ಆನೇಕಲ್ : ತಂದೆ ಮಗಳಿಬ್ಬರು ಟಿವಿಎಸ್ ಬೈಕ್ನಲ್ಲಿ ಬರುವ ವೇಳೆ ಬೈಕ್ ಸಮೇತ ಕರೆಗೆ ಬಿದ್ದು ಮಗಳು ಸಾವನ್ನಪ್ಪಿದ್ದು. ತಂದೆ ಈಜಿ ದಡ ಸೇರಿರುವ ಘಟನೆ ಅನೇಕಲ್ನಲ್ಲಿ ನಡೆದಿದ್ದು. ಮೃತ ಯುವತಿಯನ್ನು 20 ವರ್ಷದ ಸಹನ ಎಂದು ಗುರುತಿಸಲಾಗಿದೆ. ಇದೀಗ ಈ ಸಾವಿನ ಸುತ್ತ ಅನೇಕ ಅನುಮಾನದ ಹುತ್ತಗಳು ಹುಟ್ಟಿಕೊಂಡಿದೆ.
ಆನೇಕಲ್ನ ಹುಸ್ಕೂರು ಬಳಿಯ ಹಾರೊಹಳ್ಳಿಯಲ್ಲಿ ಘಟನೆ ನಡೆದಿದ್ದು. ಮೃತ ಸಹನ ಅನ್ಯ ಸಮುದಾಯದ ನಿಖಿಲ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಈ ವಿಷಯವನ್ನು ತಿಳಿದ ಯುವತಿ ತಂದೆ ರಾಮಮೂರ್ತಿ ಮಗಳಿಗೆ ತನ್ನ ಅಕ್ಕನ ಮಗನ ಜೊತೆ ಮದುವೆ ಮಾಡಲು ಮುಂದಾಗಿದ್ದನು. ಇದೇ ವಿಚಾರಕ್ಕೆ ಮಗಳನ್ನು ಹುಸ್ಕೂರಿನ ಸ್ನೇಹಿತರ ಮನೆಗೆ ಕರೆದೊಯ್ದು ಪಂಚಾಯಿತಿ ನಡೆಸಿದ್ದರು. ಆದರ ಯುವತಿ ತಾನೂ ಪ್ರೀತಿಸುತ್ತಿದ್ದ ಯುವಕನನ್ನೆ ಮದುವೆಯಾಗುವುದಾಗಿ ಹಠ ಹಿಡಿದಿದ್ದಳು.
ಇದನ್ನೂ ಓದಿ ಪರಂಪರೆ ಮುಂದುವರಿಯಲು ಗಂಡು ಮಗು ಬೇಕೂ: ರಾಮ್ಚರಣ್ಗೆ ಚಿರಂಜೀವಿ ಬೇಡಿಕೆ:
ಪಂಚಾಯಿತಿ ಮುಗಿಸಿಕೊಂಡು ತಂದೆ ಮಗಳು ಬೈಕ್ನಲ್ಲಿ ಊರಿಗೆ ವಾಪಾಸಾಗುವ ವೇಳೆ ಕೆರೆಯ ಏರಿ ಮೇಲಿಂದ ಬೈಕ್ ಸಮೇತ ರಾಮಮೂರ್ತಿ ಕೆರೆಗೆ ಬಿದ್ದಿದ್ದನು. ಸಹನಾ ಈಜು ಬಾರದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಳು. ಆದರೆ ರಾಮಮೂರ್ತಿ ಈಜಿಕೊಂಡು ಬಂದು ಜೀವ ಉಳಿಸಿಕೊಂಡಿದ್ದನು. ನಂತರ ರಾಮಮೂರ್ತಿ ಸೀದಾ ಹೆಬ್ಬಗೋಡಿ ಪೊಲೀಸ್ ಠಾಣೆಗೆ ಬಂದಿದ್ದನು. ಇದರಿಂದ ಅನುಮಾನಗೊಂಡ ಪೊಲೀಸರು ರಾಮಮೂರ್ತಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.