ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ್ ನಡುವಣ ಹೈವೋಲ್ಟೇಜ್ ಕದನ ಶುರುವಾಗಿದೆ. ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 49.4 ಓವರ್ಗಳಲ್ಲಿ 241ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ 242 ರನ್ಗಳ ಗುರಿ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದಿದ್ದ ಮಾಜಿ ನಾಯಕ ಬಾಬರ್ ಅಜಾಮ್ ಮತ್ತು ಇಮಾಮ್-ಉಲ್-ಹಕ್ ಕೆಲ ಕಾಲ ಸ್ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದರು. ಆದರೆ 9ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಬಾಬರ್ ಅಜಾಮ್ 23ರನ್ ಗಳಿಸಿ ವಿಕೆಟ್ ಕೀಪರ್ಗೆ ವಿಕೆಟ್ ಒಪ್ಪಿಸಿದರು. ಬಾಬರ್ ನಿರ್ಗಮನದ ಬೆನ್ನಲ್ಲೆ ಇಮಾಮ್-ಉಲ್-ಹಕ್(10) ಗಳಿಸಿ ರನ್ ಔಟ್ ಆದರು.
ಇದನ್ನೂ ಓದಿ :ಪ್ರಿಯಕರನಿಂದ ಗಂಡನ ಕೊಲೆ: ಪ್ಲ್ಯಾನ್ ಮಾಡಿ ಗಂಡನಿಗೆ ಗುಂಡಿ ತೋಡಿದಳ ಐನಾತಿ ಹೆಂಡತಿ
ನಂತರ ಸ್ಕ್ರೀಸ್ಗೆ ಇಳಿದ ನಾಯಕ ರಿಜ್ವಾನ್ ಮತ್ತು ಸೌದ್ ಶಕೀಲ್ ಭಾರತದ ಬೌಲರ್ಗಳಿಗೆ ತಲೆನೋವಾಗಿ ಕಾಡಿದರು. ಆದರೆ 46 ರನ್ಗಳಿಸಿದ್ದು ನಾಯಕ ರಿಜ್ವಾನ್ ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರೆ. ಅದರ ಬೆನ್ನಲ್ಲೆ ಅರ್ಧ ಶತಕ ಪೂರ್ಣಗೊಳಿಸಿದ್ದ ಸೌದ್ ಶಕೀಲ್(61) ಕೂಡ ಪಾಂಡ್ಯ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
ಇವರ ನಂತರ ಸ್ಕ್ರೀಸ್ಗೆ ಬಂದ ಯಾವೊಬ್ಬ ಆಟಗಾರರು ಹೆಚ್ಚು ಕಾಲ ಬ್ಯಾಟ್ ಬೀಸದೆ ಪೆವಿಲಿಯನ್ ಪರೇಡ್ ನಡೆಸಿದರು. ಸಲ್ಮಾನ ಅಘಾ (19), ತಯ್ಯಬ್ ತಹೀರ್ (4), ಶಾಹೀನ್ ಆಫ್ರೀದಿ(0), ನಸೀಮ್ ಷಾ (14), ಹ್ಯಾರೀಸ್ ರಾಫ್ (8) ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಖುಷ್ದಿಲ್ ಶಾ ಕೊನೆಯಲ್ಲಿ ಅಬ್ಬರದ ಆಟವಾಡಿ ಪಾಕ್ ತಂಡದ ರನ್ ಹೆಚ್ಚಿಸುವಲ್ಲಿ ಸಫಲರಾದರು.
ಭಾರತದ ಪರ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ. ಹಾರ್ದಿಕ್ ಪಾಂಡ್ಯ 2, ಕುಲದೀಪ್ ಯಾದವ್, ಹರ್ಷಿತ್ ರಾಣಾ ಮತ್ತು ಅಕ್ಷರ್ ಪಟೇಲ್ ತಲಾ 1 ವಿಕೆಟ್ ಪಡೆದು ಮಿಂಚಿದರು.