Tuesday, April 1, 2025

ಸ್ಮಾರ್ಟ್​ ಮೀಟರ್​ ಖರೀದಿ ಟೆಂಡರ್​ನಲ್ಲಿ 15,568 ಕೋಟಿ ಮೊತ್ತದ ಹಗರಣ..!

ಬೆಂಗಳೂರು : ಕಳೆದ ಕೆಲದಿನಗಳಿಂದ ಪವರ್​ ಟಿವಿಯಲ್ಲಿ ಭಿತ್ತರಗೊಂಡ ಸ್ಮಾರ್ಟ್​ ಮೀಟರ್​ ಹಗರಣದ ಕುರಿತು ಶಾಸಕ ಅಶ್ವಥ್​ ನಾರಾಯಣ ಸುದ್ದಿಗೋಷ್ಟಿ ನಡೆಸಿ ಮಾಹಿತಿ ಹಂಚಿಕೊಂಡಿದ್ದು. ಸ್ಮಾರ್ಟ್ ಮೀಟರ್​ ಟೆಂಡರ್​ನಲ್ಲಿ ಸುಮಾರು 15,568 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಹೇಳಿದ್ದಾರೆ.

ಸ್ಮಾರ್ಟ್‌ಮೀಟರ್ ಗಳ ಖರೀದಿಯಲ್ಲಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಆಗಿದೆ, ರಾಜಶ್ರೀ ಕಂಪನಿಗೆ ಅನುಕೂಲ ಆಗುವಂತೆ ಟೆಂಡರ್ ಕರೆಯಲಾಗಿದೆ. ಕೆಟಿಪಿಪಿ ಕಾಯ್ದೆ ಪ್ರಕಾರ ಈ ಸ್ಮಾರ್ಟ್ ಮೀಟರ್​ ಟೆಂಡರ್ ಪಡೆದುಕೊಳ್ಳುವ ಸಂಸ್ಥೆ ಬಳಿ 6800 ಕೋಟಿ ಬಿಡ್ ಸಾಮರ್ಥ್ಯ ಮೊತ್ತ ಇರಬೇಕು. ಆದರೆ ಟೆಂಡರ್​ ಪಡೆದಿರುವ ರಾಜಶ್ರೀ ಕಂಪನು ಬಳಿ ಕೇವಲ 400 ಕೋಟಿ ಇದೆ. ಟೆಂಡರ್​ ಮೌಲ್ಯ 1920 ಕೋಟಿ ಇಡಬೇಕಿತ್ತು, ಆದ್ರೆ ಟೆಂಡರ್‌ನಲ್ಲಿ ಇಟ್ಟಿದ್ದು ಕೇವಲ 107 ಕೋಟಿ ಇಟ್ಟಿದ್ದಾರೆ.

ಇದನ್ನೂ ಓದಿ : ಡಿಕೆಶಿ ವಿರುದ್ದ ಆಕ್ರೋಶ, ನಡುರಸ್ತೆಯಲ್ಲಿ ಬಂಡೆಯನ್ನು ಪುಡಿಗೈದ ಮಂಡ್ಯ ಜನತೆ..!

ಅಷ್ಟೇ ಅಲ್ಲದೆ ಬ್ಲಾಕ್‌ಲಿಸ್ಟ್​ನಲ್ಲಿ ಇರುವ ಸಂಸ್ಥೆಗೆ ಟೆಂಡರ್ ಕೊಡುವಂತಿಲ್ಲ ಅಂತ ಕೆಟಿಟಿಪಿ ಕಾಯ್ದೆಯಲ್ಲಿದೆ ಆದರೆ ಉತ್ತರ ಪ್ರದೇಶದಲ್ಲಿ ಬ್ಲಾಕ್‌ಲಿಸ್ಟ್ ಆಗಿದ್ದ ಬಿಸಿಐಟಿಎಸ್ ಕಂಪೆನಿಗೆ ಸಾಪ್ಟ್‌ವೇರ್ ಟೆಂಡರ್ ಕೊಟ್ಟಿದ್ದಾರೆ ಎಂದು ಇಂಧನ ಇಲಾಖೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಮಾತನಾಡಿದ ಶಾಸಕ ಅಶ್ವಥ್​ ನಾರಯಣ “ಬೆಸ್ಕಾಂ ಸೇರಿ ಎಲ್ಲ ಎಸ್ಕಾಂಗಳ ಸ್ಮಾರ್ಟ್ ಮೀಟರ್ ಖರೀದಿ ಟೆಂಡರ್​ನಲ್ಲಿ 15,568 ಕೋಟಿ ಮೊತ್ತದ ಹಗರಣ ಆಗಿದೆ. ಇದು ರಾಜ್ಯದ ಬಹು ದೊಡ್ಡ ಹಗರಣ. KERC ಗೈಡ್​ಲೈನ್ಸ್​ ಪ್ರಕಾನ ಮೀಟರ್​ ಕಡ್ಡಾಯ ಮಾಡುವಂತಿಲ್ಲ. ಕೇಂದ್ರ ಸರ್ಕಾರದ ಪ್ರಕಾರ 1 ಲಕ್ಷ ಸ್ಮಾರ್ಟ್ ಮೀಟರ್ ಕಡ್ಡಾತ ಸಾಕು. ಆದರೆ ರಾಜ್ಯ ಸರ್ಕಾರ 10 ಲಕ್ಷ ಸ್ಮಾರ್ಟ್‌ಮೀಟರ್ ಕಡ್ಡಾಯ ಮಾಡಿದೆ. ಸ್ಮಾರ್ಟ್‌ ಮೀಟರ್​ಗಳನ್ನು ಮೊದಲು ವಿದ್ಯುತ್ ಫೀಡರ್‌ಗಳಲ್ಲಿ ಅಳವಡಿಕೆ ಮಾಡಬೇಕು. ನಂತರ ಹಳೆಯ ಗ್ರಾಹಕರ ಮನೆಗಳಿಗೆ ಅಳವಡಿಕೆ ಮಾಡಬೇಕು, ಇದರ ನಂತರ ಹೊಸ ಗ್ರಾಹಕರಿಗೆ ಅಳವಡಿಸಬೇಕು. ಈ ಹಂತಗಳನ್ನು ಅನುಸರಿಸದೇ ಏಕಾಏಕಿ ಹೊಸ ಗ್ರಾಹಕರಿಗೆ ಸ್ಮಾರ್ಟ್‌ಮೀಟರ್ ಕಡ್ಡಾಯ ಮಾಡ್ತಿದ್ದಾರೆ

RELATED ARTICLES

Related Articles

TRENDING ARTICLES