ಗದಗ : ಸೌಜನ್ಯ ಹೋರಾಟ ಸಮಿತಿ ಮತ್ತು ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಗಿರೀಶ ಮಟ್ಟಣನವರ್ ಮೇಲೆ ರೈತ ಮುಖಂಡರು ಮತ್ತು ಮಹಿಳಾ ಗುಂಪಿನ ಸದಸ್ಯರು ಮುತ್ತಿಗೆ ಹಾಕಲು ಯತ್ನಿಸಿದ್ದು. ಧರ್ಮಸ್ಥಳ ಸಂಘದಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಿದ್ದಕ್ಕಾಗಿ ಈತನ ಮೇಲೆ ಮುತ್ತಿಗೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ರಾಜ್ಯದಲ್ಲಿ ಮೈಕ್ರೋಫೈನಾನ್ಸ್ನಿಂದ ನಡೆಯುತ್ತಿರುವ ಕಿರುಕುಳವನ್ನು ತಪ್ಪಿಸಲು ರಾಜ್ಯ ಸರ್ಕಾರ ಸುಗ್ರವಾಜ್ಞೆ ಹೊರಡಿಸಿತ್ತು. ಇದರ ಕುರಿತು ಜಾಗೃತಿ ಮೂಡಿಸಲು ಎಂದು ಗಿರೀಶ್ ಮಟ್ಟಣ್ಣವರ್ ಗದಗ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಲು ಬಂದಿದ್ದರು. ಈ ಸುದ್ದಿಗೋಷ್ಟಿ ವೇಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ವಿರುದ್ದ ಹೇಳಿಕೆ ನೀಡಿದ್ದು. ಜೊತೆಗೆ ಧರ್ಮಸ್ಥಳ ಸಂಘದಲ್ಲಿ ಹೆಚ್ಚಿನ ಬಡ್ಡಿ ವಸೂಲಿ ನಡೆಸಲಾಗುತ್ತಿದೆ, ಇದರಿಂದ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ :ಮಹಿಳೆಯರು ತ್ರಿಷೂಲ, ಕಾರದಪುಡಿ ಇಟ್ಟುಕೊಂಡು ಓಡಾಡಿ: ಪ್ರಮೋದ್ ಮುತಾಲಿಕ್
ಈ ವೇಳೆ ನೂರಾರು ಮಹಿಳೆಯರು ಪತ್ರಿಕಾಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಮಹಿಳಾ ಗುಂಪಿನ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಗಿರೀಶ್ ಕಾರನ್ನು ಸುತ್ತುವರಿದ ಮಹಿಳೆಯರು. ಸುಮಾರು 2 ಗಂಟೆಗಳ ಕಾಲ ಮುತ್ತಿಗೆ ಹಾಕಿದ್ದಾರೆ, ನಂತರ ಪೊಲೀಸರು ಫ್ರತಿಭಟನಾಕಾರರು ಸ್ಥಳದಿಂದ ತೆರಳುತ್ತಿದ್ದಂತೆ ಗಿರೀಶ್ ಮತ್ತು ಇತರರನ್ನೂ ಸ್ಥಳದಿಂದ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.