ಬೆಂಗಳೂರು : ಅತ್ಯಾಚಾರಕ್ಕೆ ಒಳಗಾಗಿ ದೂರು ನೀಡಲು ಬಂದಿದ್ದ ಬಾಲಕಿಯ ಮೇಲೆ ಕಾನ್ಸ್ಟೇಬಲ್ವೋರ್ವ ಅತ್ಯಾಚಾರವೆಸೆಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಇದೀಗ ಪೊಲೀಸರು ಆರೋಪಿ ಪೇದೆ ಅರುಣ್ ಮತ್ತು ಸಂತ್ರಸ್ಥೆಯ ಸ್ನೇಹಿತ ವಿಕ್ಕಿ ಎಂಬಾತರನ್ನು ಬಂಧಿಸಿ ಕಂಬಿ ಹಿಂದೆ ಅಟ್ಟಿದ್ದಾರೆ.
17 ವರ್ಷದ ಸಂತ್ರಸ್ತೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನೆಲೆಸಿದ್ದಳು. ಈ ವೇಳೆ ನೆರೆಮನೆಯಲ್ಲಿ ವಾಸವಿದ್ದ ವಿಕ್ಕಿ ಎಂಬಾತನ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ವಿಕ್ಕಿ ಸಂತ್ರಸ್ಥೆಗೆ ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ ಅತ್ಯಾಚಾವೆಸಗಿ ಹಲ್ಲೆ ನಡೆಸಿದ್ದನು. ಈ ವಿಷಯವನ್ನು ಬಾಲಕಿ ತನ್ನ ತಾಯಿಯ ಬಳಿ ಹೇಳಿಕೊಂಡಿದ್ದಳು.
ಈ ಸಂಬಂಧ ಅಪ್ರಾಪ್ತ ಮತ್ತು ಆಕೆಯ ತಾಯಿ ಇಬ್ಬರು ದೂರು ನೀಡಲು ಎಂದು ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ಬಂದಿದ್ದರು. ಈ ವೇಳೆ ಠಾಣೆಯಲ್ಲಿದ್ದ ಕಾನ್ಸ್ಟೇಬಲ್ ಅರುಣ್ ಎಂಬಾತ ಬಾಲಕಿಯನ್ನು ಪರಿಚಯಿಸಿಕೊಂಡಿದ್ದ. ಬಾಲಕಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ನೀಡುವುದಾಗಿ ನಂಬಿಸಿ ಮತ್ತು ಕೆಲಸ ಕೊಡಿಸುವುದಾಗಿ ನಂಬಿಸಿದ್ದನು.
ಇದನ್ನೂ ಓದಿ :ಸಾಲಭಾದೆಗೆ ಬೇಸತ್ತು ಹೆಂಡತಿ ಮಗಳೊಂದಿಗೆ ಕಾಲುವೆಗೆ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಆಟೋ ಚಾಲಕ
ಕಳೆದ ಡಿಸೆಂಬರ್ನಲ್ಲಿ ಸಂತ್ರಸ್ಥೆಯನ್ನು ಓಯೋ ರೂಂಗೆ ಕರೆದೊಯ್ದಿದ್ದ ಅರುಣ್ ಮಧ್ಯದ ಬಾಟಲಿಯಲ್ಲಿ ಮತ್ತು ಬರುವ ಔಷದ ಬೆರೆಸಿ ಕುಡಿಸಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದನು. ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಖಾಸಗಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನು ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಮೈಕೋ ಲೇಔಟ್ ಪೊಲೀಸರು ಅರುಣ್ ಮತ್ತು ವಿಕ್ಕಿ ಇಬ್ಬರನ್ನು ಬಂಧಿಸಿ ಜೈಲಿಗೆ ಅಟ್ಟಿದ್ದು. ಇಬ್ಬರ ವಿರುದ್ದ ಪೊಕ್ಸೊ ಹಾಗೂ ಬಿಎನ್ಎಸ್ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣವನ್ನು ಕೃತ್ಯ ನಡೆದ ಸ್ಥಳ ಆಧರಿಸಿ ಬೊಮ್ಮನಹಳ್ಳಿ ಪೊಲೀಸರಿಗೆ ಪ್ರಕರಣವನ್ನ ವರ್ಗಾವಣೆ ಮಾಡಲಾಗಿದೆ.