ಟೀಮ್ ಇಂಡಿಯಾದ ಕ್ಯಾಪ್ಟನ್ ವಿರಾಟ್ ಕೊಹ್ಲಿ ವರ್ಲ್ಡ್ ಕ್ರಿಕೆಟ್ ನ ಇರೋ ಬರೋ ರೆಕಾರ್ಡ್ ಗಳನ್ನೆಲ್ಲಾ ತನ್ನ ಹೆಸ್ರಿಗೆ ಬರೆಸಿಕೊಳ್ಬೇಕು ಅಂತ ಡಿಸೈಡ್ ಮಾಡಿದಂತಿದೆ. ಹೀಗಂತ ಸುಮ್ ಸುಮ್ನೆ ಹೇಳೋಕೆ ಆಗಲ್ಲ ಅಲ್ವಾ? ಕೊಹ್ಲಿಯ ರೆಕಾರ್ಡ್ ಗಳನ್ನು ಇಟ್ಕೊಂಡೇ ಈ ಮಾತು ಹೇಳ್ತಿರೋದು.
ವಿಶಾಖಪಟ್ಟಣದಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ 2ನೇ ಒನ್ ಡೇ ಮ್ಯಾಚ್ ನಲ್ಲಿ ಅಬ್ಬರಿಸಿದ ಕೊಹ್ಲಿ ಒಂದಲ್ಲ ಎರಡಲ್ಲ 7 ದಾಖಲೆಗಳನ್ನು ಮಾಡಿದ್ದಾರೆ.
ಆ ಏಳು ರೆಕಾರ್ಡ್ ಗಳು ಇಲ್ಲಿವೆ.
1) 4,000ರನ್ : ಭಾರತದಲ್ಲಿ ವೇಗವಾಗಿ 4,000ರನ್ ಮಾಡಿದ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ.
2) 10,000 ರನ್ : ವೇಗವಾಗಿ 10,000 ರನ್ ಪೂರೈಸಿದ್ದು ವಿರಾಟ್ ಮಾಡಿದ ಇಂದಿನ 2ನೇ ರೆಕಾರ್ಡ್. ಈ ಮೂಲಕ ಸಚಿನ್ ರೆಕಾರ್ಡ್ ಬ್ರೇಕ್ ಮಾಡಿದ ಹಿರಿಮೆ ಕೊಹ್ಲಿ ಅವರದ್ದಾಗಿದೆ.
3) ಹೆಚ್ಚು ಶತಕ : ವೆಸ್ಟ್ ಇಂಡೀಸ್ ವಿರುದ್ಧ ಅತೀ ಹೆಚ್ಚು ಸೆಂಚುರಿ ಬಾರಿಸಿದ ಬ್ಯಾಟ್ಸ್ ಮನ್ ಅನ್ನೋ ಹೆಗ್ಗಳಿಕೆ ಕೊಹ್ಲಿಯದ್ದಾಗಿದೆ. ವಿಂಡೀಸ್ ವಿರುದ್ಧ ಇದು ಕೊಹ್ಲಿಯ 6ನೇ ಸೆಂಚುರಿ.
4) 1,000 ರನ್ : ವರ್ಷದಲ್ಲಿ ಅತೀ ಕಮ್ಮಿ ಅವಧಿಯಲ್ಲಿ 1,000ರನ್ ಮಾಡಿದ ಸಾಧನೆ. ಈ ವರ್ಷ ಕೇವಲ 11 ಇನ್ನಿಂಗ್ಸ್ ಗಳಲ್ಲಿ ಈ ರೆಕಾರ್ಡ್ ಮಾಡಿದ್ದಾರೆ. 2017ರ ಸಾಲಿನಲ್ಲೂ ಕೊಹ್ಲಿ 1,000ರನ್ ಗಡಿ ದಾಟಿದ್ರು.
5) ಹೆಚ್ಚು ಸರಾಸರಿ : ಹೈಯಸ್ಟ್ ಆವರೇಜ್ (ಹೆಚ್ಚು ಬ್ಯಾಟಿಂಗ್ ಸರಾಸರಿ) ನಲ್ಲಿ 10ಸಾವಿರ್ ಪೂರೈಸಿದ ದಾಖಲೆ. ಧೋನಿ ರೆಕಾರ್ಡ್ ಬ್ರೇಕ್.
6) ಅತೀ ಹೆಚ್ಚು ರನ್ : ವೆಸ್ಟ್ ಇಂಡೀಸ್ ವಿರುದ್ಧ ಅತೀಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಆದ ಕೊಹ್ಲಿ. ಇಲ್ಲೂ ಸಚಿನ್ ರೆಕಾರ್ಡ್ ಬ್ರೇಕ್.
7) ಧೋನಿ ರೆಕಾರ್ಡ್ ಬ್ರೇಕ್ : ಭಾರತದಲ್ಲಿ ಅತೀವೇಗವಾಗಿ ಉತ್ತಮ ಸರಾಸರಿಯಲ್ಲಿ 4,000ರನ್ ಸಿಡಿಸಿದ ಕೊಹ್ಲಿ. ಇಲ್ಲಿಯೂ ಕೂಲ್ ಕ್ಯಾಪ್ಟನ್ ಧೋನಿ ರೆಕಾರ್ಡ್ ಉಡೀಸ್.
ಇದಿಷ್ಟೇ ಅಲ್ದೆ 4ನೇ ಬಾರಿ ಒಡಿಐ ಕ್ರಿಕೆಟ್ ನಲ್ಲಿ 150 ರನ್ ಗಡಿದಾಟಿದ ಸಾಧನೆ ಮಾಡಿದ್ದಾರೆ.