ಬೆಳಗಾವಿ : ಮಹರಾಷ್ಟ್ರ ಏಕೀಕರಣ ಸಮಿತಿಯ ಯುವ ಸಮಿತಿ ಅಧ್ಯಕ್ಷ ಶುಭಂ ಶಳಕೆಯನ್ನು ಬೆಳಗಾವಿಯ ಮಾಳ ಮಾರುತಿ ಪೊಲೀಸರು ಬಂಧಿಸಿದ್ದು. ನಾಡದ್ರೋಹಿ ಚಟುವಟಿಕೆಯಲ್ಲಿ ಭಾಗವಹಿಸಿದ್ದ ಈತನನ್ನು ಇದೀಗ ಪೊಲೀಸರು ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ.
ಪದೇ ಪದೇ ಬೆಳಗಾವಿ ವಿಷಯದಲ್ಲಿ ಕನ್ನಡಿಗರನ್ನು ಕೆಣಕುತ್ತಿರುವ ನಾಡದ್ರೋಹಿ ಎಂಇಎಸ್ ಮುಖಂಡ ಶುಭಂ ಶಳಕೆ ಜೈಲು ಪಾಲಾಗಿದ್ದಾನೆ. ಕಳೆದ ಅಧಿವೇಶನದ ಸಮಯದಲ್ಲಿ ಕಲ್ಲು ತೂರಾಟ ಪ್ರಕರಣದಲ್ಲೂ ಅರೆಸ್ಟ್ ಆಗಿದ್ದ ಈತನನ್ನು ಅಂದು ಡಿಸಿಪಿ ರೋಹನ್ ಜಗದೀಶ್ ಬಂಧಿಸಿ ಜೈಲಿಗ ಅಟ್ಟಿದ್ದರು.
ಇಷ್ಟಾದರೂ ಬುದ್ದಿ ಕಲಿಯದ ಈತ ಕಳೆದ ತಿಂಗಳು ಕರ್ನಾಟಕದ ಕಂಡೆಕ್ಟರ್ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಕನ್ನಡ ಹೋರಾಟಗಾರರನ್ನು ನಾಲಾಯಕ್ಗಳು ಎಂದು ಕರೆದಿದ್ದನು. ಜೊತೆಗೆ ಪಿಡಿಒ ಮೇಲೆ ಹಲ್ಲೆ ನಡೆಸಿದ್ದ ಆರೋಪಿಯನ್ನು ಸನ್ಮಾನಿಸಿ, ಕರ್ನಾಟಕ ಬಂದ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಿದ್ದನು.
ಇದನ್ನೂ ಓದಿ :ನಂದಿನಿ ಇಡ್ಲಿ, ದೋಸೆ ಹಿಟ್ಟಿಗೆ ಡಿಮ್ಯಾಂಡೋ ಡಿಮ್ಯಾಂಡ್..!
ಇಷ್ಟೇ ಅಲ್ಲದೆ ಪದೇ ಪದೇ ಬೆಳಗಾವಿ ನೆಲದಲ್ಲಿ ಇದ್ದುಕೊಂಡು ಗಡಿ, ಭಾಷಾ ವಿಚಾರದಲ್ಲಿ ಪ್ರಚೋದನಕಾರಿ ಹೇಳಿಕೆ ಕೊಡ್ತಿದ್ದ ಈತನನ್ನು ಇದೀಗ ಬೆಳಗಾವಿಯ ಮಾಳ ಮಾರುತಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದು. ಈತನ ಮೇಲೆ ಬೆಳಗಾವಿ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಕೇಸ್ಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.