Monday, February 24, 2025

ಕುಂಭಮೇಳಕ್ಕೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ: 6 ಮಂದಿ ಕನ್ನಡಿಗರ ದುರ್ಮರಣ

ಬೆಳಗಾವಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ತೆರಳುವ ವೇಳೆ ಅಪಘಾತವಾಗಿ ಕರ್ನಾಟಕ ಮೂಲದ 7 ಮಂದಿ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಹೌದು.. ಈ ಬಾರಿಯ ಕುಂಭಮೇಳ ಮುಗಿಯಲು ಇನ್ನೇನು ಕೇವಲ 2 ದಿನವಿದೆ. ಶಿವರಾತ್ರಿಯ ಪುಣ್ಯಸ್ನಾನದ ನಂತರ ಕುಂಭಮೇಳ ಮುಗಿಯಲಿದೆ. ಆದರೆ ಕುಂಭಮೇಳಕ್ಕೆ ಎಂದು ತೆರಳುತ್ತಿದ್ದ ಬೆಳಗಾವಿ ಮೂಲದ ಕನ್ನಡಿಗರು ಮಧ್ಯಪ್ರದೇಶದಲ್ಲಿ ಸಂಭವಿಸಿದೆ.

ಇದನ್ನೂ ಓದಿ :25 ಜನ ಪ್ರಯಾಣಿಸುತ್ತಿದ್ದ ಬಸ್​ ಪಲ್ಟಿ: ಕ್ಷಣಾರ್ಧದಲ್ಲಿ ತಪ್ಪಿತು ಭಾರೀ ದುರಂತ

ಮಧ್ಯ ಪ್ರದೇಶದ, ಜಬಲಪೂರ ಪೆಹರಾ ಟೋಲ್ ನಾಕಾ ಬಳಿ ಬೆಳಗಿನ ಜಾವ ಕ್ರೂಸರ್‌ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದ್ದು. ಈ ದುರಂತದಲ್ಲಿ ಗೋಕಾಕ್​ನ ಬಾಲಚಂದ್ರ ಗೌಡರ್,ಸುನೀಲ್ ಶೇಡಶಾಳೆ,
ಬಸವರಾಜ ಕುರ್ಣಿ, ಬಸವರಾಜ ದೊಡ್ಡಮನಿ ಸಾವು,ಈರಣ್ಣ ಶೇಬಿನಕಟ್ಟಿ,‌ ವಿರೂಪಾಕ್ಷ ಗುಮಟ್ಟಿ ಎಂಬುವವರು ಮೃತಪಟ್ಟಿದ್ದು.  ಮುಸ್ತಾಕ್, ಸದಾಶಿವ ಎಂಬ ಇಬ್ಬರಿಗ ಗಂಭೀರ ಗಾಯಗಳಾಗಿವೆ.

ಇವರೆಲ್ಲಾ ಕಳೆದ ಎರಡು ದಿನಗಳ ಹಿಂದೆ ಗೋಕಾಕ್‌ ನಗರದಿಂದ 10 ಮಂದಿ ಕ್ರೂಸರ್‌ನಲ್ಲಿ ಮಹಾ ಕುಂಭಮೇಳಕ್ಕೆ ಹೊರಟಿದ್ದರು. ಇಂದು ಮುಂಜಾನೆ ಮಧ್ಯಪ್ರದೇಶ ಸಾರಿಗೆ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

RELATED ARTICLES

Related Articles

TRENDING ARTICLES