Wednesday, February 12, 2025

ಪತ್ನಿಯ ಅನುಮತಿ ಇಲ್ಲದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪರಾಧವಲ್ಲ: ಹೈಕೋರ್ಟ್​

ರಾಂಚಿ : ಪತಿ ಹಾಗೂ ಪತ್ನಿ ನಡುವಿನ ಲೈಂಗಿಕ ಕ್ರಿಯೆ ಕುರಿತು ದೇಶದ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ಈ ಕುರಿತು ಛತ್ತೀಸಗಡ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು. ಪತ್ನಿಯ ಅನುಮತಿ ಇಲ್ಲದೆ ಅಥವಾ ಆಕೆಗೆ ಗೊತ್ತಿಲ್ಲದೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದರೆ ಪತಿಯನ್ನು ಅಪರಾಧಿ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಏನಿದು ಪ್ರಕರಣ !

2017ರಲ್ಲಿ ಪತಿಯೋರ್ವ ತನ್ನ ಪತ್ನಿಯ ಅನುಮತಿ ಇಲ್ಲದೆ ಬಲವಂತವಾಗಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದ. ಆದರೆ ಈ ದೈಹಿಕ ಸಂಪರ್ಕದ ಬಳಿಕ ಪತ್ನಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ಹೀಗಾಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪತ್ನಿ ಮೃತಪಟ್ಟಿದ್ದರು.

ಪತ್ನಿ ಚಿಕಿತ್ಸೆ ಪಡೆಯುವ ವೇಳೆ ಪೊಲೀಸರಿಗೆ ಪತಿಯ ಅಸಹಜ ಲೈಂಕಿಕ ಕ್ರಿಯೆಯ ಕುರಿತು ದೂರು ನೀಡಿದ್ದಳು. ಈ ಕುರಿತು ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಪತ್ನಿ ಸಾವಿಗೆ ಪತಿಯ ಅಸಹಜ ಲೈಂಗಿಕ ಕ್ರಿಯೆ ಕಾರಣ ಅನ್ನೋದು ಪರೀಕ್ಷೆಯಲ್ಲಿ  ದೃಡಪಟ್ಟಿತ್ತು.

ಇದನ್ನೂ ಓದಿ :ಪ್ರೀತಿ ಮಾಡುತ್ತಿದ್ದ ಮಗಳನ್ನು ಕೊ*ಲೆ ಮಾಡಿ, ಅಪಘಾತದ ನಾಟಕ ಆಡಿದನ ಖತರ್ನಾಕ್​ ತಂದೆ !

ಹೀಗಾಗಿ ಜಿಲ್ಲಾ ನ್ಯಾಯಾಲಯ ಪತಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಈ ಪ್ರಕರಣ ಜಿಲ್ಲಾ ನ್ಯಾಯಾಲಯದಿಂದ ಹೈಕೋರ್ಟ್ ಮೆಟ್ಟೇಲಿರಿತ್ತು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್ ಈ ಕುರಿತು ಮಹತ್ವದ ಆದೇಶ ನೀಡಿದೆ.

ಪತ್ನಿಯ ವಯಸ್ಸು 15 ವರ್ಷಕ್ಕಿಂತ ಮೇಲಿದ್ದರೆ, ಪತಿಯ ಲೈಂಗಿಕ ಬಯಕೆ ಹಾಗೂ ಕ್ರಿಯೆ ಕಾನೂನು ಬದ್ಧವಾಗಿದೆ. ಇಲ್ಲಿ ಅಸಹಜ ಲೈಂಗಿಕ ಕ್ರಿಯೆ ಕುರಿತು ಆರೋಪಿಸಲಾಗಿದೆ. ಆದರೆ 15 ವರ್ಷಕ್ಕಿಂತ ಮೇಲ್ಪಟ್ಟ ಪತ್ನಿ ಜೊತೆ ಪತಿ ಲೈಂಗಿಕ ಕ್ರಿಯೆ ನಡೆಸುವುದು, ಅಥವಾ ಆಕೆಯ ಅನುಮತಿ ಇಲ್ಲದೆ ಅಸಹಜ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದನ್ನು ಬಲಾತ್ಕಾರ ಪ್ರಕರಣ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ಎಲ್ಲಾ ಆರೋಪಗಳಿಂದ ಖುಲಾಸೆ ಮಾಡಿದ ಕೋರ್ಟ್ ಆರೋಪಿಯನ್ನು ದೋಷ ಮುಕ್ತಗೊಳಿಸಿದೆ.

RELATED ARTICLES

Related Articles

TRENDING ARTICLES