ಬೆಂಗಳೂರು : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಸಂಸದ ಡಿ,ಕೆ ಸುರೇಶ್ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು. ದಕ್ಷಿಣದಲ್ಲಿ ಬಿಜೆಪಿ ಅಧಿಕಾರದಲಿಲ್ಲ. ಅದಕ್ಕೆ ಬಿಜೆಪಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನೀಡಿದ್ದ ಹೇಳಿಕೆ ವಿಚಾರದ ಕುರಿತು ಮಾತನಾಡಿದ ಡಿ,ಕೆ ಸುರೇಶ್ ‘ ಕೇಂದ್ರ ಸರ್ಕಾರ ರಾಜ್ಯದ ಪರಿಸ್ಥಿತಿಯನ್ನು ಹಾಳು ಮಾಡುವ ಕೆಟ್ಟ ಸಂಸ್ಕೃತಿಯನ್ನು ಹೊಂದಿದೆ. ಕೇಂದ್ರ ನಮ್ಮ ತೆರಿಗೆ ಹಣವನ್ನು ಬೇರೆಡೆ ಹಂಚಿ ನಮಗೆ ಅನ್ಯಾಯ ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಬಿಜೆಪಯೇತರ ರಾಜ್ಯ ಅಧಿಕಾರದಲಿಲ್ಲ. ಅದಕ್ಕೆ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ :KSRTC ಬಸ್ ಮತ್ತ ಬೈಕ್ ನಡುವೆ ಅಪಘಾತ: ಓರ್ವ ಸಾ*ವು
ಮೆಟ್ರೋ ನಿರ್ವಹಣೆಯನ್ನು ಕೇಂದ್ರ ಸರ್ಕಾರ ನಡೆಸುತ್ತದೆ !
ಮೆಟ್ರೋ ಟಿಕೆಟ್ ದರ ಹೆಚ್ಚಳದ ಕುರಿತು ಮಾತನಾಡಿದ ಸುರೇಶ್ ‘ಬೆಂಗಳೂರಿಗೆ ಕೆಟ್ಟ ಹೆಸರು ತರುವ ಹುನ್ನಾರವೂ ಇದೆ. ಮೆಟ್ರೋ ನಿರ್ವಹಣೆ ಕೇಂದ್ರದ ಕೈನಲ್ಲಿದೆ. ಇದರಲ್ಲಿ ರಾಜ್ಯ ಸರ್ಕಾರದ ಪಾತ್ರ ಏನು ಇಲ್ಲ.
ರಾಜ್ಯ ಸರ್ಕಾರ ಏನಾದರೂ ಇದ್ದರೆ ಕೇಂದ್ರಕ್ಕೆ ಪತ್ರ ಬರೆಯಬಹುದು. ಮೆಟ್ರೋ ಬೋರ್ಡ್ ಶಿಫಾರಸ್ಸಿಗೆ ಕೇಂದ್ರ ಒಪ್ಪಿಗೆ ಕೊಟ್ಟಿದೆ.
ಈ ಕುರಿತು ಸಂಸದರು ನೀಡಿದ ಹೇಳಿಕೆಯನ್ನು ನಾನು ನೋಡುತ್ತಿದ್ದೇನೆ. ಮೋದಿ ಮುಂದೆ ಕೇಂದ್ರ ರೈಲ್ವೆ ಸಚಿವರು ಬೇಡಿಕೆ ಇಡಲಿ. ಮೆಟ್ರೋಗೆ ನೀಡುತ್ತಿರುವ ಕೇಂದ್ರದ ಸಹಕಾರವನ್ನು ಹೆಚ್ಚಿಸಲಿ. ನಮ್ಮ ತೆರಿಗೆ ಪಾಲಿನ ಹಣವನ್ನ ಕೊಡಿಸಲಿ. ಮೆಟ್ರೋ ಸ್ಟೇಷನ್ ಮುಂದೆ ಬಾವುಟ ಹಿಡಿದು ಡ್ರಾಮಾ ಮಾಡೊದನ್ನ ಬಿಡಿ ಎಂದು
ಬಿಜೆಪಿಗರ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ ನಡೆಸಿದರು.