ಬೆಂಗಳೂರು ಕ್ಲಬ್ , ನಿಮ್ಗೆ ಇದು ಗೊತ್ತೇ ಇದೆ. ರೆಸಿಡೆನ್ಸಿ ರೋಡ್ ನಲ್ಲಿರೋ ಈ ಕ್ಲಬ್ ಗೆ 150 ವರ್ಷದ ಇತಿಹಾಸ ಇದೆ. 1868 ರಲ್ಲಿ ಸ್ಥಾಪಿತವಾದ ಕ್ಲಬ್ ಇದು. ಆ ಟೈಮಲ್ಲಿ ಬಸ್ ಕ್ಲಬ್ ಅಂತನೇ ಫೇಮಸ್ ಆಗಿತ್ತು. ಬ್ರಿಟಿಷ್ ಸೈನಿಕರಿಗೋಸ್ಕರ ಈ ಕ್ಲಬ್ ಅನ್ನು ಸ್ಥಾಪಿಸಿದ್ದು, ಆದ್ರೆ ನಂತರದಲ್ಲಿ ಬ್ರಿಟಿಷ್ ಅಧಿಕಾರಿಗಳು ಮತ್ತು ಅವರ ಕುಟುಂಬದವರಿಗು ಕೂಡ ಅವಕಾಶ ಕೊಡಲಾಗಿತ್ತು. ಆದರೆ ಆಗ ಭಾರತೀಯರಿಗೆ ಮಾತ್ರ ಅವಕಾಶವಿರ್ಲಿಲ್ಲ.
ಬ್ರಿಟನ್ ನ ಮಾಜಿ ಪ್ರಧಾನಿ ಲೆಫ್ಟಿನೆಂಟ್ ವಿನ್ಸ್ ಟನ್ ಚರ್ಚಿಲ್ 1896ರಲ್ಲಿ ಯುವ ಮಿಲಟರಿ ಅಧಿಕಾರಿಯಾಗಿ ಈ ಕ್ಲಬ್ ಗೆ ಬಂದಿದ್ರು. ಹೆಚ್ಚು ಕಮ್ಮಿ ಮೂರು ವರ್ಷ ಇಲ್ಲಿದ್ದು, ಈಗಿನ ಪಾಕಿಸ್ತಾನ ಇದೆಯಲ್ಲಾ? ಆ ಪ್ರಾಂತ್ಯಕ್ಕೆ ಯುದ್ಧಕ್ಕೆಂದು ಹೋಗುವಾಗ ಉಳಿಸಿ ಹೋಗಿದ್ದು ಅಷ್ಟಿಷ್ಟಲ್ಲ, 13 ರೂ…! ಆ ಬಾಕಿಯನ್ನು ಇನ್ನೂ ಯಾರೂ ಕೊಟ್ಟಿಲ್ಲ…! ಕ್ಲಬ್ ನ ಲೆಡ್ಜರ್ ನಲ್ಲಿ ಹಾಗೇ ಉಳಿದು ಬಿಟ್ಟಿದೆ. ಬಾಕಿ ಚುಕ್ತಾ ಮಾಡ್ದೆ ಹೋದವರ ಪಟ್ಟಿಯಲ್ಲಿ ಚರ್ಚಿಲ್ ಫೋಟೋವನ್ನು ಮತ್ತು ಅವರು ಎಷ್ಟು ಬಾಕಿ ಕೊಡೋಕಿದೆ ಅನ್ನೋದನ್ನು ನೇತಾಕಿದ್ದಾರೆ…! ಹೀಗೆ ಇಂಗ್ಲೆಂಡ್ ಪ್ರಧಾನಿ ಆಗಿದ್ದವರ ಸಾಲ ಬೆಂಗಳೂರು ಕ್ಲಬ್ ನಲ್ಲಿದೆ.