ಬೆಳಗಾವಿ : ವ್ಯಾಲೆಂಟೈನ್ಸ್ ಡೇ ದಿನವೇ ಶ್ರೀರಾಮ ಸೇನೆ ಲವ್ ಜಿಹಾದ್ ಪುಸ್ತಕವನ್ನು ಲೋಕಾರ್ಪಣೆ ಮಾಡಿದ್ದು. ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಮಾಡಿದ ನಂತರ ಮಾತನಾಡಿದ ಪ್ರಮೋದ್ ಮುತಾಲಿಕ್ ಯುವತಿಯರು ಕಾರದ ಪುಡಿ, ತ್ರಿಷೂಲ ಇಟ್ಟುಕೊಂಡು ಓಡಾಡಿ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ ‘ಲವ್ಜಿಹಾದ ವಿರುದ್ಧ ಶ್ರೀರಾಮ ಸೇನೆ ಹೋರಾಟ ಮಾಡ್ತಿದೆ. ಈ ಲವ್ಜಿಹಾದ್ ಹಿಂದೂ ಯುವತಿಯರನ್ನು ತರಕಾರಿ ಕೊಚ್ಚಿದಂತೆ ಕೊಚ್ಚಿ ಕೊಲೆ ಮಾಡ್ತಿದ್ದಾರೆ. ಇದಿರಂದ ಮಹಿಳೆಯರ ಮೇಲೆ ದಿನೇ ದಿನೇ ದೌರ್ಜನ್ಯ ಹೆಚ್ಚಾಗುತ್ತಿದೆ. ಮಹಿಳೆಯರು ಸುರಕ್ಷತೆ ಬಗ್ಗೆ ಸರ್ಕಾರಗಳು ನಿರ್ಲಕ್ಷ್ಯ ಮಾಡ್ತಿದೆ. ಈ ಕುರಿತಾ ಗಂಭೀರ ಕಾನೂನುಗಳು ಇಲ್ಲ. ಇಂತಹ ಪ್ರಕರಣಗಳಿಗ ತ್ವರಿತವಾಗಿ ಶಿಕ್ಷೆಯಾಗಬೇಕಿದೆ.
ಲವ್ ಜಿಹಾದ್ ಬಗ್ಗೆ ಕೇಳಿದ್ರೆ ಸಿಟ್ಟು, ನೋವು, ಕಣ್ಣೀರು ಬರುತ್ತದೆ. ಲವ್ಜಿಹಾದ್ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಶ್ರೀರಾಮ ಸೇನೆಯಿಂದ ಲವ್ ಜಿಹಾದ್ ತಡೆಯಲು ಸಹಾಯವಾಣಿ ಮಾಡಿದ್ದೇವೆ
ಸಹಾಯವಾಣಿಗೆ ಧಮ್ಕಿ, ಮೆಚ್ಚುಗೆ, ಲವ್ ಜಿಹಾದ್ ಆಗಿರೋ ಪ್ರಕರಣ ಬೆಳಕಿಗೆ ಬಂದಿವೆ. ಇದರಲ್ಲಿ ಶೇಕಡಾ 40 ರಷ್ಟು ಪ್ರಕರಣ ಪತ್ತೆ ಮಾಡಿದ್ದೇವೆ. ಕರ್ನಾಟಕದಲ್ಲಿ ಮೂರು ಪೊಲೀಸ್ ಆಫೀಸರ್ ಮಗಳೇ ಲವ್ಜಿಹಾದ್ಗೆ ತುತ್ತಾಗಿದ್ದಾರೆ. ಆ ಪೊಲೀಸ್ ಆಫೀಸರ್ ಅವರೇ ಶ್ರೀರಾಮ ಸೇನೆ ಬಳಿ ನೆರವು ಬಯಸಿ ಬಂದರು.
ಲವ್ಜಿಹಾದ್ ತಡೆಯಲು ಶ್ರೀರಾಮಸೇನೆ ನಿರಂತರವಾಗಿ ಕೆಲಸ ಮಾಡುತ್ತಿದೆ. ಮಸೀದಿ ಒಳಗೆ ಇದ್ದ ಹಿಂದೂ ಹುಡುಗಿಯರನ್ನ ರಕ್ಷಣೆ ಮಾಡಿದ್ದೇವೆ. ಕೇಸ್ ಹಾಕಿಕೊಂಡು ನಮ್ಮ ಕಾರ್ಯಕರ್ತರು ಕೆಲಸ ಮಾಡ್ತಿದ್ದಾರೆ.
ಕರ್ನಾಟಕದ 100 ಕಡೆಗೆ ತ್ರಿಶೂಲ ದೀಕ್ಷೆಯನ್ನ ಶ್ರೀರಾಮಸೇನೆ ಮಾಡಿದೆ. ಮಹಿಳೆಯರು ತ್ರಿಶೂಲ, ಕಾರದಪುಡಿಯನ್ನ ಇಟ್ಟುಕೊಂಡು ಓಡಾಡಿ ಎಂದು ಪ್ರಮೋದ ಮುತಾಲಿಕ ಕರೆನೀಡಿದರು.