ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯ ರೈಗೆ ಕನ್ನಡ ‘ಮಾತ್ರ’ ಬರಲ್ಲ! ಇದೇನ್ ಗುರು, ಐಶ್ವರ್ಯ ರೈ ಮೂಲತಃ ನಮ್ ಮಂಗಳೂರಿನವ್ರು. ಇವರಿಗೆ ಕನ್ನಡ ಬರಲ್ವಾ? ಇವ್ರು ಕನ್ನಡದಲ್ಲಿ ಮಾತಾಡಿದ್ದನ್ನು ನಾವ್ ನೋಡಿದ್ದೀವಿ, ಕೇಳಿದ್ದೀವಿ. ನೀವೇನ್ ಇಲ್ಲಿ ಕನ್ನಡ ಮಾತ್ರ ಬರಲ್ಲ ಅಂತಿದ್ದೀರಿ ಅಂತ ನೀವು ನಮ್ಗೆ ಕೇಳ್ತಿದ್ದೀರಿ?
ಹ್ಞೂಂ, ನಾವ್ ಹೇಳ್ತಿರೋದು ಐಶ್ವರ್ಯ ರೈಗೆ ಕನ್ನಡ ಮಾತ್ರವಲ್ಲ ಬೇರೆ ಬೇರೆ 9 ಭಾಷೆಗಳು ಬರುತ್ತೆ ಅಂತ.
ನಿಮ್ಗೆ ಗೊತ್ತೇ ಇದೆ. ಐಶ್ವರ್ಯ ಕನ್ನಡದವ್ರು. ಮಂಗಳೂರು ಇವರೂರು ಆಗಿರೋದ್ರಿಂದ ಕನ್ನಡ ಬರುತ್ತೆ. ತುಳು ಇವರ ಮಾತೃಭಾಷೆ.
ಇನ್ನು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ್ರಿಂದ ಸಹಜವಾಗಿ ಚಿಕ್ಕ ವಯಸ್ಸಿಂದಲೂ ಇಂಗ್ಲಿಷ್ ಇವರಿಗೆ ಕರಗತ. ಮುಂಬೈನಲ್ಲಿ ವೃತ್ತಿ ಜೀವನ ಕಟ್ಟಿಕೊಂಡಿರೋದ್ರಿಂದ ಮರಾಠಿ , ಹಿಂದಿಯಲ್ಲಿ ಮಾತಾಡೋಕು ಐಶು ಸೈ.
ತಮಿಳು, ತೆಲುಗು ಭಾಷೆಗಳು ಕೂಡ ಐಶ್ವರ್ಯ ಗೆ ಬರುತ್ತೆ. ಬೆಂಗಾಲಿ ನಂಟು ಕೂಡ ಇವರಿಗುಂಟು. ಸ್ಪ್ಯಾನಿಷ್ ಸ್ನೇಹಿತರ ಸಹವಾಸದಿಂದ ಸ್ಪ್ಯಾನಿಷ್ ಕಲೀತಿದ್ದಾರೆ.
ಹೀಗೆ ಕನ್ನಡ, ತುಳು, ತಮಿಳು, ತೆಲುಗು, ಇಂಗ್ಲಿಷ್, ಹಿಂದಿ, ಬೆಂಗಾಲಿ , ಮರಾಠಿ ಮತ್ತು ಸ್ಪ್ಯಾನಿಷ್ ಭಾಷೆಗಳು ಐಶ್ವರ್ಯ ರೈಗೆ ಬರುತ್ತೆ. ಐಶ್ವರ್ಯಗೆ ಸೌಂದರ್ಯದ ಜೊತೆಗೆ ಭಾಷಾ ಪಾಂಡಿತ್ಯ ಕೂಡ ಇದೆ ಅಂತಾಯ್ತು.