೆ ರಕ್ಷಿತಾ ಪ್ರೇಮ್ ಅವ್ರನ್ನು ಸೆಲೆಕ್ಟ್ ಮಾಡಿದ್ವಿ. ಅವ್ರನ್ನ ಅಪ್ರೋಚ್ ಕೂಡ ಮಾಡಿದ್ವಿ. ಆದ್ರೆ, ಅವ್ರು ಈ ರೀತಿಯ ಸಿನಿಮಾ ಮಾಡಲ್ಲ ಅಂದಿದ್ರು. ಆಮೇಲೆ ಬೇರೆ ಹೀರೋಯಿನ್ ಹುಡ್ಕುವಾಗ ಸಿಕ್ಕಿದ್ದೇ ಸಂಜನಾ. ಅವ್ರಿಗೆ ಕಥೆ ಹೇಳಿದ್ವಿ, ಸಿನಿಮಾ ಹೀಗೇ ಇರುತ್ತೆ ಅಂತ ಡೀಟೈಲ್ ಆಗಿ ವಿವರಿಸಿದ್ವಿ. ಅವ್ರು ಒಪ್ಕೊಂಡ ಮೇಲೆಯೇ ಶೂಟಿಂಗ್ ಶುರುಮಾಡಿದ್ದು ಅಂತ ಶ್ರೀವತ್ಸ ಹೇಳಿದ್ದಾರೆ. ಗಂಡ-ಹೆಂಡತಿ ಸಿನಿಮಾ  ರಕ್ಷಿತಾ ರಿಜೆಕ್ಟ್ ಮಾಡಿದ್ದಕ್ಕೆ ಸಂಜನಾಗೆ ಅವಕಾಶ ಸಿಕ್ಕಿದ್ದು ಅನ್ನೋದು ಸದ್ಯದ ಸುದ್ದಿ.

 

RELATED ARTICLES

Related Articles

TRENDING ARTICLES