Wednesday, February 12, 2025

ಪತ್ನಿಯೊಂದಿಗೆ ಕುಂಭಮೇಳಕ್ಕೆ ಭೇಟಿ ನೀಡಿದ ಅನಿಲ್​ ಕುಂಬ್ಳೆ

ಪ್ರಯಾಗ್​ರಾಜ್​ : ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಬುಧವಾರ ತಮ್ಮ ಪತ್ನಿ ಚೇತನಾ ಅವರೊಂದಿಗೆ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಈ ಕುರಿತಾದ ಪೋಟೊಗಳನ್ನು ಅನಿಲ್​ ಕುಂಬ್ಳೆ ತಮ್ಮ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ಮಂಗಳವಾರ ಪ್ರಯಾಗ್‌ರಾಜ್‌ಗೆ ಆಗಮಿಸಿದ ಕುಂಬ್ಳೆ, ಯಾವುದೇ ವಿಐಪಿ ಶಿಷ್ಟಾಚಾರಗಳನ್ನು ಪಾಲಿಸದ ಮಾಘ ಪೂರ್ಣಿಮೆಯಂದು ಪವಿತ್ರ ಸ್ನಾನದಲ್ಲಿ ಭಾಗವಹಿಸಲು ಆಯ್ಕೆ ಮಾಡಿಕೊಂಡರು. ಅವರು ನಿಯಮಿತ ಯಾತ್ರಿಕರಾಗಿ ಭಕ್ತರೊಂದಿಗೆ ಸೇರಿಕೊಂಡು. ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಮೆಟ್ರೋ ಟಿಕೆಟ್​ ದರ ಹೆಚ್ಚಿಸಿ, ಜನರ ಬೆನ್ನಿಗೆ ಬರೆ ಎಳೆದಿದ್ದಾರೆ: ತೇಜಸ್ವಿ ಸೂರ್ಯ

ಕುಂಭಮೇಳದಲ್ಲಿ ಹೇಗಿದೆ ಸಿದ್ದತೆ !

ಕುಂಭಮೇಳದಲ್ಲಿ ಕಾಲ್ತುಳಿತದ ನಂತರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಿದ್ದು. ಈ ಕುರಿತು ಕುಂಭಮೇಳದ ಡಿಐಜಿ ಮಾಹಿತಿ ನೀಡಿದ್ದಾರೆ “ಇಂದು ಮಾಘಿ ಪೂರ್ಣಿಮೆ ಮತ್ತು ಒಂದು ಕೋಟಿಗೂ ಹೆಚ್ಚು ಜನರು ಸ್ನಾನ ಮಾಡಲಿದ್ದಾರೆ. ನಮ್ಮ ವ್ಯವಸ್ಥೆಗಳು ಸಾಕಷ್ಟು ಉತ್ತಮವಾಗಿವೆ ಮತ್ತು ಎಲ್ಲಾ ಸ್ಥಳಗಳಲ್ಲಿ ಪೊಲೀಸ್ ನಿಯೋಜನೆ ಇದೆ. ಜನಸಂದಣಿ ಆರಾಮದಾಯಕವಾಗಿ ಚಲಿಸುತ್ತಿದೆ. ನಮ್ಮ SOP ಗಳನ್ನು ಅನುಸರಿಸಲಾಗುತ್ತಿದೆ’ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES