Tuesday, January 21, 2025

ಆ್ಯಕ್ಸಿಡೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ತಮಿಳುನಾಡು : ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಆ್ಯಕ್ಸಿಡೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು‌ ಮೃತಪಟ್ಟಿರುವ ಘಟನೆ ಶೂಲಗಿರಿ ಬಳಿ ನಡೆದಿದೆ.
ನ್ಯಾಷನಲ್ ಹೈವೆ 7ರ ಗೋಪಸಂದ್ರದ ಸಮೀಪ ಈ ಅಪಘಾತ ನಡೆದಿರೋದು. ಕಾರಿಗೆ ಡೀಸೆಲ್ ಹಾಕಿಸಿಕೊಂಡು ಯೂಟರ್ನ್ ತೆಗೆದುಕೊಳ್ಳುವಾಗ ಲಾರಿ ಬಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೇರಿ (65), ತಾರೀನಾ (45), ಏಂಜಲ್ (18), ಅನಿತಾ (18) ಮೃತಪಟ್ಟಿದ್ದಾರೆ.‌
ಕೃಷ್ಣಗಿರಿಯಿಂಸ ಬೆಂಗಳೂರಿಗೆ ಬರ್ತಿದ್ದ ವೇಳೆ ಈ ಘಟನೆ ನಡೆದಿದೆ.‌ಘಟನೆಯಲ್ಲಿ 7 ಮಂದಿ ಗಾಯಗೊಂಡಿದ್ದು, ಇವರನ್ನು ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶೂಲಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES