ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಅದ್ಭುತ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ ಬೆನ್ನಲ್ಲೆ ಐಐಟಿ ಬಾಬಾ ಎಂದೆ ಖ್ಯಾತರಾಗಿರುವ ಏರೋಸ್ಪೇಸ್ ಎಂಜಿನಿಯರ್ ಅಭಯ್ ಸಿಂಗ್ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಟ್ರೋಲ್ ಆಗಿದ್ದಾರೆ.
ಯೂಟ್ಯೂಬರ್ ಒಬ್ಬರ ಸಂದರ್ಶನದಲ್ಲಿ ಮಾತನಾಡಿದ್ದ ಬಾಬಾ ಈ ಭಾರಿ ಪಾಕ್ ವಿರುದ್ದ ಭಾರತ ಗೆಲ್ಲುವುದಿಲ್ಲ. ಜೊತೆಗೆ ವಿರಾಟ್ ಕೂಡ ಹೆಚ್ಚು ರನ್ ಬಾರಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಆದರೆ ಭಾರತ ಪಾಕ್ ಮೇಲೆ ಗೆಲ್ಲುವ ಮೂಲಕ ಬಾಬನ ಭವಿಷ್ಯವನ್ನು ತಲೆಕೆಳಗೆ ಮಾಡಿದೆ. ಭಾರತ ಪಂದ್ಯದಲ್ಲಿ ಗೆಲ್ಲುತ್ತಿದ್ದಂತೆ ಬಾಬನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದು. ಇದರ ಬೆನ್ನಲ್ಲೆ ಐಐಟಿ ಬಾಬ ತಾವೂ ಹೇಳಿದ್ದ ಭವಿಷ್ಯದ ಬಗ್ಗೆ ಟ್ವಿಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
I want to publicly apologize and ask each one of you all to celebrate,it’s party time… Mujhe man hi man pata tha ki india jetega.😉#IITianBaba #INDvsPAK #ChampionsTrophy #ViratKohli #ViratKohli𓃵 #ChampionsTrophy2025 pic.twitter.com/QHozGNzfmF
— Abhay Singh (IIT BOMBAY) (@Abhay245456) February 23, 2025
ಇದನ್ನೂ ಓದಿ: ‘ಕಾರ್ಖಾನೆ ಹಠಾವೋ ಕೊಪ್ಪಳ ಬಚಾವೋ’ ಪ್ರತಿಭಟನೆ ಸಭೆಯಲ್ಲಿ ಕಣ್ಣೀರಾಕಿದ ಗವಿಶ್ರೀ !
ಈ ಕುರಿತು ತಮ್ಮ ಎಕ್ಷ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಬಾಬಾ ‘ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆ ಮತ್ತು ಈ ಗೆಲುವನ್ನು ಎಲ್ಲರೂ ಆಚರಿಸುವಂತೆ ಕೇಳಿಕೊಳ್ಳುತ್ತೇನೆ. ಜೊತೆಗೆ ಭಾರತ ಪಂದ್ಯದಲ್ಲಿ ಗೆಲ್ಲುತ್ತದೆ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದಾರೆ. ಈ ಪೋಸ್ಟ್ ಕೆಲವೆ ನಿಮಿಷಗಳಲ್ಲಿ ಸಾಕಷ್ಟು ವ್ಯೂವ್ಸ್ಗಳನ್ನು ಪಡೆದುಕೊಂಡಿದೆ.