Monday, December 9, 2024

ಶ್ರುತಿ ಪರ ‘ಕಿರಿಕ್’ ಚೆಲುವೆ ಬ್ಯಾಟಿಂಗ್..! ನಿಮ್ ಮನೆ ಹೆಣ್ಮಕ್ಳಿಗೆ ಹೀಗಾದ್ರೆ ಸುಮ್ನಿರ್ತೀರಾ..?

‘ಕಿರಿಕ್ ಪಾರ್ಟಿ’ ಸಿನಿಮಾ ಖ್ಯಾತಿಯ ನಟಿ  ಸಂಯುಕ್ತಾ ಹೆಗ್ಡೆ ಸಾಮಾನ್ಯವಾಗಿ ಕಿರಿಕ್ ಗಳಿಂದಲೇ ಸುದ್ದಿಯಲ್ಲಿರೋ ಬೆಡಗಿ. ಈ ‘ಕಿರಿಕ್ ‘ ಚೆಲುವೆ ನಟಿ ಶ್ರುತಿ ಹರಿಹರನ್ ಪರ ಬ್ಯಾಟಿಂಗ್‌ ನಡೆಸಿದ್ದಾರೆ. ‌

ನಟ ಅರ್ಜುನ್ ಸರ್ಜಾ ಬಗ್ಗೆ ಶ್ರುತಿ ಲೈಂಗಿಕ ಕಿರುಕುಳ ಆರೋಪ ಮಾಡಿರೋದು ಸ್ಯಾಂಡಲ್ ವುಡ್ ನ ಸದ್ಯದ ಹಾಟ್ ಟಾಪಿಕ್.

ಈ ಬಗ್ಗೆ ಸ್ಯಾಂಡಲ್ ವುಡ್ ನ ಒಬ್ಬೊಬ್ಬರೇ ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ. ಈಗ ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆ ಮಾತಾಡಿದ್ದಾರೆ.

“ಅರ್ಜುನ್ ಸರ್ಜಾಗೆ ಒಳ್ಳೆಯ ಹೆಸರಿನ ಜೊತೆ ದುಡ್ಡು ಕೂಡ ಇದೆ. ಆದ್ರಿಂದ ಜನ ಅವರ ಬೆಂಬಲಕಿದ್ದಾರೆ. ದುಡ್ಡಿದೆ , ಹೆಸರಿದೆ ಅಂದ್ ಮಾತ್ರಕ್ಕೆ ಕೀಳು ಮಟ್ಟದ ವರ್ತನೆ ತೋರೋ ಅಧಿಕಾರ ಕೊಟ್ಟೋರ್ಯಾರು ಅಂತ ಸಂಯುಕ್ತಾ ಪ್ರಶ್ನೆ ಮಾಡಿದ್ದಾರೆ.

ನಮ್ಗಂತು (ನಟಿಯರಿಗೆ) ನಟರಷ್ಟು ಸಂಬಳ ಇಲ್ಲ. ದಯವಿಟ್ಟು ಕನಿಷ್ಠ ಪಕ್ಷ ಗೌರವವನ್ನಾದ್ರೂ ಕೊಡಿ. ನಾವೇನಾದ್ರು  ಮಾತಾಡಿದ್ರೆ ಬೇರೆಯವರನ್ನು ಇಂಡಸ್ಟ್ರಿಗೆ ಕರ್ಕೊಂಡು ಬರ್ತಾರೆ. ನಿಮ್ ಮನೆ ಹೆಣ್ಮಕ್ಕಳಿಗೆ ಹಿಂಗಾದ್ರೆ ಸುಮ್ನೆ ಇರ್ತೀರ ಅಂತ ಕೇಳಿದ್ದಾರೆ.

ಶ್ರುತಿ ಹರಿಹರನ್ ಒಳ್ಳೆಯ ಹುಡ್ಗಿ. ಸುಮ್ ಸುಮ್ನೆ ಹೇಳಿಕೊಳ್ಳೋ ಅಗತ್ಯ ಅವ್ರಿಗಿಲ್ಲ. ತಪ್ಪು ಮಾಡಿದವ್ರಿಗೆ ಶಿಕ್ಷೆ ಆಗ್ಬೇಕು ಅಂತ ಸಂಯುಕ್ತಾ ಟ್ವೀಟ್ ಮಾಡಿದ್ದಾರೆ.

RELATED ARTICLES

Related Articles

TRENDING ARTICLES