Sunday, February 23, 2025

ಶೆಡ್ಡಿಗೆ ಬೆಂಕಿ: ಎರಡು ಆಕಳು ಮತ್ತು ಕರು ಬೆಂಕಿಗೆ ಆಹುತಿ !

ಗದಗ : ಶೆಡ್ಡಿಗೆ ಬೆಂಕಿ ತಗುಲಿ ಎರಡು ಆಕಳುಗಳು ಮತ್ತು ಕರು ಸಾವನ್ನಪ್ಪಿರುವ ಘಟನೆ ಗದಗದಲ್ಲಿ ನಡೆದಿದ್ದು. ನವೀನ್​ ನವಲೆ ಎಂಬ ರೈತನಿಗೆ ಸೇರಿದ ಶೆಡ್​ ಬೆಂಕಿಗೆ ಆಹುತಿಯಾಗಿದೆ ಎಂದು ತಿಳಿದು ಬಂದಿದೆ.

ಗದಗ ಜಿಲ್ಲೆ, ಶಿರಹಟ್ಟಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಘಟನೆ ನಡೆದಿದ್ದು. ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿ ಗಾಡಸ್ವರೂಪ ಪಡೆದಿದೆ. ಈ ವೇಳೆ ಶೆಡ್ಡಿನಲ್ಲಿದ್ದ ಎರಡು ಆಕಳುಗಳು ಮತ್ತು ಒಂದು ಕರು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಜೊತೆಗೆ ಎರಡು ಟ್ರ್ಯಾಕ್ಟರ್​ನಷ್ಟು ಹೊಟ್ಟು, 10 ಚೀಲ ಈರುಳ್ಳಿ ಕೂಡ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಮದುವೆ ಆರ್ಕೆಸ್ಟ್ರಾದಲ್ಲಿ ಕುಣಿಯುತ್ತಿದ್ದ ಯುವತಿಯನ್ನು ಮದುವೆಯಾದ ಯುವಕ: ವಿಡಿಯೋ ವೈರಲ್​

ಬೆಂಕಿ ಅವಘಡದಲ್ಲಿ ರೈತ​ ನವೀನ್​​ ನವಲೆಗೆ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾನಿಯಾಗಿದ್ದು. ಹಸುಗಳನ್ನು ಕಳೆದುಕೊಂಡಿರುವ ಕುಟುಂಬ ಕಂಗಾಲಾಗಿದೆ. ಶಿರಹಟ್ಟಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES