Monday, February 24, 2025

ಜಿಮ್ಸ್ ಆಸ್ಪತ್ರೆ ವೈದ್ಯರ ಎಡವಟ್ಟು: ಬಾಣಂತಿ ಹೊಟ್ಟೆಯಲ್ಲೇ ಬಟ್ಟೆ ಉಂಡೆ, ಹತ್ತಿ ಬಿಟ್ಟು ಹೊಲಿಗೆ

ಕಲಬುರಗಿ: ಸದಾ ಒಂದಿಲ್ಲ‌ ಒಂದು ರೀತಿಯಲ್ಲಿ ಸುದ್ದಿಯಲ್ಲಿರುವ ಕಲಬುರಗಿಯ ಜಿಮ್ಸ್ ಆಸ್ಪತ್ರೆ ಇದೀಗ ಮತ್ತೆ ಸುದ್ದಿಯಲ್ಲಿದ್ದು, ಹೆರಿಗೆ ಬಳಿಕ ಮಹಿಳೆಯ ಹೊಟ್ಟೆಯಲ್ಲೆ ಬಟ್ಟೆ ಹಾಗು ಹತ್ತಿಯನ್ನು ಬಿಟ್ಟಿರುವ ವೈದ್ಯರು ಎಡವಟ್ಟು ಮಾಡಿಕೊಂಡಿದ್ದಾರೆ.

ಫೆಬ್ರವರಿ 5ರಂದು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಭಾಗ್ಯಶ್ರೀ ಹೆರಿಗೆಗೆ ಎಂದು ದಾಖಲಾಗಿದ್ದರು, ಸಿಜೇರಿಯನ್ ಮೂಲಕ ವೈದ್ಯರು ಭಾಗ್ಯಶ್ರೀಯ ಹೆರಿಗೆಯನ್ನು ಮಾಡಿಸಿದ್ದರು. ಆದರೆ ಹೆರಿಗೆ ಬಳಿಕ ಹೆರಿಗೆ ಸ್ಥಳದಲ್ಲಿಯೇ ಬಟ್ಟೆ ಹಾಗೂ ಕಾಟನ್‌ ಬಿಟ್ಟು ಮಹಿಳೆಯನ್ನು ಡಿಸ್ಚಾಜ್೯ ಮಾಡಿದ್ದಾರೆ. ಆದರೆ ಹೆರಿಗೆಯ‌ ಕೆಲ ದಿನಗಳ ಬಳಿಕ ಮಹಿಳೆಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಸ್ಥಳೀಯ ವೈದ್ಯರನ್ನು ಸಂಪರ್ಕಿಸಿ ಸ್ಕ್ಯಾನಿಂಗ್ ಮಾಡಿಸಿದ್ದಾಗ, ಮಹಿಳೆಯ ಹೆರಿಗೆ ಸ್ಥಳದಲ್ಲಿ ಬಟ್ಟೆ ಹಾಗು ಹತ್ತಿ ಇರುವದು ಬೆಳಕಿಗೆ ಬಂದಿದೆ‌.

ಇದನ್ನೂ ಓದಿ : ಪ್ರಿಯಕರನಿಂದ ಗಂಡನ ಕೊಲೆ: ಪ್ಲಾನ್​ ಮಾಡಿ ಗಂಡನಿಗೆ ಗುಂಡಿ ತೋಡಿದಳ ಐನಾತಿ ಹೆಂಡತಿ

ಇನ್ನೂ ಕಲಬುರಗಿ ಜಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಕಕ್ಷ್ಯದ ಬಗ್ಗೆ ಕುಟುಂಬಸ್ಥರಿಗೆ ಅರಿವಾಗುತ್ತಿದ್ದಂತೆ, ಅಫಜಲಪುರ ತಾಲೂಕಿನ ಕರಜಗಿ ಗ್ರಾಮದ ಪ್ರಾಥಮಿಕ ಕೇಂದ್ರಕ್ಕೆ ಹೋಗಿ ಭಾಗ್ಯಶ್ರೀಯ ಹೆರಿಗೆ ಸ್ಥಳದಲ್ಲಿದ್ದ ಬಟ್ಟೆ ಹಾಗು ಹತ್ತಿಯನ್ನು ವೈದ್ಯರು ಹೊರ ತೆಗೆದಿದ್ದಾರೆ. ಆದರೆ ಭಾಗ್ಯಶ್ರೀ ಕುಟುಂಬಸ್ಥರ ಈ ಆರೋಪವನ್ನ ಜಿಮ್ಸ್ ಆಸ್ಪತ್ರೆಯವರು ಅಲೆಗೆಳೆದಿದ್ದು, ಹೆರಿಗೆ ನಂತರ ರಕ್ತ ಸ್ರಾವ ಆಗುವ ಸಮಯದಲ್ಲಿ ರಕ್ತಸ್ರಾವ ನಿಲ್ಲುವದಕ್ಕೆ ಪ್ಯಾಡ್ ಅದನ್ನು ವೈದ್ಯರು ಇಟ್ಟಿರುತ್ತಾರೆ. ಹೆರಿಗೆಯ ಬಳಿಕ ಮಹಿಳೆ ಸ್ವಗ್ರಾಮಕ್ಕೆ ಹೋಗಿ ತೆಗೆಸಿಕೊಳ್ಳುವದ್ದಾಗಿ ಹೇಳಿದ್ದಾಳೆ‌. ಇದರಲ್ಲಿ ವೈದ್ಯರ ನಿರ್ಲಕ್ಷ್ಯವಿಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ.

ಸದ್ಯ ವೈದ್ಯರ ನಿರ್ಲಕ್ಷ್ಯವೋ ಅಥವಾ ಕುಟುಂಬಸ್ಥರ ನಿರ್ಲಕ್ಷ್ಯವೋ ಇಬ್ಬರ‌ ಮಧ್ಯ ಮಹಿಳೆ ಸಂಕಷ್ಟಕ್ಕೆ ಒಳಗಾಗಿರುವದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಕಲಬುರಗಿ ಜಿಮ್ಸ್ ಆಸ್ಪತ್ರೆಯ ವೈದ್ಯಧಿಕಾರಿಗಳು ಎಚ್ಚೆತ್ತು ಇಂತಹ ಪ್ರಕರಣ ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕಾಗಿದೆ.

RELATED ARTICLES

Related Articles

TRENDING ARTICLES