ಚಾಮರಾಜನಗರ : ಗಡಿ ನಾಡು ಚಾಮರಾಜನಗರದಲ್ಲೊಂದು ಲವ್ ಸೆಕ್ಸ್ ದೋಖಾ ಪ್ರಕರಣ ವರದಿಯಾಗಿದ್ದು. ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬಿದ್ದ ಯುವಕನೋರ್ವ ಯುವತಿಯ ಬಾಳನ್ನೆ ಹಾಳು ಮಾಡಿದ್ದಾನೆ. ಮದುವೆಯಾಗಿದ್ದ ಪ್ರಿಯತಮೆಯನ್ನು ಗಂಡನಿಂದ ದೂರ ಮಾಡಿ ಆಕೆಗೆ ಮೂರು ಭಾರಿ ಗರ್ಭಪಾತ ಮಾಡಿಸಿದ್ದು. ಇದೀಗ ಮದುವೆಯಾಗದೆ ಪರಾರಿಯಾಗಿದ್ದಾನೆ.
ಹೌದು..ಈ ಲವ್ ಸೆಕ್ಸ್ ಧೋಖಾ ಕಥೆ ಚಾಮರಾಜನಗರದ ಹನೂರಿನಲ್ಲಿ ನಡೆದಿದೆ. 2021ರಲ್ಲಿ ನರ್ಸಿಂಗ್ ಕೋರ್ಸ್ ಮಾಡುವ ವೇಳೆ ಕ್ಲಿಂಟನ್ ಮತ್ತು ಜಾನ್ ಪ್ರೆಸಿಲ್ಲಾ ಇಬ್ಬರಿಗೂ ಪರಿಚಯ ಬೆಳೆದಿತ್ತು. ಬಹಳಷ್ಟು ಕಾಲ ಇಬ್ಬರು ಜೊತೆಯಾಗಿ ಸುತ್ತಾಡಿದ್ದರು. ಇವರಿಬ್ಬರ ಪ್ರೀತಿ ಪ್ರೇಮ ಪ್ರಯಣದ ವಿಚಾರ ಇಬ್ಬರ ಮನೆಯವರಿಗೂ ಗೊತ್ತಾಗಿತ್ತು. ಈ ವಿಚಾರ ತಿಳಿದ ಪ್ರೇಯಸಿ ಜಾನ್ ಪ್ರೆಸಿಲ್ಲಾಳ ಕುಟುಂಬಸ್ಥರು. ಈ ವಿಷಯವನ್ನು ಕ್ಲಿಂಟನ್ನ ಮನೆಯವರಿಗೆ ತಿಳಿಸಿದ್ದರು.
ಆದರೆ ಕ್ಲಿಂಟನ್ಗೆ ಸಹೋದರಿ ಇದ್ದ ಕಾರಣ ಆಕೆಯ ವಿವಾಹ ಆಗುವವರೆಗೂ ಮದುವೆ ಆಗುವುದು ಬೇಡ ಎಂದು ಕ್ಲಿಂಟನ್ ನಿರಾಕರಿಸಿದ್ದ. ಇದರಿಂದ ಯುವತಿಯ ಕುಟುಂಬಸ್ಥರು 2022ರಲ್ಲಿ ತಮಿಳುನಾಡು ಮೂಲದ ಸ್ಟೀಫನ್ರಾಜ್ ಜೊತೆ ಪ್ರೆಸಿಲ್ಲಾಳ ವಿವಾಹ ನಡೆಸಿದ್ದರು. ಆದರೆ ವಿವಾಹದ ಬಳಿಕ ಪ್ರಿಯಕರ ಕ್ಲಿಂಟನ್ ಪ್ರೆಸಿಲ್ಲಾಳ ಜೊತೆಗಿದ್ದ ಖಾಸಗಿ ಪೋಟೊಗಳನ್ನು ಪ್ರೆಸಿಲ್ಲಾಳ ಗಂಡನಿಗೆ ಕಳುಹಿಸಿದ್ದ. ಪತ್ನಿಯ ಲವ್ವಿಡವ್ವಿ ವಿಷಯ ತಿಳಿದ ಪತಿ ಹೆಂಡತಿಯನ್ನು ಮನೆಯಿಂದ ಹೊರಗೆ ಹಾಕಿದ್ದ.
ಇದನ್ನೂ ಓದಿ :ಬಡವ ರಾಸ್ಕಲ್ ಮದುವೆ ಶ್ರೀಮಂತವಾಗಿ ನಡೆಯುತ್ತಿದೆ: ಅರುಣ್ ಸಾಗರ್
ಈ ವೇಳೆ ಪ್ರಿಯಕರ ಕ್ಲಿಂಟನ್ ಪತಿಗೆ ವಿಚ್ಚೇದನ ನೀಡಿ ಬಾ ನಾಣು ಮದುವೆಯಾಗುತ್ತೇನೆ ಎಂದು ಹೇಳಿದ್ದನು. ಮದುವೆಯಾಗದೆ ಪ್ರೆಸಿಲ್ಲಾಳ ಜೊತೆ ಕಳೆದ 10 ತಿಂಗಳಿಂದ ಕ್ಲಿಂಟನ್ ಸಂಸಾರ ನಡೆಸಿದ್ದನು. ಪ್ರೆಸಿಲ್ಲಾಳ ಜೊತೆ ಲೈಂಗಿಕ ಸಂಪರ್ಕ ಬೆಳೆಸಿ ಆಕೆಯನ್ನು ಮೂರು ಬಾರಿ ಗರ್ಭವತಿಯಾಗಿಸಿ ಅಬಾಷನ್ ಮಾಡಿಸಿದ್ದನು.
ಇದೆ ಫ್ರೆಬ್ರವರಿ 12 ರಂದು ಕೊಳ್ಳೇಗಾಲದಲ್ಲಿ ಕ್ಲಿಂಟನ್ ಹಾಗೂ ಪ್ರೆಸಿಲ್ಲಾಗೆ ರಿಜಿಸ್ಟರ್ ಮ್ಯಾರೇಜ್ ಫಿಕ್ಸ್ ಆಗಿತ್ತು.
ಆದರೆ ರಿಜಿಸ್ಟರ್ ಮ್ಯಾರೇಜ್ ಗೆ ಬಾರದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಕ್ಲಿಂಟನ್ ಎಸ್ಕೇಪ್ ಆಗಿದ್ದಾನೆ.
ಪರಾರಿಯಾದ ಕ್ಲಿಂಟನ್ನ ಹುಡುಕಿಕೊಡಿ ಎಂದು ನೊಂದ ಪ್ರಿಯತಮೆಯ ಕಣ್ಣೀರಾಕಿದ್ದಾಳೆ. ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.