Wednesday, January 8, 2025

ಕ್ರಿಕೆಟ್ ಗೆ ಗುಡ್ ಬೈ ಹೇಳಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಡ್ತಾರಾ ಕ್ಯಾಪ್ಟನ್ ಕೂಲ್?

ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸೋ ಸೂಚನೆ ಸಿಕ್ಕಿದೆ.  ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ಗುಡ್ ಬೈ ಹೇಳಿರೋ ಕ್ಯಾಪ್ಟನ್ ಕೂಲ್ 2019ರ ವರ್ಲ್ಡ್ ಕಪ್ ನಂತ್ರ ಒಡಿಐ ಮತ್ತು ಟಿ20 ಗೂ ಗುಡ್ ಬೈ ಹೇಳೋದು ಬಹುತೇಕ ಕನ್ಫರ್ಮ್.

ಕ್ರಿಕೆಟ್ ಬಿಟ್ಟಾದ್ಮೇಲೆ ಧೋನಿ ಪಾಲಿಟಿಕ್ಸ್ ಗೆ ಎಂಟ್ರಿ ಕೊಡಲಿದ್ದಾರಂತೆ. ಧೋನಿ ಬಿಜೆಪಿ ಪರ ಬ್ಯಾಟ್ ಬೀಸುತ್ತಾರೆ ಅಂತ ಹೇಳಲಾಗ್ತಿದೆ. ಅಷ್ಟೇ ಅಲ್ದೆ ಧೋನಿ ಜಾರ್ಖಂಡ್ ನಿಂದ ಬಿಜೆಪಿ ಕ್ಯಾಂಡಿಡೇಟ್ ಆಗಿ ಕಣಕ್ಕಿಳಿಯುತ್ತಾರೆ ಅನ್ನೋ ಮಾತು ಕೇಳಿಬಂದಿದೆ.‌ ಹಿಂದೊಮ್ಮೆ ಇಂಥಾ ಮಾತು ಕೇಳಿ ಬಂದಾಗ ಧೋನಿ ತಾನು ರಾಜಕೀಯಕ್ಕೆ ಎಂಟ್ರಿಕೊಡುವುದೇ ಇಲ್ಲ ಅಂತ ಹೇಳಿದ್ರು. ಈಗ ಏನ್ ಹೇಳ್ತಾರೆ ಕಾದು ನೋಡ್ಬೇಕು.‌ಧೋನಿ ಮನಸ್ಸು ಬದಲಾಯಿಸಿ ಪಾಲಿಟಿಕ್ಸ್ ಗೆ ಎಂಟ್ರಿಕೊಟ್ರೂ ಆಶ್ಚರ್ಯವೇನಿಲ್ಲ.

 

ಧೋನಿ ಫಾರ್ಮ್ ಕಳೆದುಕೊಂಡಿರೋದ್ರಿಂದ ಅವ್ರನ್ನು ಟೀಮ್ ನಿಂದ ಕೈ ಬಿಡ್ಬೇಕು ಅನ್ನೋ ಮಾತು ಕೇಳಿಬರ್ತಿದೆ. ಟೀಕೆಗೆ ಗುರಿ ಆಗಿರೋ ಧೋನಿ ಸದ್ಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರೋ ಒಡಿಐ ಟೂರ್ನಿಯಲ್ಲಿ ರನ್ ಮಳೆ ಹರಿಸಿ ಟೀಕಾಕಾರರ ಬಾಯಿ ಮುಚ್ಚಿಸ್ಬೇಕಿದೆ.

RELATED ARTICLES

Related Articles

TRENDING ARTICLES